ಕೋವಿಡ್ ನೆಪ ಬಿಟ್ಟು ಜನರ ಸಮಸ್ಯೆಗಳಿಗೆ ಸ್ಪಂದಿಸಿ
ಬಾದಾಮಿಯ ವಿವಿಧ ಇಲಾಖೆಗಳ ಕಚೇರಿಗೆ ಜಿಪಂ ಅಧ್ಯಕ್ಷರ ಭೇಟಿ
Team Udayavani, Jul 9, 2020, 4:33 PM IST
ಬಾದಾಮಿ: ರೈತ ಸಂಪರ್ಕ ಕೇಂದ್ರಕ್ಕೆ ಜಿಪಂ.ಅಧ್ಯಕ್ಷೆ ಬಾಯಕ್ಕ ಮೇಟಿ ಭೇಟಿ ನೀಡಿ ಸಾಮಗ್ರಿ ಪರಿಶೀಲಿಸಿದರು.
ಬಾದಾಮಿ: ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ ತಾಲೂಕಿನ ಸರಕಾರಿ ಆಸ್ಪತ್ರೆ, ಸಮಾಜ ಕಲ್ಯಾಣ ಇಲಾಖೆ, ಕೃಷಿ ಇಲಾಖೆ ಮತ್ತು ರೈತ ಸಂಪರ್ಕ ಕೇಂದ್ರಗಳಿಗೆ ದಿಢೀರ್ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆಗಳ ಬಗ್ಗೆ ಕೆಂಡಾಮಂಡಲವಾದರು. ಕೋವಿಡ್19 ನೆಪ ಬಿಟ್ಟು ಜನರ ಸಮಸ್ಯೆಗಳಿಗೆ ಜನರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಸೂಚನೆ ನೀಡಿದರು.
ಸರಕಾರಿ ಆಸ್ಪತ್ರೆ: ಬಾದಾಮಿ ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿದರು. ರೋಗಿಗಳು ಮಾಸ್ಕ್ ಧರಿಸದೇ ಇರುವುದು ಕಂಡ ಬಾಯಕ್ಕ ಮೇಟಿ, ರೋಗಿಗಳಿಗೆ ಹಾಗೂ ಸಾರ್ವಜನಿಕರಿಗೆ ಮಾಸ್ಕ್ ಕೊಡಬೇಕು ಎಂದು ಸೂಚಿಸಿದರು. ಆಸ್ಪತ್ರೆಗೆ ಬರುವ ರೋಗಿ ಮತ್ತು ರೋಗಿಯ ಸಂಬಂಧಿಕರಿಗೆ ಕಡ್ಡಾಯವಾಗಿ ಮಾಸ್ಕ್ ಧರಿಸಿ ಬರಲು ತಿಳಿಸಬೇಕು ಎಂದರು.
ಸಿಡಿಪಿಒ ಕಚೇರಿ: ಬಾದಾಮಿ ನಗರದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗೆ ಭೇಟಿ ನೀಡಿದ ಜಿಪಂ ಅಧ್ಯಕ್ಷರು ಅಂಗನವಾಡಿ ಕೇಂದ್ರದ ಮಕ್ಕಳಿಗೆ ವಿತರಿಸಲು ಗೋಡಾವನಕ್ಕೆ ಬಂದಿದ್ದ ಸಾಮಗ್ರಿ ಪರಿಶೀಲಿಸಿದರು. ಮಕ್ಕಳು ಕೇಂದ್ರಕ್ಕೆ ಬರದಿದ್ದರೂ ಸಹಿತ ಮನೆ ಮನೆಗೆ ಆಹಾರ ಸಾಮಗ್ರಿ ಕೊಡಬೇಕು ಎಂದು ಸೂಚಿಸಿದರು. ಗೋಡಾವನ್‌ದಲ್ಲಿನ ಸಾಮಗ್ರಿ ಪರಿಶೀಲಿಸಿದರು.
ಮಗುವಿಗೆ ನೀಡುವ ಪೌಷ್ಟಿಕ ಆಹಾರದಲ್ಲಿ ಹುಳುಗಳಿದ್ದವು. ಕೆಲವು ಆಹಾರ ಸಾಮಗ್ರಿಗಳು ಕಳಪೆ ಮಟ್ಟದ್ದು ಇರುವುದು ಕಂಡು ಬಂದಿತು. ತೊಗರಿಬೇಳೆ, ಶೇಂಗಾ, ಪೌಷ್ಟಿಕ ಆಹಾರ, ಬೆಲ್ಲ ತಿನ್ನಲು ಯೋಗ್ಯ ಇರಲಿಲ್ಲ. ಸಿಲೆಂಡರ್ ಕಡಿಮೆ ತೂಕ ಇದೆ ಎಂದು ದೂರು ಬಂದಿದೆ ಎಂದು ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆ: ಜಿ.ಪಂ.ಅಧ್ಯಕ್ಷೆ ಬಾಯಕ್ಕ ಮೇಟಿ ಸಮಾಜ ಕಲ್ಯಾಣ ಇಲಾಖೆಗೆ ಭೇಟಿ ನೀಡಿದಾಗ ವಸತಿ ನಿಲಯದ ಮಕ್ಕಳಿಗೆ ವಿತರಿಸಲು ಬಂದಿದ್ದ ಬಟ್ಟೆ, ನ್ಯಾಪಕೀನ್ ಇತರ ಸಾಮಗ್ರಿಗಳನ್ನು ಪರಿಶೀಲನೆ ಮಾಡಿದರು. ವಸತಿ ನಿಲಯ ಆರಂಭವಾದ ನಂತರ ಮಕ್ಕಳಿಗೆ ವಿತರಿಸಲು ತಿಳಿಸಿದರು.
