ಕೃಷ್ಣಾ ನದಿ ಪ್ರವಾಹ : ಜನರಿಲ್ಲದೆ ಬಿಕೋ ಎನ್ನುತ್ತಿರುವ ಅಸ್ಕಿ ಗ್ರಾಮ
Team Udayavani, Aug 1, 2021, 9:29 PM IST
ಬನಹಟ್ಟಿ: ಕಳೆದ ಹಲವಾರು ದಿನಗಳಿಂದ ರಬಕವಿ-ಬನಹಟ್ಟಿ ತಾಲೂಕಿನ ಹಲವಾರು ಗ್ರಾಮಗಳಲ್ಲಿ ಕೃಷ್ಣಾ ನದಿ ನೀರು ಪ್ರವಾಹ ಹೆಚ್ಚಾಗಿ ಪ್ರವಾಹ ಪ್ರಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಹಿಪ್ಪರಗಿ ಜಲಾಶಯಕ್ಕೆ 2 ಲಕ್ಷ 80 ಸಾವಿರ ಕ್ಯೂಸೆಕ್ಸ್ ನೀರು ಹರಿದು ಬರುತ್ತಿರುವುದರಿಂದ ಕೃಷ್ಣಾ ನದಿ ನೀರು ಇಳಿಮುಖವಾಗಿದೆ.
ಭಾನುವಾರ ಉದಯವಾಣಿ ಪತ್ರಿಕೆ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಅಸ್ಕಿ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕೃಷ್ಣಾ ನದಿಯಲ್ಲಿ ನೀರು ಕ್ರಮೇಣವಾಗಿ ಇಳಿಮುಖವಾಗುತ್ತಿದ್ದಂತೆ ನಾಲ್ಕೈದು ಕುಟುಂಬಗಳ ಸದಸ್ಯರು ಗ್ರಾಮಕ್ಕೆ ಮರಳಿ ಮನೆಗಳನ್ನು ಸ್ವಚ್ಛಗೊಳಿಸುತ್ತಿರುವುದು ಕಂಡು ಬಂತು.
ಈ ಸಂದರ್ಭದಲ್ಲಿ ಪತ್ರಿಕೆಯ ಜೊತೆಗೆ ಮಾತನಾಡಿದ ಜನರು, ನಮ್ಮ ಗೋಳ ಕೇಳಾವ್ರು ಯಾರು ಇಲ್ಲರಿ, ಪ್ರವಾಹದ ಸಂದರ್ಭದಲ್ಲಿ ಮನ್ಯಾಗಿನು ಸಾಮಾನು, ಮಕ್ಕಳು, ಕಾಳು ಕಡಿಗಳನ್ನು ಮತ್ತು ಜಾನುವಾರುಗಳನ್ನು ಕಟ್ಟಿಕೊಂಡು ಗಂಜಿ ಕೇಂದ್ರದಾಗ ಇರಬೇಕ್ರಿ. ನಮಗ ಜೀವನ ಸಾಕಾಗೇತ್ರಿ ಎನ್ನುತ್ತಾರೆ ಇಲ್ಲಿಯ ಜನರು.
ತಾಲ್ಲೂಕಿನ ಅಸ್ಕಿ ಗ್ರಾಮದಿಂದ ಕೂಗಳತೆಯಲ್ಲಿರುವ ಕೃಷ್ಣಾ ನದಿಯ ಪ್ರವಾಹದ ಸಂದರ್ಭದಲ್ಲಿ ಇಲ್ಲಿಯ 520 ಕುಟುಂಬಗಳ ಅಂದಾಜು ೧೮೦೦ ಜನರು ಪ್ರವಾಹದ ಭೀತಿಯಲ್ಲಿರುತ್ತಾರೆ.
ಇದನ್ನೂ ಓದಿ: ಆ್ಯಕ್ಷನ್ ಸೀನ್ ಶೂಟಿಂಗ್ ವೇಳೆ ಅವಘಡ : ನಟಿ ಶಾನ್ವಿ ಶ್ರೀವಾಸ್ತವ್ ಗೆ ಗಾಯ
ಕೃಷ್ಣಾ ನದಿಗೆ ಪ್ರವಾಹ ಉಂಟಾದ ಕೂಡಲೇ ನದಿ ಈ ಗ್ರಾಮವನ್ನು ಸುತ್ತುವರೆಯುತ್ತದೆ. ಗ್ರಾಮದ ಅನೇಕ ಮನೆಗಳು ನೀರಿನಲ್ಲಿ ನಿಲ್ಲುತ್ತವೆ.
