ಹಸಿರ ಸಿರಿಗೆ ಮಾದರಿಯಾದ ಮಲ್ಲಾಪುರ ಸರ್ಕಾರಿ ಶಾಲೆ
Team Udayavani, Jan 23, 2019, 9:50 AM IST
ಲೋಕಾಪುರ: ನಮ್ಮೂರ ಶಾಲೆ ಎಂದು ಹೆಗ್ಗಳಿಕೆ ಪಾತ್ರವಾದ ಮಲ್ಲಾಪುರ ಎಸ್.ಎಲ್. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಹಸಿರು ಉದ್ಯಾನವನ ಕಣ್ಮನ ಸೆಳೆಯುತ್ತದೆ.
ಶಾಲೆ ಆವರಣದಲ್ಲಿ ತೆಂಗಿನಮರ, ಬಿಲ್‌ಪತ್ರಿ ಬಾದಾಮಿ ಗಿಡ, ತೆಂಗಿನಮರ, ಅಶೋಕಗಿಡ, ಕ್ರಿಸ್‌ಮಸ್ ಗಿಡ, ಬೇವಿನಮರ, ನುಗ್ಗೆಕಾಯಿ ಗಿಡ, ಕರಿಬೇವು ಗಿಡಗಳಿವೆ. ಅದಲ್ಲದೇ ಅಮೃತ ಬಳ್ಳಿ, ಬೆಟ್ಟದ ನಲ್ಲಿಕಾಯಿ, ತುಳಸಿ, ದಾಸವಾಳ, ಪುದೀನಾ ಸೇರಿದಂತೆ ಔಷಧೀಯ ಗಿಡಗಳು ಹಾಗೂ ಗುಲಾಬಿ ಹೂಗಳು ಬೆಳೆಸಿದ ಹೂದೋಟ ಪರಿಸರ ಪ್ರೇಮಿಗಳನ್ನು ಕೈ ಬೀಸಿ ಕರೆಯುತ್ತಿದೆ.
ಮುಖ್ಯ ಶಿಕ್ಷಕ ಎಸ್.ಬಿ. ತಿರಕನ್ನವರ, ಸಹ ಶಿಕ್ಷಕರಾದ ಅರವಿಂದ ಪಾಟೀಲ, ಎಚ್.ಎ. ಕೊಳಚಿ ಎಸ್.ಸಿ. ವಾರಿಕಲ್ಲಮಠ ಬಿ.ಆರ್. ದಂಡಿನದುರ್ಗಿ ಆರ್.ಎಸ್. ಮುದ್ದಾಪುರ, ಎಸ್‌ಡಿಎಂಸಿ ಅದ್ಯಕ್ಷ ಹಣಮಂತ ಪರಪ್ಪನವರ ಹಾಗೂ ಸದಸ್ಯರ ಮುಂದಾಳತ್ವದಲ್ಲಿ ಗ್ರಾಮಸ್ಥರು ಕೈ ಜೋಡಿಸಿ ಶಾಲೆಯಲ್ಲಿ ಉತ್ತಮ ವಾತಾವರಣ ನಿರ್ಮಿಸಿ ಹಸಿರು ಉದ್ಯಾನವನವನ್ನಾಗಿ ಮಾಡಿದ್ದಾರೆ.ಗ್ರಾಮಸ್ಥರು, ಶಿಕ್ಷಕರು ಹಾಗೂ ಎಸ್‌ಡಿಎಂಸಿ ಸದಸ್ಯರು ಶ್ರಮ ವಹಿಸಿ ದೇಣಿಗೆಯಿಂದ ಶಾಲೆ ಆವರಣದಲ್ಲಿ ಸುಮಾರು 2.50 ಲಕ್ಷ ರೂ. ವೆಚ್ಚದಲ್ಲಿ ಸರಸ್ವತಿ ಮಂದಿರ ಹಾಗೂ ಶಾಲೆ ಮುಂಭಾಗದಲ್ಲಿ 45 ಸಾವಿರ ರೂ. ವೆಚ್ಚದಲ್ಲಿ ದ್ವಾರ ಫಲಕ ನಿರ್ಮಿಸಿದ್ದಾರೆ.
