ಕೇದಾರನಾಥ ಶುಗರ್ ; ಕಬ್ಬಿನ ಬಾಕಿ ಕೊಡಲು ಒತ್ತಾಯ
Team Udayavani, Oct 10, 2020, 4:03 PM IST
ಬಾಗಲಕೋಟೆ: ಜಿಲ್ಲೆಯ ಬಾದಾಮಿ ತಾಲೂಕಿನ ಕೆರಕಲಮಟ್ಟಿಯ ಕೇದಾರನಾಥ ಶುಗರ್ ಕಳೆದ 2011ರಲ್ಲಿ ಸ್ಥಗಿತಗೊಂಡಿದ್ದು, ಈವರೆಗೆ ಕಬ್ಬು ಪೂರೈಸಿದ ರೈತರ ಬಾಕಿ ನೀಡಿಲ್ಲ. ಕೂಡಲೇ ರೈತರ ಬಾಕಿ ಹಣ ಕೊಡಿಸುವಂತೆ ಒತ್ತಾಯಿಸಿ ಜಿಲ್ಲೆಯ ರೈತರು
ಶುಕ್ರವಾರ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಜಿ.ಪಂ. ಉಪಾಧ್ಯಕ್ಷರೂ ಆಗಿರುವ ರೈತ ಮುಖಂಡ ಮುತ್ತಪ್ಪ
ಕೋಮಾರ ಮಾತನಾಡಿ, ಕೇದಾರನಾಥ ಶುಗರ್ಸ್ ಮತ್ತು ಅಗ್ರೋ ಪ್ರೊಡಕ್ಟ್ ಲಿ. ಕಾರ್ಖಾನೆಗೆ ಕಳೆದ 2010-11ನೇ ಸಾಲಿನಲ್ಲಿ ರೈತರು ಕಬ್ಬು ಪೂರೈಸಿದ್ದರು. ಸುಮಾರು 2 ಸಾವಿರ ರೈತರಿಗೆ 14 ಕೋಟಿ ಬಾಕಿ ಕೊಡಬೇಕಿದೆ. ಅಲ್ಲದೇ 2 ಕೋಟಿ ರೂ. ಸ್ವಯಂ ಕಬ್ಬು ಕಡಿದು ಕಳುಹಿಸಿದ ರೈತರಿಗೆ ಕೊಡಬೇಕಿದೆ. ಕಬ್ಬು ಸಾಗಾಣಿಕೆ ಬಿಲ್‌ಗಳನ್ನು ಟ್ರ್ಯಾಕ್ಟರ್ ಮಾಲಿಕರೂ ನೀಡಬೇಕಿದೆ. ಆದರೆ, ಕಾರ್ಖಾನೆ 2011ರಲ್ಲಿ ಸ್ಥಗಿತಗೊಂಡಿದ್ದು, ಕಾರ್ಖಾನೆ ಆಡಳಿತ ಮಂಡಳಿ ನಿರ್ಲಕ್ಷ್ಯದಿಂದ ರೈತರು ತೀವ್ರ ಸಮಸ್ಯೆ ಅನುಭವಿಸಿದ್ದಾರೆ.
ಇದನ್ನೂ ಓದಿ:‘ಬ್ರೇಕ್ ದಿ ಬಿಯರ್ಡ್’ ಚಾಲೆಂಜ್ ಸ್ವೀಕರಿಸಿದ ಕೃನಾಲ್ ಪಾಂಡ್ಯ, ಡು ಪ್ಲೆಸಿಸ್
ಈ ಕುರಿತು 2011ರಿಂದ ನಿರಂತರ ಪ್ರತಿಭಟನೆ ನಡೆಸುತ್ತಿದ್ದು, ರೈತರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ 2011ರಲ್ಲಿ ಕಾರ್ಖಾನೆ ರೈತರಿಗೆ ಬಾಕಿ ಕೊಡಬೇಕಿದ್ದ ಹಿನ್ನೆಲೆಯಲ್ಲಿ ಅಂದಿನ ಬಾದಾಮಿ ತಹಶಿಲ್ದಾರರು, ಸಕ್ಕರೆ ದಾಸ್ತಾನ ಹರಾಜು ಹಾಕಿ ರೈತರ ಬಾಕಿ ಕೊಡಲು ಮುಂದಾಗಿದ್ದರು. ಆದರೆ, ಬ್ಯಾಂಕಿನವರು ಇದಕ್ಕೆ ತಡೆಯಾಜ್ಞೆ ತಂದಿದ್ದರಿಂದ
ರೈತರಿಗೆ ಬಾಕಿ ಕೊಡಲು ಆಗಲಿಲ್ಲ. ಕಳೆದ ವಾರ ಈಗಿನ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಸಮಸ್ಯೆ ಹೇಳಿಕೊಂಡರೆ ಇಷ್ಟುದಿನ
ಮಲಗಿದ್ದಾರಾ ಎಂದು ಕೇಳಿದ್ದಾರೆ ಎಂದು ಆರೋಪಿಸಿದರು.