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ಮತ್ತು ಎಪಿಎಂಸಿ ಹತ್ತಿರ ಇರುವ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ರೈತರಿಗೆ ರಿಯಾಯ್ತಿ ದರದಲ್ಲಿ ವಿತರಿಸಲು ಬೀಜ, ವಿವಿದ ಬೀಜ, ಸಾಮಗ್ರಿ ಪರಿಶೀಲಿಸಿದರು. ಆದರೆ, ರೈತ ಸಂಪರ್ಕ ಕೇಂದ್ರಕ್ಕೆ ಬಂದಿರುವ ವಿವಿದ ಬೀಜ, ಸಾಮಗ್ರಿಗಳ್ಳುಗಳ ಮಾಹಿತಿ ನೀಡಲು ಅಧಿಕಾರಿಗಳು ಇಲ್ಲದಿರುವುದು ಕಂಡು ಬಂದಿತು. ತಾಲೂಕಿನ ಕೆಲವರು ನನಗೆ ದೂರವಾಣಿ ಮೂಲಕ ತಿಳಿಸಿ ಅಧಿಕಾರಿಗಳು ಸರಿಯಾಗಿ ಸಿಗುತ್ತಿಲ್ಲ. ಜನಸಾಮಾನ್ಯರ ಕೆಲಸಗಳು ಆಗುತ್ತಿಲ್ಲ ಎಂದು ನನ್ನ ಗಮನಕ್ಕೆ ತಂದಿದ್ದು, ಬರಿ ಕೋವಿಡ್19 ನೆಪ ಹೇಳುತ್ತಿದ್ದಾರೆ ಎಂದು ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ ಅಸಮಾಧಾನ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ನಾಲ್ಕು ಕಚೇರಿಗಳಿಗೆ ಭೇಟಿ ನೀಡಿದ್ದು, ಕೃಷಿ ಇಲಾಖೆ ಅಧಿ ಕಾರಿಗಳು ಇರಲಿಲ್ಲ. ಬಹುತೇಕ
ಅ ಧಿಕಾರಿಗಳು ಬರಿ ಕೋವಿಡ್19, ವಿಡಿಯೋ ಕಾನ್ಫೆರೆನ್ಸ್, ಸಂದರ್ಶನ ಹೀಗೆ ವಿವಿಧ ನೆಪ ಹೇಳಿ ಜನರಿಗೆ ಮತ್ತು ಜನಪ್ರತಿನಿಧಿ ಗಳಿಗೆ ಸಿಗುತ್ತಿಲ್ಲ.
ಹೀಗಾದರೆ ಜನಸಾಮಾನ್ಯರ ಗತಿ ಏನು? ಎಂದು ಪ್ರಶ್ನಿಸಿದರು. ಸಾರ್ವಜನಿಕರ ಕೆಲಸಗಳು ಆಗುತ್ತಿಲ್ಲ. ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ
ಶಿಸ್ತುಕ್ರಮಕ್ಕೆ ಮೇಲಧಿಕಾರಿಗಳಿಗೆ ಶಿಫಾರಸು ಮಾಡಲಾಗುವುದು. ಕೃಷಿ ಇಲಾಖೆಯ ಯೋಜನೆಗಳು ಕೆಲವೇ ಜನರಿಗೆ ಮಾತ್ರ ಸಿಗುತ್ತವೆ ಎಂದು ಕೆಲವರು ದೂರು ಸಲ್ಲಿಸಿದ್ದಾರೆ. ಸರಕಾರದ ಯೋಜನೆಗಳು ಸಾರ್ವಜನಿಕರಿಗೆ ಸಿಗಬೇಕು ಎಂದರು. ಈ ಅವ್ಯವಸ್ಥೆ ಕುರಿತು ಮಾಜಿ ಸಿಎಂ, ಶಾಸಕ ಸಿದ್ದರಾಮಯ್ಯ ಅವರ
ಗಮನಕ್ಕೆ ತರಲಾಗುವುದು ಮತ್ತು ಜಿಲ್ಲಾ ಕಚೇರಿಗೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ
K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ
Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
ಕೊಡುವುದರಿಂದ ಕೊರತೆಯಾಗದು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.