‘ಹಾಲು ನವಣೆ ಮಾಲ್ಟ್ ಮಿಕ್ಸ್ ‘ ಪ್ಯಾಕೆಟ್ ಲೋಕಾರ್ಪಣೆ
ಸುಲಭ-ಕೈಗೆಟುವ ದರದಲ್ಲಿ ಒದಗಿಸುವ ಉದ್ದೇಶ ಪ್ಯಾಕಿಂಗ್; ಹೆಚ್ಚಿನ ದಿನದವರೆಗೆ ಶೇಖರಿಸಿಡುವ ವ್ಯವಸ್ಥೆ
Team Udayavani, Nov 29, 2022, 11:35 AM IST
ರಬಕವಿ-ಬನಹಟ್ಟಿ: ಸತ್ವಯುತ, ಮೊಳಕೆ ಭರಿಸಿದ ಕಿರುಧಾನ್ಯ ನವಣೆಯಿಂದ ಸಂಪದ್ಭರಿತ ಹಾಲಿನೊಂದಿಗೆ ನೂತನ ಪದಾರ್ಥ ಡೆಂಪೋ ಡೇರಿಯಿಂದ ಉತ್ಕೃಷ್ಟ ಸ್ವಾದದೊಂದಿಗೆ ಜನತೆಗೆ ಸುಲಭ ಹಾಗೂ ಕೈಗೆಟುವ ದರದಲ್ಲಿ ಒದಗಿಸುವ ಉದ್ದೇಶ ಕೆಎಂಎಫ್‌ನದ್ದಾಗಿದೆ ಎಂದು ಡೆಂಪೋ ಡೇರಿ ವ್ಯವಸ್ಥಾಪಕ ಡಾ| ಚಂದ್ರಶೇಖರ ಕಮಕೇರಿ ಹೇಳಿದರು.
ಆಸಂಗಿ ಡೆಂಪೋ ಡೇರಿಯಲ್ಲಿ ನಂದಿನಿ ಹಾಲು ಒಕ್ಕೂಟದಿಂದ “ಹಾಲು ನವಣೆ ಮಾಲ್ಟ್ ಮಿಕ್ಸ್’ ಪ್ಯಾಕೆಟ್ ಲೋಕಾರ್ಪಣೆಗೊಳಿಸಿ ಮಾತನಾಡಿದರು. “ನಂದಿನಿ’ ಸಿಹಿ ತಿನಿಸುಗಳಾದ ಪೇಢಾ, ಮೈಸೂರು ಪಾಕ್, ಕರದಂಟು, ಲಡಕಿ ಸೇರಿದಂತೆ ಇತರೆ ಉತ್ಪನ್ನಗಳ ಪ್ಯಾಕಿಂಗ್ ಸೇವೆಯಲ್ಲಿ ಹೊಸ ರೂಪದೊಂದಿಗೆ ದೂರದ ಗ್ರಾಹಕರಿಗೂ ಸುಲಭ ಹಾಗೂ ಸುರಕ್ಷಿತವಾಗಿ ತಲುಪುವ ಉದ್ದೇಶದಿಂದ ಸುಮಾರು 20 ಲಕ್ಷ ರೂ. ವೆಚ್ಚದಲ್ಲಿ ಹೊಸ ಯಂತ್ರದೊಂದಿಗೆ ಪ್ಯಾಕಿಂಗ್ ಗುಣಮಟ್ಟದಲ್ಲಿ ಹೆಚ್ಚಿನ ದಿನಗಳವರೆಗೆ ಶೇಖರಿಸಿಡುವ ವ್ಯವಸ್ಥೆ ನಿಟ್ಟಿನಲ್ಲಿ ಗ್ರಾಹಕರಿಗೆ ಮತ್ತಷ್ಟು ಹತ್ತಿರವಾಗುತ್ತಿದೆ ಎಂದರು.
