ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾದ ಮಹಾಲಿಂಗಪುರ ಮೊಹರಂ ಹಬ್ಬ

Team Udayavani, Jul 29, 2023, 10:19 PM IST

1-sadsadasd

ಮಹಾಲಿಂಗಪುರ : ಮೋಹರಂ ಹಬ್ಬವನ್ನು ಪಟ್ಟಣದ ಹಿಂದೂ-ಮುಸ್ಲಿಂ ಬಾಂಧವರು ಶನಿವಾರ ಕೊನೆಯ ದಿನ ಮುಂಜಾನೆಯಿಂದ ರಾತ್ರಿವರೆಗೆ ಬಹು ವಿಜೃಂಭಣೆಯಿಂದ ಆಚರಿಸಿದರು. ಮಹಾಲಿಂಗಪುರದಲ್ಲಿ ಪ್ರತಿವರ್ಷ ನಡೆಯುವ ಮೊಹರಂ ಹಬ್ಬವು ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾಗಿದೆ.

ಒಟ್ಟು ಹತ್ತು ದಿನಗಳ ಆಚರಣೆ ಇದಾಗಿದ್ದು, ಇಸ್ಲಾಂ ಧರ್ಮದ ಹೊಸ ವರ್ಷವೂ ಆರಂಭಗೊಳ್ಳುತ್ತದೆ. ಮೊದಲ ದಿವಸ ಗುದ್ದಲಿ ಹಾಕಿ, ಐದು ದಿವಸಗಳ ನಂತರ ಪಟ್ಟಣದ ಏಳು ಕಡೆಗಳಲ್ಲಿ ಲಾಲಸಾಬಲಿ, ಮೌಲಾಲಿ, ಹಸನ್-ಹುಸೇನ್ ಎಂಬ ಪಂಜೆಗಳನ್ನು ಪ್ರತಿಷ್ಠಾಪಿಸಲಾಗಿತ್ತು. ಈ ಪಂಜೆಗಳಿಗೆ ಭಕ್ತರು ನೀಡಿದ ಬಣ್ಣ ಬಣ್ಣದ ಬಟ್ಟೆಗಳನ್ನು ತೊಡಿಸಿ, ನಾಣ್ಯಗಳ ಪುತ್ತಳಿ ಸರಗಳನ್ನು ತೊಡಿಸಿ ಜನತೆಯಲ್ಲಿ ದೈವತ್ವದ ಭಾವ ಪ್ರಕಟಗೊಳ್ಳುವಂತೆ ಶೃಂಗಾರಗೊಳಿಸಲಾಗಿತ್ತು.

ಸಂಪ್ರದಾಯ 
ಐದು ದಿವಸಗಳಲ್ಲಿ ಎಲ್ಲ ಸಮೂದಾಯಗಳ ಭಕ್ತರು ಈ ಪಂಜೆಗಳಿಗೆ ಸಿಹಿ ಖಾದ್ಯ ಚೋಂಗೆ ಸಹಿತ ಬಗೆ ಬಗೆಯ ನೈವೇದ್ಯಗಳನ್ನು ಪಂಜೆ ಇರುವೆಡೆಗೆ ತಂದು ಸಮರ್ಪಿಸಿ, ಮನೆಗಳಲ್ಲಿರುವ ಸದಸ್ಯರೆಲ್ಲರೂ ಕೈಗೆ ಕೆಂಪು ದಾರ (ಲಾಡಿ) ಕಟ್ಟಿಕೊಂಡು ದೇವರು ಹೊಳೆಗೆ ಹೋಗುವ ಕೊನೆ ದಿವಸಗಳವರೆಗೆ ಪಕೀರ್ ಆಗಿ ತಮ್ಮ ಪೂರ್ವಜರ ಸಂಪ್ರದಾಯ ನೆರೆವೇರಿಸಿದರು.

