ಸಾಹಿತ್ಯಕಿದೆ ಸಾಮಾಜದಲ್ಲಿ ನ ತಪ್ಪು ತಿದ್ದುವ ಶಕ್ತಿ
ನಾವೆಲ್ಲರೂ ಕನ್ನಡ ಮಾತೆಯ ಸೇವೆ ಮಾಡೋಣ ಎಂದು ಹೇಳಿದರು.
Team Udayavani, Feb 17, 2022, 4:40 PM IST
ಲಾದಗಿ: ನಮ್ಮಲ್ಲಿನ ಹಾಗೂ ಸಮಾಜದಲ್ಲಿನ ತಪ್ಪುಗಳನ್ನು ಸರಿಪಡಿಸುವ, ತಿದ್ದುವ ಶಕ್ತಿ ಸಾಹಿತ್ಯಕ್ಕಿದೆ. ಉತ್ತಮ ಸಮಾಜ, ಅತ್ಯುತ್ತಮ ವ್ಯಕ್ತಿತ್ವ ನಿರ್ಮಾಣದಲ್ಲಿ ಸಾಹಿತಿಗಳ ಪಾತ್ರ ಬಹು ದೊಡ್ಡ ದಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ವಿಶ್ರಾಂತ ನಿರ್ದೇಶಕ ಸಿದ್ದರಾಮ ಮನಹಳ್ಳಿ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು, ತಾಲೂಕು ಹಾಗೂ ಜಿಲ್ಲಾ ಘಟಕ ಬಾಗಲಕೋಟೆ, ಕಲಾದಗಿ ಪಿ.ಎಲ್ ಹೂಗಾರ ದತ್ತಿ ಸಾಹಿತ್ಯ ಪ್ರಶಸ್ತಿ ಪ್ರದಾನ, ಪ್ರತಿಭಾ ಪುರಸ್ಕಾರ ಹಾಗೂ ಉಪನ್ಯಾಸ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಸಾಹಿತ್ಯ ಕೆಟ್ಟವನಾದ ಮನುಷ್ಯನನ್ನು ಸರಿದಾರಿಗೆ ತರಲು ಮಾರ್ಗದರ್ಶನ ಹಾಗೂ ಸಾಮಾನ್ಯ ಮನುಷ್ಯನನ್ನು ಸಾಧಕರನ್ನಾಗಿ ಮಾಡುತ್ತದೆ. ನಾವೆಲ್ಲರೂ ಕನ್ನಡ ಮಾತೆಯ ಸೇವೆ ಮಾಡೋಣ ಎಂದು ಹೇಳಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಬಾಗಲಕೋಟೆ ವಿಶ್ರಾಂತ ಉಪನಿರ್ದೇಶಕ ಎಂ.ಜಿ. ದಾಸರ ಮಾತನಾಡಿ, ಸಾಮಾಜಕ್ಕೆ ದಿಕ್ಕು ದಿಸೆ ತೋರಿಸುವ ಸಾಹಿತ್ಯಿಕ ಪುಸ್ತಕಗಳಿವೆ. ಶಾಲೆ ಶಿಕ್ಷಕರು ಮೌಲ್ಯಗಳನ್ನು ಬಿತ್ತುವ ಕಾರ್ಯ ಮಾಡುತ್ತಾರೆ. ಬದುಕಿಗೆ ಬುದ್ಧಿ ಕಟ್ಟಿಕೊಡುವ ಮೌಲ್ಯ ಕೊಡುವ ಕವಿಗಳು, ಕಥೆಗಾರರು ಇದ್ದಾರೆ. ದಾನ ಅಂದರೆ ಅದು ಒಂದೇ ದಾನ ಅಲ್ಲ. ಜ್ಞಾನವನ್ನು ಕೊಡುವ ಪುಸ್ತಕಗಳೂ ದಾನವೇ ಆಗಿದೆ ಎಂದರು.
ಹಣ್ಣು ಬೆಳೆಗಾರರ ವಿದ್ಯಾ ಸಂಸ್ಥೆ ಕಾರ್ಯದರ್ಶಿ ವಿ.ಜಿ. ದೇಶಪಾಂಡೆ ಮಾತನಾಡಿ, ಮಕ್ಕಳಲ್ಲಿ ಸಾಹಿತ್ಯ ಆಸಕ್ತಿ ಕಡಿಮೆಯಾಗಿದೆ. ಶಿಕ್ಷಕರು ಮಕ್ಕಳಿಗೆ ಸಾಹಿತ್ಯ ಆಸಕ್ತಿ ಬೆಳೆಸಬೇಕು ಎಂದರು. ಈ ಸಂದರ್ಭದಲ್ಲಿ ಬಾಗಲಕೋಟೆ ಜಿಲ್ಲಾ ಕ್ರಿಯಾಶೀಲ ಲೇಖಕ, ಲೇಖಕಿಯರಿಗೆ ಸಾಹಿತ್ಯ ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಲಾಯಿತು. ಕಸಾಪ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ, ತಾತಸಾಬೇಬ ಭಾಂಗಿ, ಜೆ.ಕೆ. ಹೊಸಮನಿ, ಶ್ರೀಶೈಲ ಬಳವಾಟ, ವೈ.ಎಚ್. ವಗ್ಯಾನವರ್, ಎಸ್. ಎಲ್. ವಗ್ಯಾನವರ್ , ದ.ರಾ.ಪುರೋಹಿತರು ಇನ್ನಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gautam Adani: ಯುಪಿಎ ಅವಧಿಯಲ್ಲಿ ರಾಹುಲ್ ಭೇಟಿಗೆ ಯತ್ನಿಸಿದ್ದರೇ ಅದಾನಿ?
Sharad Pawar: ಚುನಾವಣಾ ರಾಜಕೀಯ ನಿವೃತ್ತಿ ಸುಳಿವು ನೀಡಿದ ಎನ್‌ಸಿಪಿ ವರಿಷ್ಠ ಶರದ್
Somy Ali: ಸುಶಾಂತ್‌ರದ್ದು ಕೊಲೆ, ಶವಪರೀಕ್ಷೆ ವರದಿ ಬದಲು: ನಟಿ ಸೋಮಿ!
Maha Polls; ರಾಜ್ ಠಾಕ್ರೆ ಪುತ್ರ ಅಮಿತ್ ಠಾಕ್ರೆಗೆ ಬೆಂಬಲ ನೀಡಲ್ಲ: ಬಿಜೆಪಿ ಯೂಟರ್ನ್!
Mangaluru: ಕೊಂಕಣಿ ಭಾಷೆ, ಸಾಹಿತ್ಯದ ಬೆಳವಣಿಗೆಗೆ ಬೆಂಬಲ ಅಗತ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.