ವಾರದೊಳಗಾಗಿ ಉತ್ಪನ್ನಗಳ ಗುಣಮಟ್ಟ ಸೀಮಿತವಾಗುತ್ತಿತ್ತು. ಕಡಿಮೆ ಅವ ಧಿಯಲ್ಲಿ ದೂರದ ಗ್ರಾಹಕರಿಗೆ ಕೈಸೇರುವಲ್ಲಿ ಸಮಸ್ಯೆಯನ್ನರಿತು ಇದೀಗ ಪ್ಯಾಕಿಂಗ್ ಗುಣಮಟ್ಟದಲ್ಲಿ ಬದಲಾವಣೆಯೊಂದಿಗೆ 15ರಿಂದ 1 ತಿಂಗಳ ಕಾಲ ಪದಾರ್ಥ ಕೆಡದಂತೆ ಗ್ರಾಹಕರ ಬಾಯಿ ಸಿಹಿಯಾಗಿಸುವಲ್ಲಿ “ನಂದಿನಿ’ ಸಂಸ್ಥೆ ಯಶಸ್ವಿಯಾಗಿದೆ ಎಂದು ತಿಳಿಸಿದರು.
ಸಿಹಿ ಉತ್ಪನ್ನಗಳಾದ ಶ್ರೀಖಂಡ, ಧಾರವಾಡ ಪೇಢಾ, ಮೈಸೂರು ಪಾಕ್, ಲಡಕಿ, ಸುಹಾಸಿನ ಹಾಲು, ಖೋವಾ, ತುಪ್ಪ ಸೇರಿದಂತೆ 30ಕ್ಕೂ ಅಧಿಕ ಉತ್ಪನ್ನಗಳು ಕೆಲ ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿದ್ದ ಮಾರುಕಟ್ಟೆ ಇದೀಗ ಉತ್ತರ ಕರ್ನಾಟಕವಷ್ಟೇ ಅಲ್ಲದೇ ರಾಜ್ಯದೆಲ್ಲೆಡೆ ಮಾರುಕಟ್ಟೆ ನಿರ್ಮಿಸಿ ವಿತರಣೆಯಲ್ಲಿ ಮುಂಚೂಣಿಯೊಂದಿಗೆ ಜನರ ವಿಶ್ವಾಸಕ್ಕೆ ಕಾರಣವಾಗಿದೆ ಎಂದರು.
ಮಾರುಕಟ್ಟೆ ವ್ಯವಸ್ಥಾಪಕ ಪಿ. ನಟರಾಜ ಮಾತನಾಡಿ, ನಂದಿನಿ ಉತ್ಪನ್ನ ಕಲಬೆರಕೆ ರಹಿತ ಪದಾರ್ಥಗಳೆಂದು ಬಳಕೆದಾರರಿಂದ ವಿಶ್ವಾಸ ಪಡೆದಿದ್ದು, ಗುಣಮಟ್ಟದಲ್ಲಿ ರಾಜಿ ಪ್ರಶ್ನೆಯೇ ಇಲ್ಲ ಎಂದರು.
ಗುಣ ಭರವಸೆ ವಿಭಾಗದ ಕೆಮಿಸ್ಟ್ ಎಸ್.ಎಸ್. ದೊಡಮನಿ, ತಾಂತ್ರಿಕ ವಿಭಾಗಾ ಧಿಕಾರಿ ಕೆ.ಎಂ. ತಳಸದ, ಉಪ ವ್ಯವಸ್ಥಾಪಕರು ಎನ್. ಲಿಂಗಂ ಸೇರಿದಂತೆ ಇತರರು ಇದ್ದರು.
ಹೊಸ ಪದಾರ್ಥಗಳೊಂದಿಗೆ ಈಚೆಗೆ ರಾಜ್ಯದೆಲ್ಲೆಡೆ ಬೇಡಿಕೆ ದುಪ್ಪಟ್ಟಾಗಿರುವುದರಿಂದ ಗ್ರಾಹಕರಿಗೆ ತಾಜಾ ರೀತಿಯಲ್ಲಿ ದೊರಕುವ ಉದ್ದೇಶದಿಂದ ಹೊಸ ರೂಪದೊಂದಿಗೆ ಪ್ಯಾಕಿಂಗ್ ಸೌಲಭ್ಯ ಮಾಡಲಾಗಿದೆ. -ಡಾ| ಚಂದ್ರಶೇಖರ ಕಮಕೇರಿ, ವ್ಯವಸ್ಥಾಪಕ ನಿರ್ದೇಶಕರು, ಡೆಂಪೋ ಡೇರಿ, ಆಸಂಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ
Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು
ವಿಳಾಸ ಕೇಳುವ ನೆಪದಲ್ಲಿ ವ್ಯಕ್ತಿಯ ಕೊರಳಲ್ಲಿದ್ದ ಚಿನ್ನದ ಚೈನ್ ಕದ್ದ ಅಪರಿಚಿತ ವ್ಯಕ್ತಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.