ಭಕ್ತರ ಮನೆಗಳಿಗೆ ಭೇಟಿ
ಪಂಜೆಗಳು ಈ ಐದು ದಿವಸಗಳಲ್ಲಿ ಮೂರು ಬಾರಿ ಪಟ್ಟಣದ ಪ್ರತಿ ಭಕ್ತರ ಮನೆಗೆ ಭೇಟಿ ನೀಡಿ ಭೂತ, ಭವಿಷ್ಯತ್ ಹಾಗೂ ವರ್ತಮಾನ ಕಾಲದ ಬಗ್ಗೆ ಉಭಯ ಕುಶಲೋಪರಿ ನಡೆಸಿ ಭಕ್ತರಲ್ಲಿ ಧನ್ಯತಾಭಾವ ಮೂಡಿಸಿದವು. ಬೇಡಿಕೊಂಡಂತೆ ಬರುವ ವರ್ಷ ಪರಿವಾರದಲ್ಲಿ ಇಷ್ಟಾರ್ಥವೇನಾದರು ಸಿದ್ಧಿಸಿದರೆ ಹರಕೆಯ ವಸ್ತುಗಳನ್ನು ಪಂಜೆಗಳಿಗೆ ತೊಡಿಸುತ್ತಾರೆ.

ಮೆರವಣಿಗೆ
ಕೊನೆಯ ದಿವಸ ಶನಿವಾರ ಮುಂಜಾನೆಯಿಂದ ಎಲ್ಲ ಪಂಜೆಗಳು ಭಕ್ತರ ಮನೆಗಳಿಗೆ ಭೇಟಿ ನೀಡಿ ನಡುಚೌಕಿ ಪ್ರದೇಶದಲ್ಲಿ ಬಣ್ಣ ಬಣ್ಣದ ಆಕರ್ಷಕ ತಾಬೂತ್ (ಡೋಲಿ)ಗಳ ಜೊತೆಯಲ್ಲಿ ಸೇರಿ, ಮಹಾಲಿಂಗಪುರದ ಆರಾಧ್ಯ ಶ್ರೀಗುರು ಮಹಾಲಿಂಗೇಶ್ವರ ದೇವಸ್ಥಾನದ ಕಡೆಗೆ ಹೆಜ್ಜೆ ಹಾಕಿದಾಗ, ಸಕಲ ವಾದ್ಯ ವೃಂದಗಳು ತಮ್ಮ ಸಂಗೀತ ನೀನಾದದಿಂದ ಮೋಹರಂ ಮೆರವಣಿಗೆಯ ಮೆರಗು ಹೆಚ್ಚಿಸಿದ್ದವು.

ಶ್ರೀಮಠದಿಂದ ಪೂಜೆ
ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಆಗಮಿಸಿದ ಪಂಜೆಗಳಿಗೆ ಮಠದ ಪೀಠಾಧಿಪತಿ ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಪೂಜೆ ನೆರವೇರಿಸಿ ಊದ ಹಾಕಿದರು. ಪ್ರತಿವರ್ಷ ಮೊಹರಂ ಕೊನೆಯ ದಿನ ಪಂಜೆಗಳು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸುವದು ಪಟ್ಟಣದ ವಾಡಿಕೆಯಾಗಿದ್ದು. ಇದು ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾಗಿದೆ.

ಬಸವ ತೀರ್ಥಕ್ಕೆ ಪಂಜೆಗಳು
ಸಂಜೆ ಮತ್ತೆ ವಾಡಿಕೆಯಂತೆ ದೇವಸ್ಥಾನಕ್ಕೂ ಮತ್ತು ಗೌಡರ ಮನೆಗೆ ಭೇಟಿ ನೀಡಿ ನೇರವಾಗಿ ಅಪ್ಪನವರ ಬಸವತೀರ್ಥಕ್ಕೆ ಆಗಮಿಸಿ ಕೊನೆಯದಾಗಿ ಪಂಜೆಗಳು ಬಸವ ತೀರ್ಥದಲ್ಲಿ ಮಿಂದೆದ್ದು ಮೋಹರಂ ಹಬ್ಬಕ್ಕೆ ಇತಿಶ್ರೀ ಹಾಡಿದವು. ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ ಬಂದ ಡೋಲಿಗಳಿಗೆ ಜನರು ಖರ್ಜೂರ ಎಸೆದು ತಮ್ಮ ಭಕ್ತಿ ಸಮರ್ಪಿಸಿದರು. ರಾತ್ರಿ ಗಂಟೆಯ ನಂತರ ಡೋಲಿಗಳನ್ನು ಹೊಳೆಗೆ ಒಯ್ದು ವಿಸರ್ಜನೆ ಮಾಡುವ ಮೂಲಕ ಮೊಹರಂ ಹಬ್ಬವು ಸಮಾಪ್ತಿಗೊಂಡಿತು.

ವರದಿ: ಚಂದ್ರಶೇಖರ ಮೋರೆ

ಟಾಪ್ ನ್ಯೂಸ್

Haryana: ಸೋಲಿನ ಬೆನ್ನಲ್ಲೇ ಕಾಂಗ್ರೆಸ್‌ ಮೈತ್ರಿಕೂಟದಲ್ಲಿ ತಲ್ಲಣ

Haryana: ಸೋಲಿನ ಬೆನ್ನಲ್ಲೇ ಕಾಂಗ್ರೆಸ್‌ ಮೈತ್ರಿಕೂಟದಲ್ಲಿ ತಲ್ಲಣ

Women’s T20 World Cup: ಸ್ಮತಿ, ಹರ್ಮನ್‌ ಭರ್ಜರಿ ಆಟ, ಲಂಕಾ ವಿರುದ್ಧ ಭಾರತಕ್ಕೆ ಗೆಲುವು

Women’s T20 World Cup: ಸ್ಮತಿ, ಹರ್ಮನ್‌ ಭರ್ಜರಿ ಆಟ, ಲಂಕಾ ವಿರುದ್ಧ ಭಾರತಕ್ಕೆ ಗೆಲುವು

T20 Cricket: ಬಾಂಗ್ಲಾದೇಶಕ್ಕೆ 86 ರನ್‌ ಸೋಲು… 2-0 ಮುನ್ನಡೆ; ಭಾರತಕ್ಕೆ ಟಿ20 ಸರಣಿ

T20 Cricket: ಬಾಂಗ್ಲಾದೇಶಕ್ಕೆ 86 ರನ್‌ ಸೋಲು… 2-0 ಮುನ್ನಡೆ; ಭಾರತಕ್ಕೆ ಟಿ20 ಸರಣಿ

Multan Test : ಪಾಕಿಸ್ಥಾನಕ್ಕೆ ಇಂಗ್ಲೆಂಡ್‌ ತಿರುಗೇಟು… ರೂಟ್‌, ಬ್ರೂಕ್‌ ಅಜೇಯ

Multan Test : ಪಾಕಿಸ್ಥಾನಕ್ಕೆ ಇಂಗ್ಲೆಂಡ್‌ ತಿರುಗೇಟು… ರೂಟ್‌, ಬ್ರೂಕ್‌ ಅಜೇಯ

Munirathna-case

Munirathna Case: ಭದ್ರತೆ ಕೊಟ್ಟರೆ ಮಾಜಿ ಸಿಎಂಗಳ ಹನಿಟ್ರ್ಯಾಪ್‌ ಬಹಿರಂಗ: ಸಂತ್ರಸ್ತೆ

Tata-Era

Rathan Tata Era End: ಅಜ್ಜಿಯ ಆರೈಕೆಯಲ್ಲಿ ಬೆಳೆದ ರತನ್‌ ಟಾಟಾ

Madhu-Bangarappa

Exam: ಈ ವರ್ಷ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಕೃಪಾಂಕ ಇಲ್ಲ: ಶಿಕ್ಷಣ ಸಚಿವ ಮಧು ಬಂಗಾರಪ್ಪ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8