2004 ರಿಂದ ಇಲ್ಲಿಯವರೆಗೆ ಈ ಗ್ರಾಮದ ಜನರು ಶಾಶ್ವತ ನೆಲೆಗಾಗಿ ಹೋರಾಡುತ್ತಿದ್ದಾರೆ. ಆದರೆ ಹಲವಾರು ಸಮಸ್ಯೆಗಳಿಂದಾಗಿ ಈ ಗ್ರಾಮ ಸ್ಥಳಾಂತರವಾಗುತ್ತಿಲ್ಲ. ನಾವು ಕೇಳಿದ ಸ್ಥಳದಲ್ಲಿಯೇ ನಮಗೆ ಜಾಗವನ್ನು ನೀಡಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ. 2009 ರಲ್ಲಿ ಇಲ್ಲಿಯ ಮನೆಗಳಿಗೆ ಪರಿಹಾರ ಧನ ನೀಡಲಾಗಿದೆ. ಆದರೆ ಮನೆಗಳನ್ನು ಕಟ್ಟಿಕೊಳ್ಳಲು ಸ್ಥಳವನ್ನು ನೀಡಿಲ್ಲ.
ನಮಗ ಒಂದು ಶಾಶ್ವತ ಜಾಗಾ ಕೊಡ್ರಿ ಪತ್ರಾಸ ಶೆಡ್ ಮಾಡಿಕೊಂಡು ಇರತಿವ್ರಿ ಎನ್ನುತ್ತಿದ್ದಾರೆ. 2019 ರಲ್ಲಿ ಉಂಟಾದ ಪ್ರವಾಹದ ಸಂದರ್ಭದಲ್ಲಿ ಈ ಗ್ರಾಮದ ಮನೆಗಳು ಒಂಭತ್ತು ದಿನಗಳ ಕಾಲ ಸಂಪೂರ್ಣವಾಗಿ ನೀರಿನಲ್ಲಿ ನಿಂತಿದ್ದವು. ಪ್ರವಾಹಕ್ಕೆ ಮತ್ತೆ ಮನೆಗಳು ಹಾಳಾಗುತ್ತವೆ ಎಂದು ಇಲ್ಲಿಯವರೆಗೂ ಅವುಗಳನ್ನು ರಿಪೇರಿ ಮಾಡಿಕೊಂಡಿಲ್ಲ. ಗೋಡೆಗಳು ಮತ್ತು ಮೇಲ್ಛಾವಣಿಗಳು ಬಿದ್ದ ಮನೆಯಲ್ಲಿಯೇ ಜನರು ವಾಸಿಸುತ್ತಿದ್ದಾರೆ.
– ಕಿರಣ ಶ್ರೀಶೈಲ ಆಳಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bagalkot : ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧ ಮಹೇಶ್ ಮರೆಗೊಂಡ ಅಂತ್ಯಸಂಸ್ಕಾರ
ಪತ್ನಿ ಊರಿನತ್ತ ಪ್ರಯಾಣ ಬೆಳೆಸಿದರೆ… ಸಾವಿನ ಮನೆಯ ಕದ ತಟ್ಟಿದ ಯೋಧ ನಾಗಪ್ಪ ಮರೆಗೊಂಡ
Mahalingpur: ಇಂದು ಮೃತ ಯೋಧ ಮಹೇಶ ಅಂತ್ಯಕ್ರಿಯೆ; ಯೋಧನ ಮನೆಗೆ ಸಚಿವ ತಿಮ್ಮಾಪುರ ಭೇಟಿ
Mudhola: ಸಿಲಿಂಡರ್ ಸ್ಫೋಟ: ಹೊತ್ತಿ ಉರಿದ ಮನೆ
Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Madikeri; ಜಾತ್ರೋತ್ಸವದ ವೇಳೆ ಗುಂಪು ಸಂಘರ್ಷ: ಕಟ್ಟೆಮಾಡು ಗ್ರಾಮದಲ್ಲಿ ನಿಷೇಧಾಜ್ಞೆ
Udupi: ಗೀತಾರ್ಥ ಚಿಂತನೆ-140: ಮಕ್ಕಳಲ್ಲಿ “ಇಗೋ’ ಏರಿಕೆ, ಪಾಲಕರಲ್ಲಿ ಗೌರವ ಇಳಿಕೆ
Kasaragod; ಬಸ್-ಕಾರು ಢಿಕ್ಕಿ: ಇಬ್ಬರ ಸಾವು
South Korea Plane Crash: ಛಿದ್ರಗೊಂಡ ದೇಹಗಳು, ಕೊನೇ ಸಂದೇಶ…
Israel ಪ್ರಧಾನಿ ಬೆಂಜಮಿನ್ ನೆತನ್ಯಾಹುಗೆ ಪ್ರಾಸ್ಟೇಟ್ ಶಸ್ತ್ರಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.