ಲೋಕಾಪುರ: ಮಧ್ವ ಜಯಂತಿ ಆಚರಣೆ
Team Udayavani, Feb 7, 2020, 12:09 PM IST
ಲೋಕಾಪುರ: ವೇದವ್ಯಾಸರ ಬ್ರಹ್ಮಸೂತ್ರಗಳಿಗೆ ಸುಲಭ ಮತ್ತು ಸಂಶಯಾತೀತ ಭಾಷ್ಯಗಳನ್ನು ರಚಿಸಿದವರು ಜಗದ್ಗುರು ಮದ್ವಾಚಾರ್ಯರು ಎಂದು ಆರ್.ಎಸ್. ಜೋಶಿ ಹೇಳಿದರು.
ಸ್ಥಳೀಯ ರಾಘವೇಂದ್ರ ಮಠದಲ್ಲಿ ವಿಪ್ರ ಸಮಾಜದ ಆಶ್ರಯದಲ್ಲಿ ನಡೆದ ಮಧ್ವಜಯಂತಿ ಉತ್ಸವದಲ್ಲಿ ಅವರು ಮಧ್ವಜಯಂತಿ ಸಂದೇಶ ಉಪನ್ಯಾಸ ನೀಡಿ ಮಾತನಾಡಿದ ಅವರು, ಜಗತ್ತಿನ ಅಸ್ತಿತ್ವ ಮತ್ತು ಭಗವಂತನು ಸರ್ವೋತ್ತಮದ ಬಗ್ಗೆ ಸಾಮಾನ್ಯರಲ್ಲಿರಬಹುದಾದ ಗೊಂದಲಗಳಿಗೆ ಮಧ್ವಾಚಾರ್ಯರು ನೀಡಿದ ಸುಲಭತತ್ವ ಮತ್ತು ಭಕ್ತಿ ಸಂದೇಶಗಳು ಸರ್ವರಿಗೂ ಅನುಕರಣೀಯವಾಗಿವೆ ಎಂದರು.
ನಿವೃತ್ತ ಶಿಕ್ಷಕ ಗುರುರಾಜ ಜೋಶಿ ಮಧ್ವಾಚಾರ್ಯರ ಸಂದೇಶಗಳನ್ನು ಭಕ್ತರಿಗೆ ತಿಳಿಸಿದರು. ಮಧ್ವನವಮಿ ನಿಮಿತ್ತ ಅಷ್ಟೋತ್ತರ, ಸತ್ಯನಾರಾಯಣ ಪೂಜೆ, ಹೋಮ, ಪಲ್ಲಕ್ಕಿ ಸೇವೆ, ಅಭಿಷೇಕ, ಮಂಗಳಾರತಿ, ಮಹಾನೈವೇದ್ಯ, ಅನ್ನಸಂತರ್ಪಣೆ, ರಾಘವೇಂದ್ರ ಮಠದಲ್ಲಿ ರಥೋತ್ಸವ ಜರುಗಿತು. ರಾಘವೇಂದ್ರ ಮಠದಲ್ಲಿ ರಥೋತ್ಸವ ಸಾಗುತ್ತಿದ್ದಂತೆ ಮಹಿಳೆಯರು, ಯುವಕರು, ಮಕ್ಕಳು ಕೋಲಾಟ, ಭಜನೆ, ಕೀರ್ತನೆಗಳು ನಡೆದವು. ಸಮಾಜ ಬಾಂಧವರಾದ ಬಿ.ಡಿ. ಚಿನಗುಂಡಿ, ಬಿ.ಎಲ್. ಬಬಲಾದಿ, ಆನಂದಚಾರ್ಯ ಜಂಬಗಿ, ಅಣ್ಣಾರಾವ ದೇಶಪಾಂಡೆ, ಗೋವಿಂದರಾವ್ ಕುಲಕರ್ಣಿ, ಗೋಪಾಲ ದೇಶಪಾಂಡೆ, ಸಂತೋಷ ದೇಶಪಾಂಡೆ, ಪವನ ಸೋಮಾಪುರ, ಹಣಮಂತರಾವ ಕುಲಕರ್ಣಿ, ರಾಹುಲ ಗೂಡುರ, ರಾಘವೇಂದ್ರ ಮುರಗೋಡ, ಲಲಿತಾ ಜೋಶಿ, ಹೇಮಕ್ಕಾ ಜೋಶಿ, ಪದ್ಮಾವತಿ ಕುಲಕರ್ಣಿ, ಮಂಜುಳಾ ಬಬಲಾದಿ, ವಿದ್ಯಾ ಕುಲಕರ್ಣಿ, ಉಮಾ ಕುಲಕರ್ಣಿ, ರತ್ನಾ ದೇಶಪಾಂಡೆ, ವನಿತಾ ಜೋಶಿ, ರಾಧಿಕಾ ಸೋಮಾಪುರ, ಆರತಿ ಜಂಬಗಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಧೋಳ: ಹಲಗಲಿಯಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಸಾಥ್
Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
70 ವಿದ್ಯಾರ್ಥಿಗಳಿಗೆ ಒಂದೇ ಶೌಚಾಲಯ; ಮೂತ್ರ ವಿಸರ್ಜನೆಗೆ ಬಯಲೇ ಗತಿ
Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Gundlupete: ವಿದ್ಯುತ್ ತಂತಿಗೆ ಸಿಲುಕಿ ಮರಿಯಾನೆ ಸಾವು
Constitution: ಕಾಂಗ್ರೆಸ್ಸಿಗರಿಂದ ಸಂವಿಧಾನದ ರಕ್ಷಕರಂತೆ ಕಪಟ ನಾಟಕ: ಬಿ.ವೈ.ವಿಜಯೇಂದ್ರ
Sirsi: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ
EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್ ಟೀಕೆ
Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.