ಎಲ್‌ಇಡಿ ಲೈಟ್; ಸವಾರರಿಗೆ ಕಿರಿಕ್
Team Udayavani, Mar 19, 2019, 9:25 AM IST
ಗುಳೇದಗುಡ್ಡ: ದ್ವಿಚಕ್ರ ವಾಹನ ಸೇರಿದಂತೆ ಯಾವುದೇ ವಾಹನಗಳಿಗೆ ಹೆಚ್ಚುವರಿಯಾಗಿ ಲೈಟ್ ಬಳಸುವಂತಿಲ್ಲ. ಇದು ನಿಯಮ. ಆದರೆ ಈ ನಿಯಮವನ್ನು ಗಾಳಿಗೆ ತೂರಿದ ವಾಹನ ಸವಾರರು ಹೆಚ್ಚುವರಿಯಾಗಿ ಎಲ್ ಇಡಿ ಲೈಟ್‌ಗಳನ್ನು ಬೈಕ್, ಟಂಟಂ ಸೇರಿದಂತೆ ಹಲವು ವಾಹನಗಳಿಗೆ ಅಳವಡಿಸಿ ಕಿರಿಕಿರಿ ಉಂಟು ಮಾಡುತ್ತಿದ್ದಾರೆ.
ವಾಹನಗಳಿಗೆ ಹೆಚ್ಚುವರಿಯಾಗಿ ಎಲ್ ಇಡಿ ಲೈಟ್‌ಗಳ ಬಳಕೆ ಹೆಚ್ಚುತ್ತಿದ್ದು, ಇದರಿಂದ ಎದುರಿಗೆ ಬರುವ ವಾಹನ ಸವಾರ ಭಯದಲ್ಲೇ ಸಂಚರಿಸುವಂತಾಗಿದೆ. ಸಂಬಂಧಪಟ್ಟವರು ಮಾತ್ರ ಈ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲವಾಗಿದೆ.
ಏನು ಹೇಳುತ್ತೆ ನಿಯಮ: ಆರ್‌ಟಿಒ ಅಧಿಕಾರಿಗಳೇ ಹೇಳುವಂತೆ ವಾಹನ ತಯಾರಿಸುವಾಗ ಆ ಕಂಪನಿ ನೀಡಿರುವ ಲೈಟ್ ಬಿಟ್ಟರೆ ಯಾವುದೇ ವಾಹನಗಳಿಗೆ ಹೆಚ್ಚುವರಿಯಾಗಿ ಬೇರೆ ಲೈಟ್ ಅಳವಡಿಸುವಂತಿಲ್ಲ. ಅಷ್ಟೇ ಏಕೆ ಹಾರ್ನ್ ಕೂಡ ಬೇರೆ ಹಾಕುವಂತಿಲ್ಲ. ಇಷ್ಟೇ ಡೆಸಿಬಲ್ ಪ್ರಮಾಣದ ಹಾರ್ನ್ ಹಾಕುವಂತಹ ನಿಯಮಗಳಿದ್ದರೂ ಹಲವು ವಾಹನ ಸವಾರರು ಈ ನಿಯಮಗಳನ್ನು ಗಾಳಿಗೆ ತೂರಿ ಮನಬಂದಂತೆ ಲೈಟ್ ಅಳವಡಿಸುತ್ತಿದ್ದಾರೆ.
