ವಿದ್ಯುತ್ ಬಳಕೆಯಲ್ಲಿ ಗ್ರಾಹಕರು ಜಾಗೃತಿ ವಹಿಸಲಿ
•ಉತ್ತಮ ಸೇವೆ ನೀಡಲು ಇಲಾಖೆ ಬದ್ಧ•ಗ್ರಾಹಕರ ಸಮಸ್ಯೆಗಳಿಗೆ ಸ್ಪಂದಿಸಲು ಕರೆ•ವಿದ್ಯುತ್ ದುರ್ಬಳಕೆ ತಡೆಗೆ ಕ್ರಮ
Team Udayavani, Aug 2, 2019, 9:47 AM IST
ಕೆರೂರ: ಹೆಸ್ಕಾಂ ಕಚೇರಿಯಲ್ಲಿ ನಡೆದ ವಿದ್ಯುತ್ ಸುರಕ್ಷತಾ ಜಾಗೃತಿ ಕಾರ್ಯಗಾರವನ್ನು ಗಣ್ಯರು ಉದ್ಘಾಟಿಸಿದರು.
ಕೆರೂರ: ಗ್ರಾಹಕರು ವಿದ್ಯುತ್ ಬಳಕೆಯಲ್ಲಿ ಜಾಗೃತಿ ವಹಿಸಬೇಕಾಗಿದ್ದು, ಉತ್ತಮ ಗುಣಮಟ್ಟದ ಉಪಕರಣ ಬಳಸಬೇಕು. ವಿದ್ಯುತ್ ಉಳಿತಾಯ ಮಾಡಲು ಎಲ್ಇಡಿ ಬಲ್ಬ್ ಬಳಕೆ ಹಾಗೂ ಸೋಲಾರ್ ಅಳವಡಿಸಿಕೊಳ್ಳಬೇಕೆಂದು ಗುಳೇದಗುಡ್ಡ ಹೆಸ್ಕಾಂ ವಿಭಾಗ ಸಹಾಯ ಕಾರ್ಯನಿರ್ವಾಹಕ ಅಧಿಕಾರಿ ಬಾಲಚಂದ್ರ ಹಲಗತ್ತಿ ಹೇಳಿದರು.
ಪಟ್ಟಣದ ಹೆಸ್ಕಾಂ ಕಚೇರಿಯಲ್ಲಿ ನಡೆದ ವಿದ್ಯುತ್ ಸುರಕ್ಷತಾ ಜಾಗೃತಿ ಕಾರ್ಯಗಾರದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದರು.
ಕೆರೂರ ಶಾಖಾಧಿಕಾರಿ ಗೋಪಾಲ ಪೂಜಾರ ಮಾತನಾಡಿ, ವಿದ್ಯುತ್ ಸರಬರಾಜಿನಲ್ಲಿ ಸಮಸ್ಯೆಯಾದಲ್ಲಿ ಇಲಾಖೆ ಸಿಬ್ಬಂದಿಗೆ ತಿಳಿಸಬೇಕು. ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಇಲಾಖೆ ಸಿಬ್ಬಂದಿ ತಕ್ಷಣ ಅವರ ಸಮಸ್ಯೆಗಳಿಗೆ ಸ್ವಂದಿಸಬೇಕು ಎಂದು ಸಿಬ್ಬಂದಿಗೆ ಸಲಹೆ ಹೇಳಿದರು.
ಕುಳಗೇರಿ ಶಾಖಾಧಿಕಾರಿ ಚಂದ್ರು ಕೊಂತ ಮಾತನಾಡಿ, ಹೆಸ್ಕಾಂ ಟಿ.ಸಿ. ಸುತ್ತ ಕಸ ಹಾಕಬಾರದು. ಕಂಬಗಳ ವಾಲುವಿಕೆ, ವಿದ್ಯುತ್ ತಂತಿ ಜೋತು ಬಿದ್ದಿರುವುದು. ವಿದ್ಯುತ್ ಮಾರ್ಗ ತತ್ತರಿಸಿ ಹೋಗಿರುವುದು ಹಾಗೂ ವಿದ್ಯುತ್ ಅವಘಡಗಳು ಸಂಭವಿಸುವ ಲಕ್ಷಣ ಕಂಡು ಬಂದಲ್ಲಿ ಹೆಸ್ಕಾಂ ಅಧಿಕಾರಿಗಳಿಗೆ ತಿಳಿಸಬಹುದು ಅಥವಾ ಸಹಾಯವಾಣಿ 1912 ಸಂಪರ್ಕಿಸಬಹುದು ಎಂದರು.
ಜಿಪಂ ಮಾಜಿ ಸದಸ್ಯ ಎಂ.ಜಿ. ಕಿತ್ತಲಿ, ಪಪಂ ಮಾಜಿ ಅಧ್ಯಕ್ಷ ಬಿ.ಬಿ. ಸೂಳಿಕೇರಿ ಮಾತನಾಡಿದರು.
ಈ ವೇಳೆ ಗುಳೇದಗುಡ್ಡ ತಾಂತ್ರಿಕ ಸಹಾಯಕರಾದ ಮಾಲತೇಶ ಬಾದವಾಡಗಿ, ಶ್ರೀಧರ ಕಂದಕೂರ, ಚನ್ನಮಲ್ಲಪ್ಪ ಘಟ್ಟದ, ಬಸವರಾಜ ಬ್ಯಾಹಟ್ಟಿ, ಮಂಜುನಾಥ ರಾಠೊಡ, ಸಂಕಣ್ಣ ಹೊಸಮನಿ, ಗಣೇಶ ಸಿಂಗದ, ನಾಗೇಶ ಛತ್ರಬಾಣ, ಮಹಾಂತೇಶ ಅಂಬಿಗೇರ, ಹೆಸ್ಕಾಂ ಸಿಬ್ಬಂದಿ ಇದ್ದರು. ಈರಣ್ಣ ಅಂಕದ ನಿರೂಪಿಸಿ, ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Urwa: ಬಾಯ್ದೆರೆದ ಕಾಂಕ್ರೀಟ್ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Karkala: ದುರ್ಗಾ ಗ್ರಾಮ ಪಂಚಾಯತ್; ರಸ್ತೆ ಸಂಪೂರ್ಣ ದುರವಸ್ಥೆ
Udupi: ಜಿಲ್ಲೆಯ ಬ್ಲ್ಯಾಕ್ ಸ್ಪಾಟ್ 30ರಿಂದ 20ಕ್ಕೆ ಇಳಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.