Lok Sabha Polls; ಕಂಬಳಿ ಹೊತ್ತು ನಾಮಪತ್ರ ಸಲ್ಲಿಸಿದ ಸಂಯುಕ್ತಾ ಪಾಟೀಲ್
ಪತಿಯಿಂದ 2 ಲಕ್ಷ ಸಾಲ ಪಡೆದ ಸಚಿವರ ಪುತ್ರಿ
Team Udayavani, Apr 15, 2024, 9:55 PM IST
ಬಾಗಲಕೋಟೆ : ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ನ ಘೋಷಿತ ಅಭ್ಯರ್ಥಿ ಸಂಯುಕ್ತಾ ಪಾಟೀಲ, ಸೋಮವಾರ ಹೆಗಲಿಗೆ ಕಂಬಳಿ ಹೊದ್ದು ಸಾಂಕೇತಿಕ ನಾಮಪತ್ರ ಸಲ್ಲಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ, ಮಾಜಿ ಸಚಿವ ಅಜಯಕುಮಾರ ಸರನಾಯಕ, ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ ಹಾಗೂ ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಎಂ.ಬಿ. ಸೌದಾಗರ ಅವರೊಂದಿಗೆ ಚುನಾವಣಾಧಿಕಾರಿ ಜಾನಕಿ ಕೆ.ಎಂ. ಅವರಿಗೆ ತಮ್ಮ ಉಮೇದುವಾರಿಕೆ ಸಲ್ಲಿಸಿದರು.
2 ಕೋಟಿ ಒಡತಿ ಸಚಿವರ ಪುತ್ರಿ :
ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಅವರ ಬಳಿ 2.39 ಲಕ್ಷ ನಗದು ಹಣ ಇದ್ದು, ವಿವಿಧ ಬ್ಯಾಂಕ್‌ಗಳಲ್ಲಿ 57,27,573 ರೂ. ಹಣವಿದೆ. ಅವರ ಪತಿ ಶಿವಕುಮಾರ ತಾಲಂಪಳ್ಳಿ ಅವರ ಬಳಿ 1.72 ಲಕ್ಷ ನಗದು ಹಣವಿದ್ದು, ವಿವಿಧ ಬ್ಯಾಂಕ್‌ಗಳಲ್ಲಿ 42,49,270 ರೂ. ಹಣ ಹೊಂದಿದ್ದಾರೆ.
ಅಭ್ಯರ್ಥಿ ಸಂಯುಕ್ತಾ ಪಾಟೀಲ ಅವರು, ತಮ್ಮ ಪತಿ ಶಿವಕುಮಾರ ಅವರಿಂದ 3.95 ಲಕ್ಷ ಸಾಲ ಮಾಡಿದ್ದಾರೆ. ವಿಶೇಷವೆಂದರೆ ಸಂಯುಕ್ತಾ ಅವರ ಬಳಿ ಯಾವುದೇ ವಾಹನ ಇಲ್ಲ. ಪೊಲೀಸ್ ಕೇಸ್‌ಗಳೂ ಅವರ ಮೇಲಿಲ್ಲ.
ಪತಿಗಿಂತ ಶ್ರೀಮಂತೆ :
ಸಚಿವ ಶಿವಾನಂದ ಪಾಟೀಲರ ಪುತ್ರಿ ಸಂಯುಕ್ತಾ ಪಾಟೀಲ, ಬೀದರನ ಉದ್ಯಮಿ ಶಿವಕುಮಾರ ತಾಲಂಪಳ್ಳಿ ಅವರನ್ನು ಮದುವೆಯಾಗಿದ್ದು, ಉದ್ಯಮಿಯಾಗಿರುವ ಶಿವಕುಮಾರಗಿಂತ ಸಂಯುಕ್ತಾ ಅವರೇ ಶ್ರೀಮಂತೆಯಾಗಿದ್ದಾರೆ. ಸಂಯುಕ್ತಾ ಅವರು ಒಟ್ಟು 93,66,574.74 ರೂ. ಚರಾಸ್ಥಿ ಹೊಂದಿದ್ದು, 1,12,77,550 ರೂ. ಸ್ಥಿರಾಸ್ಥಿ ಹೊಂದಿದ್ದಾರೆ. ಚರ ಮತ್ತು ಸ್ಥಿರಾಸ್ಥಿ ಸೇರಿ ಒಟ್ಟು 2,06,44,124 ರೂ. ಆಸ್ತಿಯ ಒಡತಿಯಾಗಿದ್ದಾರೆ. ಸುಮಾರು 47 ಎಕರೆ ಭೂಮಿ ಕೂಡ ಸಹಿತ ಹೊಂದಿದ್ದಾರೆ.