ಏಕೆ ಬಳಸುತ್ತಿದ್ದಾರೆ ಈ ಲೈಟ್: ಬೈಕ್, ಟಂಟಂಗಳ ಲೈಟ್‌ಗಳು ಹೆಚ್ಚು ಬೆಳಕು ನೀಡುತ್ತಿಲ್ಲ. ಇದರಿಂದ ರಾತ್ರಿ ಸಮಯದಲ್ಲಿ ದೊಡ್ಡ ವಾಹನಗಳು ಎದುರಿಗೆ ಬಂದಾಗ ಆ ವಾಹನಗಳ ಲೈಟ್ ಮುಂದೆ ಬೈಕ್‌ಗಳ ಲೈಟ್ ಬೆಳಕು ಕಡಿಮೆಯಾಗುತ್ತಿರುವುದರಿಂದ ಈ ಎಲ್‌ಇಡಿ ಲೈಟ್‌ಗಳನ್ನೇ ಹೆಚ್ಚು ಬಳಸಲಾಗುತ್ತಿದೆ. ಆದರೆ ಈ ಲೈಟ್‌ಗಳಿಂದ ಒಳ್ಳೆಯದಕ್ಕಿಂತ ಅಪಾಯವೇ ಜಾಸ್ತಿ. ಆದರೂ ಸಹ ಇದರ ಬಳಕೆ ದಿನೇ ದಿನೇ ಹೆಚ್ಚುತ್ತಿದೆ.
ಅಪಾಯ ಏನು: ಎಲ್‌ಇಡಿ ಲೈಟ್ ಬಳಕೆ ಮಾಡುವುದರಿಂದ ಪೋಕಸ್ ಹೆಚ್ಚಾಗಿ ಎದುರಿಗೆ ಬರುವ ವಾಹನ ಸವಾರನಿಗೆ
ದಾರಿ ಕಾಣದಂತಾಗುತ್ತದೆ. ಇದರಿಂದ ವಾಹನ ಸವಾರ ಕೆಲವು ಸಲ ನಿಯಂತ್ರಣ ತಪ್ಪುವಂತಹ ಸಾಧ್ಯತೆಗಳು ಹೆಚ್ಚು. ಅಷ್ಟೇ ಅಲ್ಲ ಎಲ್‌ಇಡಿಗಳು ಅತಿಯಾದ ಬೆಳಕು ಕೊಡುವುದರಿಂದ ಎದುರಿನ ವಾಹನ ಸವಾರ ರಸ್ತೆ ಪಕ್ಕಕ್ಕೆ ಸರಿಯಲು ಹೋಗಿ ಅಪಾಯ ಮಾಡಿಕೊಳ್ಳುವ ಸಾಧ್ಯತೆಗಳೂ ಹೆಚ್ಚಿವೆ ಎಂಬುದು ಹಲವು ವಾಹನ ಸವಾರರ ಆರೋಪ.
ಬೈಕ್ ಸವಾರರ ವಾದ ಏನು: ಎದುರಿಗೆ ಕಾರು, ಲಾರಿ ಬಂದಾಗ ಆ ವಾಹನಗಳ ಸವಾರರು ಲೈಟ್ ಡಿಪ್ ಮತ್ತು ಡಿಮ್ ಮಾಡುವುದಿಲ್ಲ. ಇದರಿಂದ ನಮ್ಮ ಬೈಕ್‌ಗಳ ಲೈಟ್‌ಗಳ ಫೋಕಸ್ ಕಡಿಮೆಯಾಗುತ್ತದೆ. ಇದರಿಂದ ನಾವು ರಸ್ತೆ ಕಾಣಲಿ ಎಂದು ಎಲ್‌ಇಡಿ ಲೈಟ್ ಅಳವಡಿಸುತ್ತೇವೆ. ಎದುರಿಗೆ ಬರುವ ವಾಹನ ಸವಾರರು ಸಹ ತಮ್ಮ ವಾಹನಗಳ ಲೈಟ್ ಬೆಳಕು ಕಡಿಮೆ ಮಾಡಬೇಕು. ಅವರು ಮಾಡುವುದಿಲ್ಲ ಎಂದು ನಾವು ಎಲ್‌ಇಡಿ ಲೈಟ್ ಅಳವಡಿಸಿದ್ದೇವೆ ಎನ್ನುತ್ತಾರೆ ಎಲ್‌ಇಡಿ ಲೈಟ್ ಅಳವಡಿಸಿರುವ ಸವಾರರು.
