ಜ್ಞಾನ ದೇಗುಲಕ್ಕಿಲ್ಲ ಸ್ವಂತ ಕಟ್ಟಡ ಭಾಗ್ಯ
Team Udayavani, Oct 19, 2019, 12:40 PM IST
ಮಹಾಲಿಂಗಪುರ: ಪಟ್ಟಣದ ಏಕೈಕ ಜ್ಞಾನ ದೇಗುಲ ಗ್ರಂಥಾಲಯಕ್ಕೆ ಸ್ವಂತ ಸೂರು ಭಾಗ್ಯವಿಲ್ಲ. ಶಿಥಿಲಾವಸ್ಥೆ ಕಟ್ಟಡದಲ್ಲಿ ಪುಸ್ತಕ ಮತ್ತು ಪತ್ರಿಕೆ ವ್ಯವಸ್ಥಿತ ಜೋಪಾನಕ್ಕಾಗಿ ಶಾಖಾ ಗ್ರಂಥಪಾಲಕರು ಪರದಾಡುವಂತಾಗಿದೆ.
ಅರ್ಧ ಶತಮಾನದ ಗ್ರಂಥಾಲಯ!: ಪಟ್ಟಣದ ಜ್ಞಾನ ದೇಗುಲ ಗ್ರಂಥಾಲಯ ಆರಂಭವಾಗಿ 51 ವರ್ಷಗಳಾಗಿವೆ. ಸ್ವಂತ ಕಟ್ಟಡಕ್ಕೆ ಎಂಟು ವರ್ಷಗಳಿಂದ ನಿರಂತರ ಹೋರಾಟ ಮಾಡುತ್ತಿದ್ದರೂ ಪ್ರಯೋಜನವಾಗಿಲ್ಲ. ಸುಮಾರು 1968ರಲ್ಲಿ ಪುರಸಭೆಯಿಂದ ಹಳೆಯ ಪುರಸಭೆಯ ಪಕ್ಕದ ಕಟ್ಟಡದಲ್ಲಿ ವಾಚನಾಲಯ ಆರಂಭಿಸಲಾಗಿತ್ತು. ಒಂದು ದಶಕಗಳ ಕಾಲ ಪುರಸಭೆಯೇ ಅದರ ನಿರ್ವಹಣೆ ಮಾಡಿತ್ತು. 1978ರಲ್ಲಿ ಅದೇ ವಾಚನಾಲಯವು ಗ್ರಂಥಾಲಯ ಇಲಾಖೆಗೆ ಒಳಪಟ್ಟು ಅದೇ ಸ್ಥಳದಲ್ಲಿ ಸುಸಜ್ಜಿತ ಗ್ರಂಥಾಲಯವಾಗಿತ್ತು.
ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರ: 2009ರಲ್ಲಿ ಹಳೆಯ ಪುರಸಭೆ ಆವರಣದಲ್ಲಿನ ಎಲ್ಲಾ ಕಟ್ಟಡ ನೆಲಸಮಗೊಳಿಸಿ ಪುರಸಭೆಗೆ ನೂತನ ಕಟ್ಟಡ ನಿರ್ಮಿಸಲಾಯಿತು. ಈ ಸಂದರ್ಭದಲ್ಲಿ 40 ವರ್ಷಗಳಿಂದ ಒಂದೇ ಕಟ್ಟಡದಲ್ಲಿದ್ದ ಗ್ರಂಥಾಲಯ ವನ್ನು ಹಳೆ ಸರಕಾರಿ ಆಸ್ಪತ್ರೆಯ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು.
ಅಪಾಯ ಹಂತದಲ್ಲಿ ಕಟ್ಟಡ?: 1958ರಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಡಿ. ಜತ್ತಿ ಉದ್ಘಾಟಿಸಿದ ಸಾರ್ವಜನಿಕ ಸರಕಾರಿ ಆಸ್ಪತ್ರೆ ಕಟ್ಟಡದಲ್ಲೇ, ಕಳೆದ 10 ವರ್ಷಗಳಿಂದ ಗ್ರಂಥಾಲಯ ನಡೆಯುತ್ತಿದೆ. ಈ ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆಗೊಂಡಿದೆ. ಆದರೆ, ನಿರಂತರ ಮಳೆ ಪರಿಣಾಮ ಕಟ್ಟಡದ ಮೇಲ್ಛಾವಣಿಯಿಂದ ನೀರು ಸೋರುವುದರಿಂದ ಪುಸ್ತಕಗಳ ರಕ್ಷಣೆಗಾಗಿ ಪುಸ್ತಕ ಪುಸ್ತಕ ಸಂಗ್ರಹ ಕಪಾಟಿನ ಮೇಲೆ ಪ್ಲಾಸ್ಟಿಕ್ ತಟ್ಟಿನ ಹೊದಿಕೆ ಹಾಕಲಾಗಿದೆ. ಗ್ರಂಥಾಲಯಕ್ಕೆ ಸ್ವಂತ ಸೂರು ಕಲ್ಪಿಸಿ, ಗ್ರಂಥಾ ಲಯದಲ್ಲಿನ ಅಮೂಲ್ಯ ಗ್ರಂಥಗಳನ್ನು ರಕ್ಷಿಸುವ ಕಾರ್ಯಕ್ಕೆ ಓದುಗರು, ಸಾರ್ವಜನಿಕರು, ಜನಪ್ರತಿನಿಧಿಗಳು ಪ್ರಯತ್ನಿಸಬೇಕಾಗಿದೆ.