ಪತಿ ಶಿವಕುಮಾರ 1.04 ಕೋಟಿ ಚರಾಸ್ಥಿ ಹೊಂದ್ದು, ಅವರ ಬಳಿ ಯಾವುದೇ ಸ್ಥಿರಾಸ್ಥಿ ಇಲ್ಲ. 59,95,185 ರೂ. ಸಾಲ ಮಾಡಿದ್ದಾರೆ. ಸಂಯುಕ್ತಾ ಅವರು ಪತಿ ಶಿವಕುಮಾರ ಹೆಸರಿನಲ್ಲಿ 8,95,180 ರೂ. ಶೈಕ್ಷಣಿಕ ಸಾಲ ಕೂಡ ಮಾಡಿದ್ದಾರೆ.
500 ಗ್ರಾಂ ಚಿನ್ನ :
ಸಂಯುಕ್ತಾ ಅವರು 500ಗ್ರಾಂ ಚಿನ್ನ, 5 ಕೆ.ಜಿ. ಬೆಳ್ಳಿ ಹೊಂದಿದ್ದು, ಪತಿಯ ಬಳಿ 510 ಗ್ರಾಂ ಚಿನ್ನವಿದೆ. ಸಂಯುಕ್ತಾ ಅವರು 2023 24ನೇ ಸಾಲಿನ್ಲಲಿ 21,92,600 ರೂ. ಆದಾಯ ಘೋಷಿಸಿಕೊಂಡಿದ್ದಾರೆ.
ಆಸ್ತಿ ವಿವರ
ಸಂಯುಕ್ತಾ ಅವರ ಒಟ್ಟು ಆಸ್ತಿ : 2,06,44,124 ರೂ
ಒಟ್ಟು ಆದಾಯ : 21,92,600 ರೂ. (2023 24)
ಕೈಯಲ್ಲಿರುವ ನಗದು : 2.39 ಲಕ್ಷ
ಚರಾಸ್ತಿ : 93,66,574.74 ರೂ.
ಸ್ಥಿರಾಸ್ಥಿ : 1,12,77,550 ರೂ.
ಸಾಲ : 3.95 ಲಕ್ಷ ರೂ.
ಭೂಮಿ : ವಿಜಯಪುರದ ವಿವಿಧೆಡೆ 47 ಎಕರೆ ಭೂಮಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bagalkot : ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧ ಮಹೇಶ್ ಮರೆಗೊಂಡ ಅಂತ್ಯಸಂಸ್ಕಾರ
ಪತ್ನಿ ಊರಿನತ್ತ ಪ್ರಯಾಣ ಬೆಳೆಸಿದರೆ… ಸಾವಿನ ಮನೆಯ ಕದ ತಟ್ಟಿದ ಯೋಧ ನಾಗಪ್ಪ ಮರೆಗೊಂಡ
Mahalingpur: ಇಂದು ಮೃತ ಯೋಧ ಮಹೇಶ ಅಂತ್ಯಕ್ರಿಯೆ; ಯೋಧನ ಮನೆಗೆ ಸಚಿವ ತಿಮ್ಮಾಪುರ ಭೇಟಿ
Mudhola: ಸಿಲಿಂಡರ್ ಸ್ಫೋಟ: ಹೊತ್ತಿ ಉರಿದ ಮನೆ
Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Puttur: ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಕಾರು; ಮೂವರ ದುರ್ಮರಣ
INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್ ಪಂತ್ ವಿರುದ್ದ ಕಿಡಿಕಾರಿದ ಗಾವಸ್ಕರ್
Hathras: ಶಾಲೆಗೆ ರಜೆ ಸಿಗಬೇಕೆಂದು 2ನೇ ತರಗತಿ ಮಗುವನ್ನು ಕೊಂದ ವಿದ್ಯಾರ್ಥಿ!
Meghalaya: ಚರ್ಚ್‌ಗೆ ನುಗ್ಗಿ ಜೈ ಶ್ರೀರಾಮ್ ಘೋಷಣೆ: ಕೇಸು ದಾಖಲು
Honey Trap; ಗುತ್ತಿಗೆದಾರನನ್ನು ಟೀಗೆ ಕರೆದು ಖೆಡ್ಡಾಕ್ಕೆ ಕೆಡವಿದಳು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.