ಅಮರನಾಥ ಯಾತ್ರೆಗೆ ತೆರಳಿದ ಮಹಾಲಿಂಗಪುರದ ಯಾತ್ರಿಕರು ಸುರಕ್ಷಿತ
Team Udayavani, Jul 9, 2023, 7:38 PM IST
ಮಹಾಲಿಂಗಪುರ : ಇದೇ ಜುಲೈ 3 ರಂದು ಮಹಾಲಿಂಗಪುರದಿಂದ ಇದೇ ಮೊದಲ ಬಾರಿಗೆ ಅಮರನಾಥ ಯಾತ್ರೆಗೆ ತೆರಳಿದ ಪಟ್ಟಣದ 6 ಜನ ಯಾತ್ರಿಕರು ಸುರಕ್ಷಿತವಾಗಿದ್ದೇವೆ ಎಂದು ರವಿವಾರ ಸಂಜೆ ಉದಯವಾಣಿಗೆ ಮಾಹಿತಿ ನೀಡಿದ್ದಾರೆ.
ಮಹಾಲಿಂಗಪುರದ ಮಲ್ಲಪ್ಪ ಭಾವಿಕಟ್ಟಿ, ಬಸವರಾಜ ಬಂಡಿವಡ್ಡರ, ಸಂಜು ಜಮಖಂಡಿ, ಶಂಕರ ಪಾತ್ರೋಟ, ಬೆಳಗಾವಿ ಹತ್ತಿರದ ಸುಳೆಭಾಂವಿಯ ಮಹಾಲಿಂಗ ನೀಲನ್ನವರ, ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಯೋಧ ಮಹಾದೇವಪ್ಪ ತಳ್ಳಿ ಸೇರಿದಂತೆ ಒಟ್ಟು 6 ಜನರು ಜುಲೈ 3 ರಂದು ಸಂಜೆ ಕುಡಚಿಯಿಂದ ರೈಲ್ವೆ ಮೂಲಕ ಮುಂಬೈಗೆ ತೆರಳಿದ್ದಾರೆ. ಜುಲೈ 5 ರಂದು ಮುಂಬೈಯಿಂದ ಜಮ್ಮು ಕಾಶ್ಮೀರನ ಶ್ರೀನಗರವರೆಗೆ ವಿಮಾನ ಮೂಲಕ ಅಮರನಾಥ ಯಾತ್ರೆಗೆ ತೆರಳಿದ್ದಾರೆ.
ಭಾರಿ ಮಳೆ ಮತ್ತು ಅಮರನಾಥ ಯಾತ್ರೆಯ ಮಾರ್ಗ ಮಧ್ಯೆ ಭೂಕುಸಿತ ಹಿನ್ನಲೆಯಲ್ಲಿ ಶುಕ್ರವಾರದಿಂದ ಅಮರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವ ಕಾರಣ ಮಹಾಲಿಂಗಪುರದ 6 ಜನರು ಸೇರಿದಂತೆ ಸುಮಾರು 250 ಕ್ಕೂ ಅಧಿಕ ಜನ ಯಾತ್ರಿಕರು ಅಮರನಾಥ ಯಾತ್ರೆಯ ಮಧ್ಯದಲ್ಲಿರುವ ಡೊಮಾಲ್ ದ ವಿಶಾಲ ಭಂಡಾರ ಶಿವ ಆಶ್ರಯದಲ್ಲಿ ವಾಸ್ತವ್ಯ ಇದ್ದೇವೆ. ಆಶ್ರಮದಲ್ಲಿ ದಾನಿಗಳಿಂದ ಚಹಾ, ಉಪವಾರ , ಊಟದ ವ್ಯವಸ್ಥೆ ಕಲ್ಪಿಸಿದ್ದಾರೆ. ಸದ್ಯ ನಾವೆಲ್ಲರೂ ಸುರಕ್ಷಿತವಾಗಿದ್ದೇವೆ, ಯಾವುದೇ ತೊಂದರೆ ಇಲ್ಲ ಎಂದು ಯಾತ್ರೆಯ ನೇತೃತ್ವ ವಹಿಸಿರುವ ಯೋಧ ಮಹಾದೇವಪ್ಪ ತಳ್ಳಿ ಮತ್ತು ಮಲ್ಲಪ್ಪ ಭಾಂವಿಕಟ್ಟಿ ಉದಯವಾಣಿಗೆ ತಿಳಿಸಿದ್ದಾರೆ.
ಭೂಕುಸಿತದಿಂದ ಬಂದಾಗಿರುವ ಅಮರನಾಥ ಯಾತ್ರೆಯ ರಸ್ತೆ ದುರಸ್ಥಿ ಕಾರ್ಯವು ಸಿಆರ್ ಪಿಎಫ್ ಮತ್ತು ಸೇನಾಪಡೆಯಿಂದ ನಡೆಯುತ್ತಿದೆ. ನಾವು ಇರುವ ಸ್ಥಳದಿಂದ ಅಮರನಾಥ ದರ್ಶನ ಇನ್ನು ಕೇವಲ 5-6 ಕೀ.ಮಿ ಇದ್ದು, ನಾಳೆಯಿಂದ ಮತ್ತೆ ಯಾತ್ರೆ ಪ್ರಾರಂಭವಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.