Kulgeri Cross; ನಾಡಿನಲ್ಲಿಯೇ ಪ್ರಥಮ…ತಾಯಿ ಭುವನೇಶ್ವರಿ ರಥೋತ್ಸವ
ಕರ್ನಾಟಕದ ತುಂಬೆಲ್ಲ ಅನ್ಯಭಾಷಿಕರ ಹಾವಳಿ ಹೆಚ್ಚಾಗುತ್ತಿದೆ...
Team Udayavani, Nov 1, 2024, 6:30 PM IST
ಕುಳಗೇರಿ ಕ್ರಾಸ್ (ಬಾಗಲಕೋಟೆ ): ನಾವೆಲ್ಲರೂ ಇಂದು ಕನ್ನಡಕ್ಕಾಗಿ ಬದುಕಬೇಕು, ಕನ್ನಡವನ್ನು ಕಣ್ಣಿನಂತೆ ಕಾಪಾಡಬೇಕಿರುವುದು ಪ್ರತಿಯೊಬ್ಬ ಕನ್ನಡಿಗರ ಆದ್ಯ ಕರ್ತವ್ಯವಾಗಿದೆ. ಕನ್ನಡ ನಾಡಿನಲ್ಲಿಯೇ ಕನ್ನಡ ಭಾಷೆಯನ್ನು ಹುಡುಕುವಂತಹ ಸಂದಿಗ್ಧ ಪರಸ್ಥಿತಿಯಲ್ಲಿ ನಾವಿದ್ದೇವೆ ಇದು ದುರ್ದೈವದ ಸಂಗತಿ ಎಂದು ಧಾರವಾಡದ ಹಿರಿಯ ವಿದ್ವಾಂಸರಾದ ಪ್ರೋ.ಚಂದ್ರಮೌಳಿ ನಾಯ್ಕರ ಅವರು ಕಳವಳ ವ್ಯಕ್ತಪಡಿಸಿದರು.
ಭೈರನಹಟ್ಟಿ ಶ್ರೀದೊರೆಸ್ವಾಮಿ ವಿರಕ್ತಮಠದ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಶುಕ್ರವಾರ (ನ1ರಂದು) ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವದ ನಿಮಿತ್ಯ ತಾಯಿ ಭುವನೇಶ್ವರಿಯ ಕನ್ನಡ ರಥಕ್ಕೆ ಚಾಲನೆ ನೀಡಿ ಮಾತನಾಡಿದರು.
ಇವತ್ತಿನ ಯುವಕರು ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವದಿಂದ ಅರ್ಧಂಬರ್ದ ಇಂಗ್ಲಿಷ್ ಮಾತನಾಡುವ ಮೂಲಕ ನಾನೊಬ್ಬ ವಿದ್ಯಾವಂತ ಎಂದು ತೋರಿಸಿಕೊಳ್ಳುವ ಬರದಲ್ಲಿ ತಮ್ಮತನವನ್ನು ಮರೆಯುತ್ತಿದ್ದಾರೆ. ನಮ್ಮ ನಿರ್ಲಕ್ಷ್ಯತನದಿಂದ ಕರ್ನಾಟಕದ ತುಂಬೆಲ್ಲ ಅನ್ಯಭಾಷಿಕರ ಹಾವಳಿ ಹೆಚ್ಚಾಗುತ್ತಿದೆ ಜತೆಗೆ ಕನ್ನಡಿಗರಿಗೆ ನೀರುದ್ಯೋಗ ಸಮಸ್ಯೆಯೂ ಕಾಡುತ್ತಿದೆ. ಕನ್ನಡ ನಮಗೆ ಅನ್ನ ನೀಡುವ ಭಾಷೆ ಹೀಗಾಗಿ ವಿಶೇಷವಾಗಿ ಯುವ ಸಮುದಾಯ ಕನ್ನಡವನ್ನು ಉಳಿಸಿ ಬೆಳೆಸುವತ್ತ ಗಮನಹರಿಸಬೇಕಾಗಿದೆ ಎಂದು ಕರೆಕೊಟ್ಟರು.
ಧ್ವಜಾರೋಹಣ ನೆರವೇರಿಸಿದ ನರಗುಂದ ಸಿಂಹ ಕೂಟದ ಅಧ್ಯಕ್ಷ ಉಮೇಶಗೌಡ ಪಾಟೀಲ ಅವರು ಮಾತನಾಡಿ ಕನ್ನಡ ಬಾಷೆಗೆ 2500 ವರ್ಷಗಳ ಇತಿಹಾಸವನ್ನು ಹೊಂದಿದೆ, ಅದು ಈಗಾಗಲೆ ನಮ್ಮ ಹಿರಿಯರಿಂದ ಸಾಕಷ್ಟು ಬೆಳೆದಿದೆ ಅದನ್ನು ಉಳಿಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಕನ್ನಡದ ಅವನತಿಗೆ ಕನ್ನಡಿಗರೆ ಕಾರಣಿಕರ್ತರು ಅನ್ಯ ಭಾಷಿಕರಿಗೆ ಅವರ ಬಾಷೆಯಲ್ಲಿಯೇ ಮಾತನಾಡಿ ಅವರನ್ನು ಸಂತೃಪ್ತಗೊಳಿಸಿ ನಮ್ಮ ಭಾಷೆಯನ್ನು ಕಡೆಗನಿಸುತ್ತಿರುವುದೇ ಇದಕ್ಕೆ ಬಹುಮುಖ್ಯಕಾರಣ. ಕರುನಾಡಿನಲ್ಲಿ ಕನ್ನಡಿಗನೆ ಸಾರ್ವಭೌಮ ಕನ್ನಡಿಗರಾದ ನಾವು ಕನ್ನಡ ಭಾಷೆಯನ್ನು ಮುಖ್ಯದ್ವಾರವನ್ನಾಗಿರಿಸಿ ಉಳಿದ ಭಾಷೆಗಳನ್ನು ಕಿಕಿಗಳಂತೆ ನಿರ್ಮಿಸಬೇಕು ಅಂದಾಗ ಮಾತ್ರ ಕನ್ನಡ ಉಳಿಸಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಹಿರಿಯರಾದ ಚಂದ್ರು ದಂಡಿನ, ಮಂಜು ಮೆಣಸಗಿ, ಗ್ರಾ ಪಂ ಅಧ್ಯಕ್ಷ ಜ್ಞಾನದೇವ ಮನೇನಕೊಪ್ಪ, ನಾಗಪ್ಪ ಬೆನ್ನೂರ, ಪ್ರಕಾಶ ಅಣ್ಣಿಗೇರಿ, ಗ್ರಾ. ಪಂ ಪಿಡಿಓ ಎಸ್ ಎಮ್ ಹರನಟ್ಟಿ, ಸಿ ಆರ್ ಪಿ ಬೂಸರೆಡ್ಡಿ, ಶಿಕ್ಷಕರಾದ ಎಸ್ ಎಸ್ ಪಾಟೀಲ, ಎಮ್ ಡಿ ಸಕ್ಕರಿ, ಶರಣು ಹೂಗಾರ, ಬಸನಗೌಡ ಪಾಟೀಲ, ಪ್ರೋ ರಮೇಶ ಕ ಐನಾಪೂರ ಪ್ರಮುಖರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ
K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ
Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.