K. S. Eshwarappa: ಬ್ರಿಗೇಡ್ ನಿಂದ ಸರ್ಕಾರಗಳನ್ನು ಜಾಗೃತಗೊಳಿಸೋಣ
Team Udayavani, Oct 18, 2024, 7:39 PM IST
ಮುಧೋಳ : ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳು ಕಳೆದರೂ ಎಲ್ಲ ಸರ್ಕಾರಗಳು ಬಡವರ, ದೀನ ದಲಿತರ, ಹಿಂದುಳಿದವರ, ಶೋಷಿತರ ಅಭಿವೃದ್ದಿ ಮಾಡುತ್ತೇವೆ ಎನ್ನುವ ಭರವಸೆ ನೀಡುತ್ತ ಕಾಲಹರಣ ಮಾಡಿವೆ ಹೊರತು ಇದುವರೆಗೆ ಅಂತಹ ಜನಗಳ ಶ್ರೇಯೋಭಿವೃದ್ದಿ ಸಾಧ್ಯವಾಗಿಲ್ಲ. ಜನಸಮಾನ್ಯರು ಒಟ್ಟಾಗಿ ಸರ್ಕಾರಗಳನ್ನು ಜಾಗೃತಿಗೊಳಿಸುವ ನಿಟ್ಟಿನಲ್ಲಿ ನಮ್ಮ ಬ್ರಿಗೇಡ್ ಕಾರ್ಯನಿರ್ವಹಿಸಲಿವೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.
ತಾಲೂಕಿನ ಬರಗಿ ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ಅನಾವರಣಗೊಳಿಸಿದ ಬಳಿಕ ಮಾತನಾಡಿದ ಅವರು, ನಾವೆಲ್ಲ ಜಾತಿ ಜಾತಿಗಳೆಂದು ಬಡಿದಾಡುತ್ತ ಕುಂತರೆ ಹಿಂದೂ ಸಮಾಜ ಅಭಿವೃದ್ದಿಯಾಗುವುದಿಲ್ಲ. ಜಾತಿ ಮರೆತು ಹಿಂದೂ ಧರ್ಮದ ಶ್ರೇಯೋಭಿವೃದ್ದಿಗೆ ಸಂಘಟನೆ ಮೂಲಕ ಶ್ರಮಿಸೋಣ ಎಂದರು.
ರಾಯಣ್ಣ ಬ್ರಿಗೇಡಗೆ ಯಾವ ಹೆಸರು ಇಡಬೇಕು ಎಂಬುದನ್ನು ನೀವೇಲ್ಲರೂ ಅ.20ರಂದು ಬಾಗಲಕೋಟೆಯ ಸಭೆಗೆ ಬರುವಾಗ ಚರ್ಚಿಸಿಕೊಂಡು ಬರಬೇಕು ಎಂದು ತಿಳಿಸಿದರು.
ಬ್ರಿಗೇಡ್ ನ್ನು ಯಾವಾಗ ಉದ್ಘಾಟನೆ ಮಾಡಬೇಕು ಎಂಬುದನ್ನು ಸ್ವಾಮಿಜಿಗಳು, ಸಾಧು ಸಂತರೊಂದಿಗೆ ಬಾಗಲಕೋಟೆಯಲ್ಲಿನ ಸಭೆಯಲ್ಲಿ ಚರ್ಚೆ ಮಾಡೋಣ ಎಂದರು.
ದಕ್ಷಿಣ ಕರ್ನಾಟಕ ಭಾಗದಲ್ಲಿನ ಮಾದರಿಯಲ್ಲಿ ಉತ್ತರ ಕರ್ನಾಟಕದಲ್ಲಿನ ಮಠಗಳನ್ನೂ ಬೆಳೆಸೋಣ. ಹಿಂದೂ ಸಮಾಜವನ್ನು ಉಳಿಸುವ ಕೆಲಸ ನಮ್ಮ ಸಂಘಟನೆಯಿಂದ ಮಾಡೋಣ. ನಮ್ಮ ಬ್ರಿಗೇಡ್ ಹೆಸರಿನಿಂದ ಹಿಂದೂ ಧರ್ಮ ರಕ್ಷಣೆಯಾಗಬೇಕು ಎಂದರು.
ಯಾವುದೇ ಕಾರಣಕ್ಕೆ ಇದರಲ್ಲಿ ರಾಜಕೀಯ ಬರಬಾರದು. ಬ್ರಿಗೇಡ್ ನಲ್ಲಿ ಯಾವುದೇ ಜಾತಿ ತಾರತಮ್ಯ ಇರುವುದಿಲ್ಲ. ಎಲ್ಲ ಜಾತಿಯವರು ಇದರಲ್ಲಿ ಭಾಗವಹಿಸಬಹುದು ಎಂದು ತಿಳಿಸಿದರು.
ಕರ್ನಾಟಕದಲ್ಲಿ ಸಂಘಟನೆ ಬೆಳೆವಣಿಗೆಗೆ ನಿಮ್ಮೆಲ್ಲರ ಸಹಾಯ ಸಹಕಾರ ಬಹಳ ಮುಖ್ಯವಾಗಿರುತ್ತದೆ ಎಂದು ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.