ಚೇತನ್ ಹಿಂದೂ ಧರ್ಮ ಟಾರ್ಗೆಟ್ ಮಾಡೋದನ್ನ ಬಿಡಲಿ: ಚಕ್ರವರ್ತಿ ಕಿಡಿ
ಬುಡಕಟ್ಟು ಸೇರಿ ಯಾವದೇ ಸಂಸ್ಕೃತಿ ಹಿಂದೂ ಧರ್ಮದ ಅಂಗವಾಗಿದೆ....
Team Udayavani, Oct 19, 2022, 7:21 PM IST
ರಬಕವಿ-ಬನಹಟ್ಟಿ : ನಟ ಚೇತನ್‌ರಿಗೆ ಸಿನಿಮಾ ಮಾಡಿ ಹಿಟ್ ಮಾಡಿಕೊಳ್ಳುವ ಸಾಮರ್ಥ್ಯವಿಲ್ಲ, ಬದಲಾಗಿ ಒಂದಲ್ಲ ಒಂದು ವಿಚಾರದಿಂದ ಸನಾತನ ಹಿಂದೂ ಧರ್ಮವನ್ನು ಟಾರ್ಗೆಟ್ ಮಾಡುತ್ತಾ ಸದಾ ಸುದ್ದಿಯಲ್ಲಿರಬೇಕೆಂಬ ಹುಚ್ಚು ಮನಸ್ಸು ಅವರದಾಗಿದೆ. ಈಗ ರಿಷಬ್ ಶೆಟ್ಟಿಯವರ ಕಾಂತಾರ ಚಿತ್ರದಿಂದ ಮತ್ತೆ ವಿವಾದಎಬ್ಬಿಸಿರುವುದು ಹೊಸತೇನಲ್ಲವೆಂದು ಚಕ್ರವರ್ತಿ ಸೂಲಿಬೆಲೆ ಕಿಡಿಕಾರಿದರು.
ಬಾಗಲಕೋಟೆ ಜಿಲ್ಲೆಯ ಬನಹಟ್ಟಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗುವ ಸಂದರ್ಭ ಮಾತನಾಡಿ, ಬುಡಕಟ್ಟು ಜನಾಂಗ, ಭಾರತೀಯ ಮೂಲ ಭಾರತೀಯ ಸಂಸ್ಕೃತಿ ಬೇರೆ ಎಂಬುದು ಎಡಪಂಕ್ತಿಯರ ವಾದ ಸಾಮಾನ್ಯವಾಗಿದೆ. ಇಡೀ ಜಗತ್ತು ಇದನ್ನು ತಿರಸ್ಕರಿಸಿದೆ ಆದರೂ ಈ ವಾದದಿಂದಲೇ ನೇತಾಡುವುದು ಬಿಟ್ಟರೆ ಹೋರಾಟದ ತಳಪಾಯ ತಪ್ಪುತ್ತದೆ ಎಂಬ ಕಲ್ಪನೆಯಾಗಿದೆ ಎಂದರು.
ಹಿಂದೂ ಧರ್ಮ ಎಲ್ಲವನ್ನೂ ಒಳಗೊಳ್ಳುವ ಧರ್ಮ, ಬುಡಕಟ್ಟು ಸೇರಿ ಯಾವದೇ ಸಂಸ್ಕೃತಿ ಹಿಂದೂ ಧರ್ಮದ ಅಂಗವಾಗಿದೆ. ದೇವರಗಿತಿಂತ ದೈವ ಹೆಚ್ಚು ಎಂಬುದು ಚಿತ್ರದಲ್ಲಿದೆ. ಆದರೆ ದೈವ ಮತ್ತು ದೇವರ ಪೂಜೆ ದಕ್ಷಿಣ ಕನ್ನಡದ ಜನ ಬೆಳೆಸಿಕೊಂಡು ಬಂದಿದ್ದಾರೆ. ದುರದೃಷ್ಟವೆಂದರೆ ಚೇತನ್‌ರಿಗೆ ಓದುವ ಅಥವಾ ಅರಿತುಕೊಳ್ಳಲು ಸಮಯವಿಲ್ಲ. ಅಲ್ಲಿನ ಜನರ ಸಂಸ್ಕೃತಿ ಸನಾತನ ಧರ್ಮದ ಭಾಗವಾಗಿ ಬದುಕುತ್ತಿರುವದನ್ನು ನೋಡಲಿ. ಮೂರ್ಖತನ ಬಿಟ್ಟು ಭಾರತೀಯ ಸಂಸ್ಕೃತಿಯೊಂದಿಗೆ ಒಂದಾಗಿ ಚೇತನ್ ಮುಂದುವರೆಯಲಿ. ಇವೆಲ್ಲ ಮಾತುಗಳನ್ನಾಡುವ ಮೊದಲು ಎರಡು ನಾಗರಿಕತೆಯನ್ನು ಬಿಟ್ಟು ಪಕ್ಕಾ ಭಾರತೀಯರಾಗುವುದನ್ನು ಕಲಿಯಲಿ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ
Gold Cheating Case: ಚಿನಾಭರಣ ವಂಚನೆ… ಶ್ವೇತಾಗೌಡ ವಿರುದ್ಧ ಇನ್ನೊಂದು ದೂರು
Metro: ಮೆಟ್ರೋದಲ್ಲಿ ಮಹಿಳಾ ಟೆಕಿ ಫೋಟೋ ತೆಗೆದು ಸಿಕ್ಕಿಬಿದ್ದ ಆಯುರ್ವೇದಿಕ್ ವೈದ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.