ಕಳೆದ ಹಲವು ತಿಂಗಳಿಂದ ಬೈಕ್, ಟಂಟಂ ವಾಹನ ಸವಾರರು ಎಲ್‌ಇಡಿ ಲೈಟ್‌ಗಳನ್ನು ಅತಿಯಾಗಿ ಬಳಸುತ್ತಿದ್ದಾರೆ. ಇದರಿಂದ ಎದುರಿಗೆ ಬರುವ ವಾಹನ ಸವಾರರ ಕಣ್ಣಿಗೆ ಕತ್ತಲು ಆವರಿಸಿದಂತಾಗುತ್ತದೆ. ಎಲ್‌ಇಡಿ ಲೈಟ್‌ನಿಂದ ಅಪಾಯಗಳು ತಪ್ಪಿದ್ದಲ್ಲ. ಆದ್ದರಿಂದ ಈ ಎಲ್‌ಇಡಿ ಲೈಟ್ ನಿಷೇಧಿ ಸಿ ಜನರ ಪ್ರಾಣ ಉಳಿಸಬೇಕು.
ಸಂಗಪ್ಪ ಚಟ್ಟೇರ, ಸಾಮಾಜಿಕ ಕಾರ್ಯಕರ್ತ, ಗುಳೇದಗುಡ್ಡ
ಎಲ್‌ಇಡಿ ಲೈಟ್ ಬಳಕೆ ಬಗ್ಗೆ ಅಧ್ಯಯನ ನಡೆಯುತ್ತಿದೆ. ಈ ಲೈಟ್ ಬಳಸುವುದರಿಂದ ವಾಹನ ಸವಾರನ ಕಣ್ಣಿನ ರೇಟಿನಾದಲ್ಲಿ ತೊಂದರೆಯಾಗುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.
ಡಾ|ಜಗದೀಶ ಸತರಡ್ಡಿ, ನೇತ್ರ ತಜ್ಞರು, ದೃಷ್ಟಿ ಕಣ್ಣಿನ ಆಸ್ಪತ್ರೆ, ಬಾಗಲಕೋಟ
ಮಲ್ಲಿಕಾರ್ಜುನ ಕಲಕೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪತ್ನಿ ಊರಿನತ್ತ ಪ್ರಯಾಣ ಬೆಳೆಸಿದರೆ… ಸಾವಿನ ಮನೆಯ ಕದ ತಟ್ಟಿದ ಯೋಧ ನಾಗಪ್ಪ ಮರೆಗೊಂಡ
Mahalingpur: ಇಂದು ಮೃತ ಯೋಧ ಮಹೇಶ ಅಂತ್ಯಕ್ರಿಯೆ; ಯೋಧನ ಮನೆಗೆ ಸಚಿವ ತಿಮ್ಮಾಪುರ ಭೇಟಿ
Mudhola: ಸಿಲಿಂಡರ್ ಸ್ಫೋಟ: ಹೊತ್ತಿ ಉರಿದ ಮನೆ
Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ
Soldier: ಕಾಶ್ಮೀರದಲ್ಲಿ ಕಂದಕಕ್ಕೆ ಉರುಳಿದ ಸೇನಾ ವಾಹನ; ಮಹಾಲಿಂಗಪುರದ ಯೋಧ ಹುತಾತ್ಮ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Vijay Hazare Trophy: ಮಯಾಂಕ್ ಅಗರ್ವಾಲ್ ಶತಕದಾಟ; ಪಂಜಾಬ್ ಕೈನಿಂದ ಜಯ ಕಸಿದ ಕರ್ನಾಟಕ
Borewell Tragedy: 4ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ… ಬಾಲಕಿಯ ಸ್ಥಿತಿ ಹೇಗಿದೆ
Maulana Masood: 26/11 ದಾಳಿಯ ಮಾಸ್ಟರ್ ಮೈಂಡ್: ಭಯೋ*ತ್ಪಾದಕ ಮಸೂದ್ ಗೆ ಹೃದಯಾಘಾತ
Belagavi;ಕಾಂಗ್ರೆಸ್ ಕಾರ್ಯಕಾರಿಸಭೆಯಲ್ಲಿ ಖರ್ಗೆ,ರಾಹುಲ್ ಭಾಗಿ; ಸೋನಿಯಾ,ಪ್ರಿಯಾಂಕಾ ಗೈರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.