ಸಂಗಮನಾಥ, ಬಸವಣ್ಣ ಐಕ್ಯಸ್ಥಳ ಇಂದಿನಿಂದ ದರ್ಶನಕ್ಕೆಅವಕಾಶ
Team Udayavani, Jul 5, 2021, 8:02 PM IST
ಕೂಡಲಸಂಗಮ: 76 ದಿನಗಳಿಂದ ಸ್ಥಗಿತಗೊಂಡಿದ್ದ ಕೂಡಲಸಂಗಮ ಅಭಿವೃದ್ಧಿ ಮಂಡಳಿ ವ್ಯಾಪ್ತಿಯ ದೇವಾಲಯಗಳು, ಸ್ಮಾರಕಗಳು ಜುಲೈ 5ರಿಂದ ಬೆಳಗ್ಗೆ 6ರಿಂದ 12ರವರೆಗೆ, ಮಧ್ಯಾಹ್ನ 3ರಿಂದ 6ರವರೆಗೆ ಭಕ್ತರ ದರ್ಶನಕ್ಕೆ ಮುಕ್ತವಾಗಲಿವೆ.
ಕೂಡಲಸಂಗಮದ ಸಂಗಮೇಶ್ವರ ದೇವಾಲಯ, ಬಸವಣ್ಣನ ಐಕ್ಯ ಮಂಟಪ, ಚಿಕ್ಕಸಂಗಮದ ಸಂಗಮೇಶ್ವರ ದೇವಾಲಯ, ವಿಜಯಪುರ ಜಿಲ್ಲೆ ಬಸವನಬಾಗೇವಾಡಿಯ ಬಸವೇಶ್ವರ ದೇವಾಲಯ, ಬಸವ ಸ್ಮಾರಕ, ಇಂಗಳೇಶ್ವರದ ಮಾದಲಾಂಬಿಕೆ ಸ್ಮಾರಕ, ಮುದ್ದೇಬಿಹಾಳ ತಾಲೂಕಿನ ತಂಗಡಗಿಯ ನೀಲಾಂಬಿಕೆ ಐಕ್ಯಸ್ಥಳ, ಬೆಳಗಾವಿ ಜಿಲ್ಲೆ ಎಂಕೆ ಹುಬ್ಬಳ್ಳಿಯ ಗಂಗಾಬಿಕೆ ಐಕ್ಯಸ್ಥಳಗಳು ಭಕ್ತರ ದರ್ಶನಕ್ಕೆ ಮುಕ್ತವಾಗಲಿವೆ. ಕೊರೊನಾ ಹರಡುವಿಕೆ ಭೀತಿಯಿಂದ ಏಪ್ರಿಲ್ 19 ರಿಂದ ದೇವಾಲಯ, ಸ್ಮಾರಕಗಳನ್ನು ಬಂದ್ ಮಾಡಿ ಭಕ್ತರ ಪ್ರವೇಶ ನಿಷೇಧಿಸಿತ್ತು.
ಸರ್ಕಾರದ ಸೂಚನೆಯಂತೆ ಸೋಮವಾರದಿಂದ ದೇವಾಲಯಗಳ ದರ್ಶನಕ್ಕೆ ಅವಕಾಶ ಕಲ್ಪಿಸಿರುವುದರಿಂದ ಮಂಡಳಿಯ ಸಿಬ್ಬಂದಿ ರವಿವಾರ ದೇವಾಲಯ ಆವರಣವನ್ನು ಕಸ ಗುಡಿಸಿ, ನೀರು ಹಾಕಿ ಸ್ವತ್ಛಗೊಳಿಸುವ ಕಾರ್ಯದಲ್ಲಿ ತೊಡಗಿದ್ದರು. ದೇವಾಲಯ ಹೊರ ಆವರಣದ ಪ್ರವೇಶ ದ್ವಾರದಲ್ಲಿ ಒಳ ಹೋಗಲು, ಹೊರಗೆ ಬರಲು ಪ್ರತ್ಯೇಕ ಮಾರ್ಗ ನಿರ್ಮಿಸಿದ್ದು, ಪ್ರತಿ 6 ಮೀಟರ್ ಗೆ ಒಂದರಂತೆ ಬಾಕ್ಸ್ ಹಾಕಿದ್ದಾರೆ.
ಕೈ ತೊಳೆಯಲು 6 ಮೀಟರ್‌ಗೆ ಒಂದರಂತೆ ನಳ ಅಳವಡಿಸಿದ್ದು, ಮುಖ್ಯ ದ್ವಾರದಲ್ಲಿ ಪ್ರತಿಯೊಬ್ಬರ ದೇಹದ ಉಷ್ಣತೆ ಪರೀಕ್ಷಿಸಿ ಒಳಗೆ ಬಿಡಲಾಗುತ್ತದೆ. ದರ್ಶನ ಪಡೆಯಲು ಸ್ಯಾನಿಟೈಸರ್ ಹಾಕಿಸಿಕೊಳ್ಳುವುದು, ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ದೇವಾಲಯದಲ್ಲಿ ದೇವರ ದರ್ಶನಕ್ಕೆ ಮಾತ್ರ ಅವಕಾಶ ಇದೆ. ಪೂಜಾ ಕಾರ್ಯ, ಅಭಿಷೇಕ, ಧಾರ್ಮಿಕ ಕಾರ್ಯಗಳಿಗೆ ಅವಕಾಶವಿಲ್ಲ. ಮಂಡಳಿಯಿಂದ ನಿತ್ಯ ನಡೆಯುವ ದಾಸೋಹ ಇರಲ್ಲ. ನದಿಯ ದಡದ ಪ್ರವೇಶ ನಿಷೇಧಿಸಿದ್ದು, ನದಿಯ ದಡದಲ್ಲಿ ಇಬ್ಬರು ಭದ್ರತಾ ಸಿಬ್ಬಂದಿ ನಿಯೋಜಿಸುತ್ತೇವೆಂದು ಕೂಡಲಸಂಗಮ ಅಭಿವೃದ್ಧಿ ಮಂಡಳಿ ಆಯುಕ್ತ ರಘು ಎ.ಇ ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.