ಕಟಗಿನಹಳ್ಳಿಯಲ್ಲಿ 20 ಜನರ ಮೇಲೆ ನಿಗಾ; ಹೋಮ್ ಕ್ವಾರಂಟೈನ್ ಲ್ಲಿದ್ದವರಿಗೆ ಊಟದ ಕೊರತೆ
Team Udayavani, Mar 28, 2020, 7:19 PM IST
ಗುಳೇದಗುಡ್ಡ: ಕೋವಿಡ್-19 ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಕಾಸರಗೋಡಿನಿಂದ ಬಂದ ತಾಲೂಕಿನ 3-4 ಹಳ್ಳಿಗಳ 20 ಜನರನ್ನು ಕಟಗಿನಹಳ್ಳಿ ಗ್ರಾಮದ ಆಶಾದೀಪ ಸಮಾಜ ಕೇಂದ್ರ ಇರಿಸಿ, ಅವರ ಮೇಲೆ ತಾಲೂಕು ಆಡಳಿತದಿಂದ ನಿಗಾವಹಿಸಲಾಗಿದೆ.
ಈ 20 ಜನರು ಕಾಸರಗೋಡು ಸೇರಿದಂತೆ ಇನ್ನಿತರ ಪ್ರದೇಶಗಳಿಗೆ ಉದ್ಯೋಗ ಅರಸಿ ಗುಳೇ ಹೋಗಿದ್ದರು, ಅವರೆಲ್ಲರೂ ಶುಕ್ರವಾರ ಮಧ್ಯಾಹ್ನದ ಸುಮಾರಿಗೆ ತಮ್ಮ ತಮ್ಮ ಗ್ರಾಮಗಳಿಗೆ ಮರಳಿದ್ದರು, ಆದರೆ ಆಯಾ ಗ್ರಾಮಗಳ ಜನರು ನೀವೆಲ್ಲರೂ ವೈದ್ಯರಿಂದ ಪರೀಕ್ಷಿಸಿಕೊಂಡು ಬನ್ನಿ ಆಗಲೇ ಗ್ರಾಮದೊಳಗೆ ಸೇರಿಸಿಕೊಳ್ಳುತ್ತೇವೆ ಎಂದಿದ್ದರು.
ಕಟಗಿನಹಳ್ಳಿ ಗ್ರಾಮದ 8, ಸಬ್ಬಲಹುಣಸಿಯಲ್ಲಿ 4 ನಾಗರಾಳದಲ್ಲಿ 2, ಲಾಯದಗುಂದಿಯಲ್ಲಿ 2, ಜಾಲಿಹಾಳದ 2 ಒಟ್ಟು 20 ಜನರನ್ನು ಬಾದಾಮಿಯಲ್ಲಿ ಹಾಗೂ ಗುಳೇದಗುಡ್ಡದ ಸರಕಾರಿ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಅವರೆಲ್ಲರನ್ನು ಸದ್ಯ ಕಟಗಿನಹಳ್ಳಿಯ ಆಶಾದೀಪ ಶಾಲೆಯಲ್ಲಿ ಇರಿಸಿ ನಿಗಾವಹಿಸಲಾಗಿದೆ.
ಆಕ್ರೋಶ: ಕಾಸರಗೋಡಿನಿಂದ ಬಂದ ನಮ್ಮನ್ನು ಅಧಿಕಾರಿಗಳು ಆಶಾದೀಪ ಸಮಾಜ ಕೇಂದ್ರದಲ್ಲಿರಿಸಿದ್ದಾರೆ. ಆದರೆ ನಮಗೆ ಸರಿಯಾದ ಸೌಲಭ್ಯ ಕೊಟ್ಟಿಲ್ಲ. ನಮಗೆ ಊಟ ಕೊಡುವವರು ಇಲ್ಲ ಎಂದು ಹೋಮ್ ಕ್ವಾರೈಂಟೆನಲ್ಲಿದ್ದ 20 ಜನರು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮನ್ನು ಶುಕ್ರವಾರ ಸಂಜೆಯಯೇ ಇಲ್ಲಿಗೆ ಕರೆತಂದಿದ್ದಾರೆ. ಆದರೆ ನಮಗೆ ಸರಿಯಾದ ಊಟದ ವ್ಯವಸ್ಥೆ ಮಾಡಿಲ್ಲ. ಅಲ್ಲಿಂದ ಊಟವಿಲ್ಲದೇ ಬಂದಿದ್ದೇವೆ. ನಮ್ಮನ್ನು ಅನುಮಾನದಿಂದ ನೋಡುತ್ತಿದ್ದಾರೆ. ನಾವೇನು ಕಳ್ಳತನ ಮಾಡಿದ್ದೇವಾ? ನಮ್ಮ ಮೇಲೆ ಏಕೆ ರೀತಿ ನಡೆದುಕೊಳ್ಳುತ್ತಿದ್ದೀರಿ ಎಂದು 20 ಜನರು ಬಹಳ ನೋವಿನಿಂದ ಬೇಸರ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ
Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು
ವಿಳಾಸ ಕೇಳುವ ನೆಪದಲ್ಲಿ ವ್ಯಕ್ತಿಯ ಕೊರಳಲ್ಲಿದ್ದ ಚಿನ್ನದ ಚೈನ್ ಕದ್ದ ಅಪರಿಚಿತ ವ್ಯಕ್ತಿ
Mudhol: ಬಸ್ ಗೆ ಡಿಕ್ಕಿ ಹೊಡೆದ ಬೈಕ್… ಸವಾರರಿಗೆ ಗಂಭೀರ ಗಾಯ
MUST WATCH
ಹೊಸ ಸೇರ್ಪಡೆ
Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
Hunsur: ಬಸ್ ಡಿಕ್ಕಿಯಾಗಿ ಪಾದಾಚಾರಿ ಸಾವು
Upendra: ʼಯುಐʼಗೆ ಸ್ಯಾಂಡಲ್‌ವುಡ್ ಸಾಥ್; ಉಪೇಂದ್ರ ಚಿತ್ರ ನೋಡಲು ಕಾತುರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.