ಕೇದಾರನಾಥ ಶುಗರ್ಸ್ ನಿಂದ ಕಬ್ಬು ಪೂರೈಕೆದಾರರು, ಟ್ರ್ಯಾಕ್ಟರ್ ಮಾಲಿಕರು ಹೀಗೆ ಹಲವರಿಗೆ ಬಾಕಿ ಕೊಡಬೇಕಿದೆ.
ಆದರೆ, ಇದೀಗ ಮುರುಗೇಶ ನಿರಾಣಿ ಅವರು ಈ ಕಾರ್ಖಾನೆ ಪುನಾರಂಭಿಸಿದ್ದಾರೆ. ಈ ವೇಳೆ ರೈತರನ್ನು ಪರಿಗಣಿಸಿಲ್ಲ. ಬಾಕಿಯೂ ಕೊಟ್ಟಿಲ್ಲ. ರೈತರ ಬಾಕಿ ತಕ್ಷಣ ಕೊಡಿಸಬೇಕು. ಇಲ್ಲದಿದ್ದರೆ ಅ. 12ರಿಂದ ಕಾರ್ಖಾನೆಯ ಎದುರು ಅನಿರ್ದಿಷ್ಟ ಉಪವಾಸ
ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ರೈತ ಮುಖಂಡರಾದ ಈರಪ್ಪ ಹಂಚಿನಾಳ, ಹುಸೇನ ಯಕ್ಕುಂಡಿ, ತುಕಾರಾಮ ಮ್ಯಾಗಿನಮನಿ, ರಾಮಚಂದ್ರ ಶೇರಖಾನೆ ಮುಂತಾದವರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mudhol: ಎರಡೂ ಬಣಗಳಿಂದ ಪ್ರತಿಭಟನೆ ಬಿಸಿ; ಸ್ಥಳದಲ್ಲೇ ಬೀಡುಬಿಟ್ಟಿರುವ ಎಸ್ಪಿ; ಹೈ ಅಲರ್ಟ್
Ration Card: ಅನರ್ಹರಿಗೆ ಬಿಪಿಎಲ್ ಕಾರ್ಡ್ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ
Bagalakote: ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದು: ಸಿಎಂ ಸಿದ್ದರಾಮಯ್ಯ
ಕಾಡಂಚಿನ ರೈತರ ಅರಣ್ಯರೋದನ; ಬೇರೆಯವರ ಜಮೀನಿನಲ್ಲಿ ದುಡಿಯಬೇಕಾದ ಸ್ಥಿತಿ
ಕೇವಲ 12 ರೂ.ಗೆ ಬಿಸಿ ಜುನುಕಾ ರೊಟ್ಟಿ ಊಟ:!ಶಿಕ್ಷಕ ಬಸವರಾಜ ಜಾಲೋಜಿ ನಿಸ್ವಾರ್ಥ ಸೇವೆ
MUST WATCH
ಹೊಸ ಸೇರ್ಪಡೆ
Nirmala Sitharaman: ಬ್ಯಾಂಕುಗಳು ಬಡ್ಡಿದರ ಕೈಗೆಟಕುವಂತೆ ಕ್ರಮ ಕೈಗೊಳ್ಳಬೇಕು
Akhilesh Yadav: ಉ.ಪ್ರ.ದಲ್ಲಿ ಬಾಬಾ ಸಾಹೇಬ್ ಮತ್ತು ಬಾಬಾ ನಡುವಿನ ಹೋರಾಟ
Supreme Court: ನೇತಾಜಿ ಸಾವಿನ ರಹಸ್ಯ ತನಿಖೆ ನಡೆಸಲು ಕೋರಿದ್ದ ಅರ್ಜಿ ವಜಾ
Ullala Resort: ಮೃತ ಯುವತಿಯ ಕುಟುಂಬಸ್ಥರ ಆಕ್ರಂದನ
RSS ವಿರುದ್ಧ ಹೇಳಿಕೆ ಪ್ರಕರಣ: ಗೀತ ರಚನೆಕಾರ ಜಾವೇದ್ ಅಖ್ತರ್ ಖುಲಾಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.