ಸಾವಿರಾರು ಪುಸಕ್ತಗಳ ಸಂಗ್ರಹ: ಗ್ರಂಥಾಲಯದಲ್ಲಿ 32 ಸಾವಿರಕ್ಕೂ ಅಧಿಕ ಪುಸ್ತಕಗಳಿವೆ. 12 ದಿನಪತ್ರಿಕೆ, 8 ವಾರ ಪತ್ರಿಕೆ, 7 ಮಾಸ ಪತ್ರಿಕೆ, 2 ತ್ತೈಮಾಸಿಕ ಪತ್ರಿಕೆಗಳು ಬರುತ್ತವೆ. ಗ್ರಂಥಾಲಯ ನಿರ್ವಹಣೆಗಾಗಿ ಓರ್ವ ಶಾಖಾ ಗ್ರಂಥಪಾಲಕರು, ಒಬ್ಬ ಸಹಾಯಕರು ಇದ್ದಾರೆ. ಸಮಯಕ್ಕೆ ತಕ್ಕಂತೆ ಗ್ರಂಥಾಲಯ ಓದುಗರಿಗೆ ಲಭ್ಯವಿದ್ದು ಜ್ಞಾನಾಮೃತ ನೀಡುತ್ತಿದೆ. ಆದರೆ, ಅದಕ್ಕೆ ಒಂದು ಸ್ವಂತ ಸೂರಿಲ್ಲ ಎಂಬುದೇ ವಿಪರ್ಯಾಸದ ಸಂಗತಿ.
ಜಾಗ ಇಕ್ಕಟ್ಟಿನಿಂದಾಗಿ ಕೆಲ ಗ್ರಂಥಗಳನ್ನು ದುರಸ್ತಿಯಿರುವ ಇರುವ ಒಂದೇ ಕೋಣೆಯಲ್ಲಿ ಇಡಲಾಗಿದೆ. ಹೆಚ್ಚಿನ ಗ್ರಂಥಗಳನ್ನು ಒಂದೆ ಕಡೆಗೆ ಇಡಲಾಗಿದೆ. ಕನಿಷ್ಠ 40×60, ಗರಿಷ್ಠ 60×100 ಅಳತೆಯ ಜಾಗ ದೊರೆತರೆ ಕಟ್ಟಡ ನಿರ್ಮಿಸಲು ಇಲಾಖೆ ಸಿದ್ಧªವಿದೆ. ಕಳೆದ ಎಂಟು ವರ್ಷಗಳಿಂದ ಪುರಸಭೆಯಿಂದ ಜಾಗ ಪಡೆಯಲು ಓದುಗರೊಂದಿಗೆ ಹೋರಾಟ ಮಾಡುತ್ತಿದ್ದೇವೆ. ಜಾಗ ನೀಡಲು ಒತ್ತಾಯಿಸಿ ಪುರಸಭೆಗೆ ಹತ್ತಾರು ಬಾರಿ ಮನವಿ ನೀಡಿದ್ದೇವೆ. ಶಾಸಕ ಸಿದ್ದು ಸವದಿ, ಮಾಜಿ ಶಾಸಕಿ ಉಮಾಶ್ರೀ ಅವರಿಗೂ ಕೂಡಾ ವಿನಂತಿಸಿದ್ದೇವೆ. ಇದುವರೆಗೂ ಯಾರಿಂದಲೂ ಸಕಾರಾತ್ಮಕ ಸ್ಪಂದನೆ ಸಿಕ್ಕಿಲ್ಲ. -ಜಿ.ಎಚ್. ಪಾಟೀಲ, ಶಾಖಾ ಗ್ರಂಥಪಾಲಕ
-ಚಂದ್ರಶೇಖರ ಮೋರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bagalkot : ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧ ಮಹೇಶ್ ಮರೆಗೊಂಡ ಅಂತ್ಯಸಂಸ್ಕಾರ
ಪತ್ನಿ ಊರಿನತ್ತ ಪ್ರಯಾಣ ಬೆಳೆಸಿದರೆ… ಸಾವಿನ ಮನೆಯ ಕದ ತಟ್ಟಿದ ಯೋಧ ನಾಗಪ್ಪ ಮರೆಗೊಂಡ
Mahalingpur: ಇಂದು ಮೃತ ಯೋಧ ಮಹೇಶ ಅಂತ್ಯಕ್ರಿಯೆ; ಯೋಧನ ಮನೆಗೆ ಸಚಿವ ತಿಮ್ಮಾಪುರ ಭೇಟಿ
Mudhola: ಸಿಲಿಂಡರ್ ಸ್ಫೋಟ: ಹೊತ್ತಿ ಉರಿದ ಮನೆ
Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.