ಮಲ್ಲಾಪುರ ಎಸ್.ಎಲ್ ಶಾಲೆಯಲ್ಲಿ 1ರಿಂದ 8ನೇ ತರಗತಿವರೆಗೆ ಒಟ್ಟು 120 ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಪ್ರತಿವರ್ಷ ಮಕ್ಕಳು ಮೊರಾರ್ಜಿ ವಸತಿ, ಕಿತ್ತೂರರಾಣಿ ಚನ್ನಮ್ಮ, ರನ್ನ ವಸತಿ ಶಾಲೆಗಳಿಗೆ ಆಯ್ಕೆಯಾಗುತ್ತಿರುವುದು ವಿಶೇಷ. ಖಾಸಗಿ ಶಾಲೆಗಿಂತಲೂ ಗ್ರಾಮದ ಸರ್ಕಾರಿ ಶಾಲೆ ಯಾವುದರಲ್ಲಿಯೂ ಕಡಿಮೆ ಇಲ್ಲ. ಉತ್ತಮ ಪರಿಸರದಲ್ಲಿ ಶಿಕ್ಷಕವೃಂದ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದಾರೆ. ಆದರೆ, ಶಿಕ್ಷಣ ಇಲಾಖೆಯವರು ಇಂತಹ ಶಾಲೆ ಗುರುತಿಸಿ ಪ್ರೋತ್ಸಾಹ ನೀಡದೇ ಇರುವುದು ವಿಷಾದನೀಯ ಎಂದು ಗ್ರಾಮಸ್ಥರಾದ ಶಿವಕುಮಾರ ಪಾಟೀಲ ಮತ್ತು ಹಣಮಂತ ಪಾಟೀಲ ಹೇಳುತ್ತಾರೆ.
ಸರ್ಕಾರಿ ಶಾಲೆಯಲ್ಲಿ ಶಿಕ್ಷಕ ವೃಂದ ಹಾಗೂ ಮಕ್ಕಳು ವಿದ್ಯಾಭ್ಯಾಸದ ಜೊತೆಗೆ ಉತ್ತಮ ಪರಿಸರ ನಿರ್ಮಾಣ ಮಾಡಿದ್ದು ಹೆಮ್ಮೆಯ ಸಂಗತಿ. ಜಿಲ್ಲೆಯಲ್ಲಿ ನಮ್ಮ ಗ್ರಾಮದ ಸರ್ಕಾರಿ ಶಾಲೆ ಮಾದರಿಯಾಗಿದೆ.
•ಹಣಮಂತ ಪರಪ್ಪನವರ,
ಎಸ್‌ಡಿಎಂಸಿ ಅಧ್ಯಕ್ಷ
ಸಲೀಮ ಐ. ಕೊಪ್ಪದ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kulageri Cross: ಹೂಳು ತುಂಬಿದ ಕಾಲುವೆ…ಪೋಲಾಗುತ್ತಿದೆ ಮಲಪ್ರಭಾ ಎಡದಂಡೆ ಕಾಲುವೆ ನೀರು…
New year : ಬಾಗಲಕೋಟೆ ಜಿಲ್ಲೇಲಿ ಅಭಿವೃದ್ಧಿ ಬಾಗಿಲು ತೆರೆಯಲಿ-ಸ್ಥಳಾಂತರವಾಗಬೇಕಿದೆ ಐಹೊಳೆ!
Rabakavi: ಬ್ರಹ್ಮಾನಂದ ಉತ್ಸವ; ಗಮನ ಸೆಳೆದ ರೊಟ್ಟಿ ಜಾತ್ರೆ
Bagalkot : ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧ ಮಹೇಶ್ ಮರೆಗೊಂಡ ಅಂತ್ಯಸಂಸ್ಕಾರ
ಪತ್ನಿ ಊರಿನತ್ತ ಪ್ರಯಾಣ ಬೆಳೆಸಿದರೆ… ಸಾವಿನ ಮನೆಯ ಕದ ತಟ್ಟಿದ ಯೋಧ ನಾಗಪ್ಪ ಮರೆಗೊಂಡ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chikkamagaluru: ರಾಜ್ಯ ಹೆದ್ದಾರಿ ರಸ್ತೆಯಲ್ಲಿ ರೌಂಡ್ಸ್ ಹಾಕಿದ ಒಂಟಿಸಲಗ
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
Udupi: ಬೀದಿ ನಾಯಿಗಳಿಗೆ 29.13 ಲಕ್ಷ ರೂ. ವೆಚ್ಚ!
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
Mangaluru: ಪಿಎಂ ಸ್ವನಿಧಿ ಯೋಜನೆ; ನಗರದಲ್ಲಿ 17.87 ಕೋ.ರೂ. ಸಾಲ ವಿತರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.