ಲೋಕಸಭಾ ಚುನಾವಣೆ: 4 ನಾಮಪತ್ರ ಸಲ್ಲಿಕೆ
Team Udayavani, Apr 4, 2019, 5:12 PM IST
ಬಾಗಲಕೋಟೆ: ಪ್ರಸ್ತುತ ಲೋಕಸಭಾ ಚುನಾವಣೆಗೆ ಬುಧವಾರ ಒಟ್ಟು ನಾಲ್ಕು ನಾಮಪತ್ರ ಸಲ್ಲಿಕೆಯಾಗಿವೆ. ರಿಪಬ್ಲಿಕ್ ಪಾರ್ಟಿ ಆಪ್ ಇಂಡಿಯಾ ಪಕ್ಷದಿಂದ ಪರಶುರಾಮ ನೀಲನಾಯಕ, ಪಕ್ಷೇತರದಿಂದ ಶಿವರಾಜಕುಮಾರ ತಳವಾರ, ಬಹುಜನ ಮುಕ್ತಿ ಪಾರ್ಟಿ ಪಕ್ಷದಿಂದ ರಾಜೇಂದ್ರ ಆಡಗಲ್ಲ, ಬಹುಜನ ಸಮಾಜ ಪಾರ್ಟಿ ಪಕ್ಷದಿಂದ ಮಹಮ್ಮದಹುಸೇನ ಮುಜಾವರ ನಾಮಪತ್ರ ಸಲ್ಲಿಸಿದ್ದಾರೆ.
ಇಲ್ಲಿಯವರೆಗೆ ಒಟ್ಟು 18 ನಾಮಪತ್ರ ಸಲ್ಲಿಕೆಯಾಗಿದ್ದು, ಪಕ್ಷೇತರದಿಂದ ರವಿ ಪಡಸಲಗಿ 4 ನಾಮಪತ್ರ, ಕಾಂಗ್ರೆಸ್ ಅಭ್ಯರ್ಥಿ ವೀಣಾ ಕಾಶಪ್ಪನವರ 3 ನಾಮಪತ್ರ, ಉತ್ತಮ ಪ್ರಜಾಕೀಯ ಪಾರ್ಟಿಯಿಂದ ಎಂ.ಶಶಿಕುಮಾರ 2, ಹಿಂದೂಸ್ತಾನ ಜನತಾ ಪಾರ್ಟಿಯಿಂದ ರಾಮನಗೌಡ ಬಾಳವಾಡ 2, ಬಿಜೆಪಿಯಿಂದ ಪಿ.ಸಿ.ಗದ್ದಿಗೌಡರ, ಸೆಕ್ಯುಲರ್ ಡೆಮೊಕ್ರೆಟಿಲ್ ಕಾಂಗ್ರೆಸ್‌ನಿಂದ ಬಸವನಗೌಡ ಮೇಟಿ, ರೈತ ಭಾರತ ಪಾರ್ಟಿಯಿಂದ ಮುತ್ತಪ್ಪ ಹಿರೇಕುಂಬಿ, ರಿಪಬ್ಲಿಕ್ ಪಾರ್ಟಿ ಆಪ್ ಇಂಡಿಯಾದಿಂದ ಪರಶುರಾಮ ನೀಲನಾಯಕ, ಪಕ್ಷೇತರದಿಂದ ಶಿವರಾಜಕುಮಾರ ತಳವಾರ, ಬಹುಜನ ಮುಕ್ತಿ ಪಾರ್ಟಿಯಿಂದ ರಾಜೇಂದ್ರ ಆಡಗಲ್ಲ, ಬಹುಜನ ಸಮಾಜ ಪಾರ್ಟಿಯಿಂದ ಮಹಮ್ಮದಹುಸೇನ ಮುಜಾವರ ಅವರಿಂದ ತಲಾ ಒಂದು ನಾಮಪತ್ರ ಸಲ್ಲಿಕೆಯಾಗಿವೆ ಎಂದು ಜಿಲ್ಲಾ ಚುನಾವಣಾಧಿಕಾರಿ ಆರ್.ರಾಮಚಂದ್ರನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಹಾಘಟಬಂಧನ್ ಅಡ್ರೆಸ್ ಇಲ್ಲದಂತಾಗಲಿದೆ: ಗಾಣಗೇರ ಬೀಳಗಿ: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ಆಡಳಿತ ವೈಖರಿ ರಾಜ್ಯದ ಜನತೆಗೆ ಬೇಸರ ತಂದಿದೆ. ಅಭಿವೃದ್ಧಿ ಮಾಡದೆ ಆಂತರಿಕ ಕಲಹದಲ್ಲಿ ಮೈತ್ರಿ ಸರಕಾರ ಬ್ಯೂಸಿಯಾಗಿದೆ. ದೇಶದಲ್ಲಿ ಜನ್ಮತಾಳಿದ ಮಹಾಘಟಬಂಧನ ಲೋಕಸಭೆ ಚುನಾವಣೆ ನಂತರ ಅಡ್ರೆಸ್ ಇಲ್ಲದಂತಾಗಲಿದೆ ಎಂದು ಹೈಕೋರ್ಟ್ ನ್ಯಾಯವಾದಿ ಪ್ರಕಾಶ ಗಾಣಗೇರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ಸಮರ್ಥ ಆಡಳಿತ ನಡೆಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದ್ದಾರೆ. ಮೋದಿ ಆಡಳಿತ ಇಡೀ ವಿಶ್ವದ ಗಮನ ಸೆಳೆದಿದೆ. ಬಲಿಷ್ಠ ಭಾರತ ಕಟ್ಟಲು ದಣಿವರಿಯದ ನಾಯಕ ನರೇಂದ್ರ ಮೋದಿ ಮತ್ತೂಮ್ಮೆ ದೇಶದ ಚುಕ್ಕಾಣಿ ಹಿಡಿಯುವುದು ಅಗತ್ಯವಿದೆ.
ದೇಶದ ಸಮಗ್ರ ಅಭಿವೃದ್ಧಿಯ ದೂರದೃಷ್ಟಿ ಹೊಂದಿದ ಹಾಗೂ ಭಯೋತ್ಪಾದನೆಯ ಹುಟ್ಟಡಗಿಸುವ ಸಮರ್ಥ ನಾಯಕತ್ವದ ಗುಣ ಹೊಂದಿರುವ ಮೋದಿಯವರನ್ನು ಮತ್ತೆ ಈ ದೇಶದ ಪ್ರಧಾನಿಯನ್ನಾಗಿಸಲು ದೇಶವಾಸಿಗಳು ಪಕ್ಷಾತೀತ, ಜಾತ್ಯತೀತವಾಗಿ ಬೆಂಬಲಿಸುವುದು ಅವಶ್ಯ. ಬಿಜೆಪಿ 300ಕ್ಕೂ
ಹೆಚ್ಚು ಸ್ಥಾನ ಗಳಿಸುವ ಮೂಲಕ ಮೋದಿ ಸರಕಾರ ಪುನಃ ರಚನೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಾಗಲಕೋಟೆ ಲೋಕಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಪಿ.ಸಿ.ಗದ್ದಿಗೌಡರು ಈಗಾಗಲೇ ಹ್ಯಾಟ್ರಿಕ್ ಜಯ ಸಾಧಿ ಸಿದ್ದು, ನಾಲ್ಕನೇ ಬಾರಿಗೆ ಕೂಡ ಸಂಸದರಾಗಿ ಆಯ್ಕೆಯಾಗುವುದು ಖಚಿತ. ಸೌಮ್ಯ ಸ್ವಭಾವ, ಸರಳ ಸಜ್ಜನಿಕೆಯ ಜಾತ್ಯತೀತ ವ್ಯಕ್ತಿತ್ವದ ಗದ್ದಿಗೌಡರು ಶುದ್ಧಹಸ್ತರು. ಹಾಗೂ ತತ್ವ, ಸಿದ್ಧಾಂತದ ರಾಜಕಾರಣಿಯಾಗಿದ್ದಾರೆ. ರಾಜಕಾರಣಕ್ಕೆ ಇಂತವರ ಅವಶ್ಯಕತೆ ಬಹಳಷ್ಟಿದೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಧೋಳ: ಹಲಗಲಿಯಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಸಾಥ್
Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
70 ವಿದ್ಯಾರ್ಥಿಗಳಿಗೆ ಒಂದೇ ಶೌಚಾಲಯ; ಮೂತ್ರ ವಿಸರ್ಜನೆಗೆ ಬಯಲೇ ಗತಿ
Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.