ಬಾದಾಮಿಯಲ್ಲಿ ಪ್ರೇಮಿಗಳ ಮದುವೆ
Team Udayavani, Apr 20, 2021, 7:40 PM IST
ಬಾದಾಮಿ: ಪಟ್ಟಣದ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಸೋಮವಾರ ಪ್ರೇಮಿಗಳಾದ ಶಿಕಾರಿಪುರ ತಾಲೂಕಿನಲ್ಲಿ ಶಿಕ್ಷಕರಾಗಿರುವ ಮೌನೇಶ ಕಮ್ಮಾರ ಹಾಗೂ ವಸತಿ ನಿಲಯದಲ್ಲಿ ಕೆಲಸ ನಿರ್ವಹಿಸುತ್ತಿರುವ ಬಾದಾಮಿ ತಾಲೂಕಿನ ನಸಬಿ ಗ್ರಾಮದ ಅನ್ನಪೂರ್ಣಾ ಅವರ ವಿವಾಹ ಜರುಗಿತು.
ನಗರದ ಕಂಠಿ ವೀರಭದ್ರೇಶ್ವರ ದೇವಸ್ಥಾನದಲ್ಲಿ ಹಿರಿಯರ ಸಮ್ಮುಖದಲ್ಲಿ ಶಾಸ್ತ್ರೋಸ್ತವಾಗಿ ಹಸೆಮಣೆ ಏರಿದ ಅವರು, ಉಪನೋಂದಣಾಧಿಕಾರಿ ಕಚೇರಿಗೆ ತೆರಳಿ ವಿವಾಹ ನೋಂದಣಿ ಮಾಡಿಸಿದರು.
ಮೌನೇಶ ಆರು ತಿಂಗಳ ಹಿಂದೆ ಬಾಗಲಕೋಟದಲ್ಲಿ ಶಿಕ್ಷಕನಾಗಿ ಕೆಲಸ ನಿರ್ವಹಿಸುತ್ತಿದ್ದ. ಅನ್ನಪೂರ್ಣ ವಸತಿ ನಿಲಯವೊಂದರಲ್ಲಿ ವಾಸವಾಗಿದ್ದಳು.ಅಲ್ಲಿ ಇಬ್ಬರಿಗೂ ಪರಿಚಯವಾಗಿತ್ತು. ಪರಿಚಯ ಪ್ರೇಮಕ್ಕೆ ತಿರುಗಿತ್ತು. ಪುರಸಭೆ ಅಧ್ಯಕ್ಷ ಮಂಜುನಾಥ ಹೊಸಮನಿ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ನಾಗರಾಜ ಕಾಚೆಟ್ಟಿ, ಸದಸ್ಯ ರೆಹಮಾನ ಕೆರಕಲಮಟ್ಟಿ, ಬೇಲೂರಪ್ಪನವರ ಮದುವೆಗೆ ಸಾಕ್ಷಿಯಾಗಿ ಶುಭ ಹಾರೈಸಿದರು.
ಅನ್ನಪೂರ್ಣಾ ತಂದೆ ಬಸಪ್ಪ ಕುರಿ, ತಾಯಿ ಮತ್ತು ಸಂಬಂಧಿಕರು, ಹನಮಂತ ಅಪ್ಪಣ್ಣವರ, ಉಮೇಶ ಮಂಕಣಿ, ಹನಮಂತ ಜೋಗಿನ, ಮುರಳಿ ಕಟ್ಟಿಮನಿ, ಹನಮಂತ ಪೂಜಾರ, ನಾಗೇಶ ತಿಪ್ಪನ್ನವರ, ಕೋರಣ್ಣವರ, ಸೂರಪ್ಪ, ಶರಣು ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.