ಯುವಪೀಳಿಗೆ ಪರಿಸರ ಉಳಿಸುವ ಕಾರ್ಯ ಮಾಡಲಿ: ಪತ್ತಾರ
Team Udayavani, Jun 8, 2020, 12:06 PM IST
ಕುಳಗೇರಿ ಕ್ರಾಸ್: ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಇಡೀ ಜೀವ ಸಂಕುಲ, ಅರಣ್ಯ ಸಂಪತ್ತು ನಾಶ ಮಾಡುತ್ತಿದ್ದಾನೆ. ಅಧಿಕಾರ ಮತ್ತು ಸಂಪತ್ತಿನ ಆಸೆ- ಆಮಿಷಕ್ಕೆ ಬಲಿಯಾಗಿ ಪರಿಸರ ನಾಶಕ್ಕೆ ಮುಂದಾಗಿರುವುದು ದುರದೃಷ್ಟಕರ ಎಂದು ಸಾರಿಗೆ ನಿಯಂತ್ರಕ ಕೆ.ವಿ. ಪತ್ತಾರ ವಿಷಾದಿಸಿದರು.
ಗ್ರಾಮದ ಬಸ್ ನಿಲ್ದಾಣ ಆವರಣದಲ್ಲಿ ಪರಿಸರ ದಿನಾಚರಣೆ ನಿಮಿತ್ತ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಸಿ ನೆಟ್ಟು ನೀರುಣಿಸಿದ ಗ್ರಾಪಂ ಉಪಾಧ್ಯಕ್ಷ ವೆಂಕಣ್ಣ ಹೊರಕೇರಿ ಮಾತನಾಡಿ, ಹೆತ್ತ ತಾಯಿ ಎಷ್ಟು ಪವಿತ್ರವೋ ಅಷ್ಟೇ ಪವಿತ್ರ ಭೂಮಿತಾಯಿ. ಈ ಭೂಮಿ ಮೇಲೆ ಎಲ್ಲ ಜೀವರಾಶಿಗಳಿಗೂ ಬದುಕುವ ಹಕ್ಕಿದೆ. ಮಾನವ ಪ್ರಕೃತಿಯ ಎಲ್ಲ ಸೌಲಭ್ಯ ಪಡೆದು ದ್ರೋಹ ಬಗೆಯುತ್ತಿದ್ದಾನೆ. ಕಾರಣ ಇಂದಿನ ಯುವ ಪೀಳಿಗೆಗೆ ಪರಿಸರ ಉಳಿಸುವ ಕಾರ್ಯ ಮಾಡಬೇಕಿದೆ ಎಂದರು.
ಗ್ರಾಪಂ ಸದಸ್ಯ ಹನಮಂತ ನರಗುಂದ, ಎಎಸ್‌ಐ ಎಲ್. ಎಂ. ಗೊರವರ, ಪೇದೆ ಎಂ.ಐ. ತೋಟದ, ನಿರ್ವಾಹಕರಾದ ಬಿ.ಆರ್. ರುದ್ರಗೌಡ, ಆರ್.ಬಿ. ಅಂಗಡಿ, ಮಾಜಿ ಸೈನಿಕ ಬಸವರಾಜ ಹುಣಸಿಕಟ್ಟಿ, ಮಲ್ಲಪ್ಪ ಹೂಗಾರ ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.