ಇನ್ಫೋಸಿಸ್‌ನಿಂದ ಕಿಟ್ ವಿತರಣೆ
Team Udayavani, Apr 21, 2020, 1:53 PM IST
ಜಮಖಂಡಿ: ನಗರದಲ್ಲಿ ವಾಸಿಸುವ ಬಡಕುಟುಂಬಗಳಿಗೆ ಆಹಾರ ಪದಾರ್ಥಗಳ ಕಿಟ್‌ಗಳನ್ನು ಹಂಚಲಾಗುತ್ತಿದೆ. ಈಗಾಗಲೇ 250ಕ್ಕೂ ಹೆಚ್ಚು ಕಿಟ್ ವಿತರಿಸಲಾಗಿದೆ ಎಂದು ಮಾತೋಶ್ರೀ ಶಾರದಾ ಸೇವಾ ಸಮಿತಿ ಕಾರ್ಯದರ್ಶಿ ನಾರಾಯಣ ಕುಲಕರ್ಣಿ ಹೇಳಿದರು.
ನಗರದ ಕುಂಚನೂರ ರಸ್ತೆಯಲ್ಲಿ ಸೋಮವಾರ ಬೆಂಗಳೂರಿನ ಸುಧಾಮೂರ್ತಿ ಅವರ ಇನ್ಫೋಸಿಸ್ ಫೌಂಡೇಶನ್ ವತಿಯಿಂದ ಲಾಕ್ ಡೌನ್‌ನಿಂದ ಸಂಕಷ್ಟಕ್ಕೊಳಗಾದ ಬಡಕುಟುಂಬಗಳಿಗೆ ಕಿಟ್ ತರಿಸಿ ಅವರು ಮಾತನಾಡಿದರು. ಬಡತನ ರೇಖೆಯಲ್ಲಿರುವ ನಗರದ ಎಲ್ಲ ಕುಟುಂಬಗಳಿಗೆ ಕಿಟ್ ನೀಡಲಾಗುತ್ತಿದೆ. ಶುದ್ಧೀಕರಿಸಿದ ಆಹಾರ ಪದಾರ್ಥಗಳನ್ನು ಕಡುಬಡವರಿಗಾಗಿ ಮಾತ್ರ ವಿತರಣೆ ಮಾಡಲಾಗುತ್ತಿದ್ದು, ಲಾಕ್‌ಡೌನ್ ಮುಗಿಯುವರೆಗೆ ವಿತರಣೆ ನಡೆಯಲಿದೆ ಎಂದರು.
ಕಿಟ್‌ನಲ್ಲಿ ಏನಿದೆ ?: ನಗರದ ಆಟೋ ಚಾಲಕರಿಗೆ, ಬಟ್ಟೆ-ಬಾಂಡೆ ತೊಳೆಯುವ ಕಾರ್ಮಿಕರಿಗೆ, ಇಟ್ಟಂಗಿ ಭಟ್ಟಿ ಕಾರ್ಮಿಕರಿಗೆ, ಕೂಲಿ ಕಾರ್ಮಿಕರಿಗೆ, ಹಮಾಲರಿಗೆ, ನಿರ್ಗತಿಕರಿಗೆ, ಗೌಂಡಿ ಕಾರ್ಮಿಕರಿಗೆ, ಪಡಿತರ ಚೀಟಿ ಇಲ್ಲದ ಬಡಕುಟುಂಬಗಳಿಗೆ ಜೀವನ ನಿರ್ವಹಣೆ ಅಗತ್ಯವಾದ ಜೋಳ, ಗೋ , ತೊಗರಿಬೆಳೆ, ಸಕ್ಕರೆ, ಬೆಲ್ಲ, ಟೂತ್ ಫೆಸ್ಟ್, ಖಾರಪುಡಿ, ಟೂತ್‌ಬ್ರೆಸ್, ಅವಲಕ್ಕಿ, ಉಪ್ಪು, ಈರುಳ್ಳಿ, ಬಟಾಟೆ ವಸ್ತುಗಳ ಸಹಿತ ಅಗತ್ಯವಾದ ಮಾಸ್ಕ್ಗಳು ಕಿಟ್‌ದಲ್ಲಿವೆ. ಕಿಟ್‌ನಲ್ಲಿ ಕನಿಷ್ಟ 15 ದಿನಗಳಗೆ ಲಭ್ಯವಾಗುವಷ್ಟು ಆಹಾರ ಪದಾರ್ಥಗಳ ಸೌಲಭ್ಯಗಳನ್ನು ಕಿಟ್ ಹೊಂದಿದೆ. ನಗರದ ಕುಂಚನೂರ ರಸ್ತೆಯಲ್ಲಿರುವ ಎನ್.ಆರ್.ಕುಲಕರ್ಣಿ ಅವರ ಮನೆಯಲ್ಲಿ ಪ್ರತಿನಿತ್ಯ ಕಿಟ್‌ಗಳನ್ನು ಸಿದ್ಧಗೊಳಿಸಲಾಗುತ್ತಿದೆ. ಮಾತೋಶ್ರೀ ಶಾರದಾ ಸೇವಾ ಸಮಿತಿ ಕಾರ್ಯದರ್ಶಿ ನಾರಾಯಣ ಕುಲಕರ್ಣಿ, ವನಜಾಕ್ಷಿ, ಶ್ರೀನಿಧಿ, ಶ್ರೇಯಾ ಕಿಟ್‌ಗಳನ್ನು ಸಿದ್ಧಗೊಳಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ
Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು
ವಿಳಾಸ ಕೇಳುವ ನೆಪದಲ್ಲಿ ವ್ಯಕ್ತಿಯ ಕೊರಳಲ್ಲಿದ್ದ ಚಿನ್ನದ ಚೈನ್ ಕದ್ದ ಅಪರಿಚಿತ ವ್ಯಕ್ತಿ
Mudhol: ಬಸ್ ಗೆ ಡಿಕ್ಕಿ ಹೊಡೆದ ಬೈಕ್… ಸವಾರರಿಗೆ ಗಂಭೀರ ಗಾಯ
MUST WATCH
ಹೊಸ ಸೇರ್ಪಡೆ
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ, ಇಲ್ಲಿದೆ ಮಾಹಿತಿ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.