ವಿದ್ಯುತ್ ಇಲ್ಲದೇ ಪರದಾಡುತ್ತಿರುವ ತೋಟದ ವಸತಿ ಪ್ರದೇಶದ 45 ಕ್ಕೂ ಅಧಿಕ ಕುಟುಂಬಗಳು
Team Udayavani, Mar 23, 2022, 7:23 PM IST
ರಬಕವಿ-ಬನಹಟ್ಟಿ: ರಬಕವಿ-ಬನಹಟ್ಟಿ ತಾಲೂಕಿನ ಮದನಮಟ್ಟಿ ಮತ್ತು ಹಳಿಂಗಳಿ ಗ್ರಾಮಗಳ ವಸತಿ(ತೋಟ) ಪ್ರದೇಶದಲ್ಲಿ 45 ಕ್ಕೂ ಅಧಿಕ ಕುಟುಂಬಗಳ 400 ಕ್ಕೂ ಅಧಿಕ ಜನರು ಕುಟುಂಬಗಳಿಗೆ ಕಳೆದ ಒಂದು ತಿಂಗಳಿಂದ ರಾತ್ರಿ ಹೊತ್ತು ವಿದ್ಯುತ್ ಸಂಪರ್ಕ ಇಲ್ಲದೆ ಕತ್ತಲಲ್ಲೆ ಬದುಕು ಸಾಗಿಸುವಂತಾಗಿದೆ.
ಸರ್ಕಾರ ರೈತರಿಗೆ ನೀಡುವ ಉಚಿತ ವಿದ್ಯುತ್ ಸಮಯ ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ಮಾತ್ರ ವಿದ್ಯುತ್ ಸಂಪರ್ಕ ವಿರುತ್ತದೆ ಆದರೆ ಸಂಜೆ 6 ರಿಂದ ಬೆಳಿಗ್ಗೆ 9 ರವರೆಗೂ ಈ ಎಲ್ಲಾ ಕುಟುಂಬಗಳು ರಾತ್ರಿ ಕತ್ತಲಲ್ಲೆ ಬದುಕು ಸಾಗಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ಇಲ್ಲಿನ ನಿವಾಸಿಗರು.
ಸಂಜೆವರೆಗೆ ಹೊಲಗದ್ದೆಗಳಲ್ಲಿ ಕೆಲಸ ಮಾಡಿ ರಾತ್ರಿ ಮನೆಗೆ ಬಂದು ಅಡಿಗೆ ಮಾಡಬೇಕು, ಮಾಡಿದ ಅಡಿಗೆ ತಿನ್ನಲು ಚಿಕ್ಕ ದೀಪದಲ್ಲಿಯೇ ಊಟಮಾಡಬೇಕು, ತೋಟದ ವಸತಿಗಳು ಅದರಲ್ಲೂ ಕೃಷ್ಣಾ ನದಿ ತೀರವಾಗಿರುವುದರಿಂದ ಹುಳು ಹಪ್ಪಟಿಗಳ ಕಾಟ ಕೂಡಾ ಇರುತ್ತದೆ. ವಿದ್ಯುತ್ ಸಂಪರ್ಕ ಇಲ್ಲದ ಕಾರಣ ನಮಗೆ ತುಂಬಾ ತೊಂದರೆಯಾಗಿದೆ ಎನ್ನುತ್ತಾರೆ ಹಳಿಂಗಳಿ ತೋಟದ ಏರಿಯಾದಲ್ಲಿ ವಾಸಿಸುವ ಸುಮಿತ್ರಾ ಹಣಮನ್ನವರ.
ಈ ಕ್ಷೇತ್ರದ ಜನಪ್ರತಿನಿಧಿಗಳು, ಹೆಸ್ಕಾಂ ಅಧಿಕಾರಿಗಳು ಕೂಡಲೆ ಇವರ ತೊಂದರೆಗೆ ಸ್ಪಂದಿಸಿ ಅನುವು ಮಾಡಿಕೋಡಬೇಕು. ಇಲ್ಲವಾದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಇಲ್ಲಿನ ನಿವಾಸಿಗಳು ಎಚ್ಚರಿಸಿದ್ದಾರೆ.
ಈಗ ಡಿಗ್ರಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಪ್ರಾರಂಭವಾಗಿವೆ. ನಮಗೆ ರಾತ್ರಿ ಓದಲು ವಿದ್ಯುತ್ ಸಂಪರ್ಕವಿಲ್ಲದ ಕಾರಣ ಮೇಣದ ಬತ್ತಿಯೇ ನಮಗೆ ಆಸರೆಯಾಗಿದೆ. ಅನೇಕ ಬಾರಿ ಅಧಿಕಾರಿಗಳಿಗೆ ನಮ್ಮ ತೊಂದರೆ ತಿಳಿಸಿದರು ಯಾರೂ ಕ್ಯಾರೆ ಎನ್ನುತ್ತಿಲ್ಲ. ಇಷ್ಟೊಂದು ತಂತ್ರಜ್ಞಾನ ಮುಂದುವರೆದ ದೇಶವಾಗಿದೆ. ಅಧಿಕಾರಿಗಳು ರಾತ್ರಿ ಹೊತ್ತು ಕೇವಲ ದೀಪ ಬೇಳಗಲು ಮಾತ್ರ ಸಿಂಗಲ್ ಪೇಸ್ ಸಂಪರ್ಕ ನೀಡಿದರೆ ನಮಗೆ ಒಳ್ಳೆಯದಾಗುತ್ತದೆ.– ಅನೀಲ ರಾಘನನ್ನವರು. ಬಿಎ ಅಂತಿಮ ವರ್ಷದಲ್ಲಿ ಓದುತ್ತಿರುವ ವಿದ್ಯಾರ್ಥಿ ಮದನಮಟ್ಟಿ ತೋಟದ ವಸ್ತಿ ಏರಿಯಾ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bagalkot : ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧ ಮಹೇಶ್ ಮರೆಗೊಂಡ ಅಂತ್ಯಸಂಸ್ಕಾರ
ಪತ್ನಿ ಊರಿನತ್ತ ಪ್ರಯಾಣ ಬೆಳೆಸಿದರೆ… ಸಾವಿನ ಮನೆಯ ಕದ ತಟ್ಟಿದ ಯೋಧ ನಾಗಪ್ಪ ಮರೆಗೊಂಡ
Mahalingpur: ಇಂದು ಮೃತ ಯೋಧ ಮಹೇಶ ಅಂತ್ಯಕ್ರಿಯೆ; ಯೋಧನ ಮನೆಗೆ ಸಚಿವ ತಿಮ್ಮಾಪುರ ಭೇಟಿ
Mudhola: ಸಿಲಿಂಡರ್ ಸ್ಫೋಟ: ಹೊತ್ತಿ ಉರಿದ ಮನೆ
Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.