Kaladgi:ಜೆಸಿಬಿಚಾಲಕನ ನಿರ್ಲಕ್ಷ್ಯ ಕಾಮಗಾರಿ;ಪೈಪ್ ಲೈನ್ ಒಡೆದು ಸಾಕಷ್ಟು ಪ್ರಮಾಣದ ನೀರುಪೋಲು

Mudhol: ಕಾರು ಅಪಘಾತ… ಜಾನಪದ‌ ಕಲಾವಿದ ಗುರುರಾಜ ಹೊಸಕೋಟಿ ಅವರಿಗೆ ಗಾಯ

Mudhol: ಕಾರು ಅಪಘಾತ… ಜಾನಪದ‌ ಕಲಾವಿದ ಗುರುರಾಜ ಹೊಸಕೋಟಿ ಅವರಿಗೆ ಗಾಯ

Gram panchayat: ಸ್ಥಾನ ಬಿಟ್ಟುಕೊಡದ ಉಪಾಧ್ಯಕ್ಷೆ ವಿರುದ್ದ ಕೆಂಡಾಮಂಡಲಳಾದ ಸದಸ್ಯೆ

Gram panchayat: ಸ್ಥಾನ ಬಿಟ್ಟುಕೊಡದ ಉಪಾಧ್ಯಕ್ಷೆ ವಿರುದ್ದ ಕೆಂಡಾಮಂಡಲಳಾದ ಸದಸ್ಯೆ

MUDA Case: ವಿಪಕ್ಷಗಳಿಂದ ಸಿಎಂ ಶಕ್ತಿ ಜನಪ್ರೀಯತೆ ಕುಗ್ಗಿಸುವ ಪ್ರಯತ್ನ: ಉಮಾಶ್ರೀ

MUDA Case: ವಿಪಕ್ಷಗಳಿಂದ ಸಿಎಂ ಶಕ್ತಿ ಜನಪ್ರಿಯತೆ ಕುಗ್ಗಿಸುವ ಪ್ರಯತ್ನ: ಉಮಾಶ್ರೀ

12-mudhol

Muda ಸೈಟ್ ಹಿಂತಿರುಗಿಸಿರುವ ಸಿದ್ದರಾಮಯ್ಯ ಪತ್ನಿಯ ಕ್ರಮಕ್ಕೆ ತಿಮ್ಮಾಪುರ ಪ್ರತಿಕ್ರಿಯೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Haryana: ಸೋಲಿನ ಬೆನ್ನಲ್ಲೇ ಕಾಂಗ್ರೆಸ್‌ ಮೈತ್ರಿಕೂಟದಲ್ಲಿ ತಲ್ಲಣ

Haryana: ಸೋಲಿನ ಬೆನ್ನಲ್ಲೇ ಕಾಂಗ್ರೆಸ್‌ ಮೈತ್ರಿಕೂಟದಲ್ಲಿ ತಲ್ಲಣ

Women’s T20 World Cup: ಸ್ಮತಿ, ಹರ್ಮನ್‌ ಭರ್ಜರಿ ಆಟ, ಲಂಕಾ ವಿರುದ್ಧ ಭಾರತಕ್ಕೆ ಗೆಲುವು

Women’s T20 World Cup: ಸ್ಮತಿ, ಹರ್ಮನ್‌ ಭರ್ಜರಿ ಆಟ, ಲಂಕಾ ವಿರುದ್ಧ ಭಾರತಕ್ಕೆ ಗೆಲುವು

T20 Cricket: ಬಾಂಗ್ಲಾದೇಶಕ್ಕೆ 86 ರನ್‌ ಸೋಲು… 2-0 ಮುನ್ನಡೆ; ಭಾರತಕ್ಕೆ ಟಿ20 ಸರಣಿ

T20 Cricket: ಬಾಂಗ್ಲಾದೇಶಕ್ಕೆ 86 ರನ್‌ ಸೋಲು… 2-0 ಮುನ್ನಡೆ; ಭಾರತಕ್ಕೆ ಟಿ20 ಸರಣಿ

Multan Test : ಪಾಕಿಸ್ಥಾನಕ್ಕೆ ಇಂಗ್ಲೆಂಡ್‌ ತಿರುಗೇಟು… ರೂಟ್‌, ಬ್ರೂಕ್‌ ಅಜೇಯ

Multan Test : ಪಾಕಿಸ್ಥಾನಕ್ಕೆ ಇಂಗ್ಲೆಂಡ್‌ ತಿರುಗೇಟು… ರೂಟ್‌, ಬ್ರೂಕ್‌ ಅಜೇಯ

Munirathna-case

Munirathna Case: ಭದ್ರತೆ ಕೊಟ್ಟರೆ ಮಾಜಿ ಸಿಎಂಗಳ ಹನಿಟ್ರ್ಯಾಪ್‌ ಬಹಿರಂಗ: ಸಂತ್ರಸ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.