ಸಂಪೂರ್ಣ ಕೇಸರಿಮಯವಾದ ಮಹಾಲಿಂಗಪುರ… ಯುವಶಕ್ತಿ ಸಮಾಗಮ
ಸಂಸದ ತೇಜಸ್ವಿಸೂರ್ಯ ಅವರಿಂದ ಭರ್ಜರಿ ರೋಡ್ ಶೋ...
Team Udayavani, Mar 20, 2023, 9:20 PM IST
ಮಹಾಲಿಂಗಪುರ : ಸೋಮವಾರ ಸಂಜೆ ಪಟ್ಟಣದಲ್ಲಿ ಬಾಗಲಕೋಟೆ ಜಿಲ್ಲಾ ಬಿಜೆಪಿ ಯುವಮೋರ್ಚಾ ವತಿಯಿಂದ ಜರುಗಿದ ಜಿಲ್ಲಾಮಟ್ಟದ ಬಿಜೆಪಿ ಯುವ ಸಂಕಲ್ಪ ಸಮಾವೇಶದ ಪಾದಯಾತ್ರೆ ಮತ್ತು ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿಸೂರ್ಯ ಅವರಿಂದ ಭರ್ಜರಿ ರೋಡ್‌ಶೋ ನಡೆಯಿತು.
ಸಂಪೂರ್ಣ ಕೇಸರಿಮಯ : ಬಿಜೆಪಿ ಯುವಮೊರ್ಚಾ ಯುವ ಸಂಕಲ್ಪ ಸಮಾವೇಶದ ನಿಮಿತ್ಯ ಸೋಮವಾರ ಸಂಜೆ 4 ರಿಂದ ರಾತ್ರಿ 9 ವರೆಗೆ ಮಹಾಲಿಂಗಪುರ ಪಟ್ಟಣವು ಸಂಪೂರ್ಣ ಕೇಸರಿಮಯವಾಗಿತ್ತು. ಪಟ್ಟಣದ ಎಲ್ಲಾ ರಸ್ತೆಗಳಲ್ಲಿಯೂ ಬಿಜೆಪಿ ಧ್ವಜ ಕಟ್ಟಿದ ದ್ವಿಚಕ್ರ ವಾಹನಗಳು, ಮತ್ತೊಮ್ಮೆ ಸಿದ್ದು ಸವದಿ ಎಂಬ ಹೆಸರಿನ ಟೀಶರ್ಟ ಹಾಕಿಕೊಂಡ ಯುವಕರೇ ಕಾಣಿಸುತ್ತಿದ್ದರು.
ಎರಡು ಗಂಟೆಗಳ ಕಾಲ ಪಾದಯಾತ್ರೆ : ಸಂಜೆ 5.30ಕ್ಕೆ ಪಟ್ಟಣದ ಹೆಸ್ಕಾಂ ಗಣಪತಿ ದೇವಸ್ಥಾನದಿಂದ ಪ್ರಾರಂಭವಾದ ಪಾದಯಾತ್ರೆಯು ಚನ್ನಮ್ಮ ವೃತ್ತ, ಗಾಂಧಿವೃತ್ತ, ಜವಳಿ ಬಜಾರ್, ನಡಚೌಕಿ, ವಿವೇಕ ವೃತ್ತ, ಡಬಲ್ ರಸ್ತೆ, ಬಸವ ವೃತ್ತ ಮಾರ್ಗವಾಗಿ ಕೆಎಲ್‌ಇ ಕಾಲೇಜಿನ ಆವರಣದ ಸಮಾವೇಶ ಸ್ಥಳದವರೆಗೆ ಯುವಶಕ್ತಿಯ ಬೃಹತ್ ಪಾದಯಾತ್ರೆ ಮತ್ತು ಬಿಜೆಪಿ ಮುಖಂಡರ ರೋಡ್‌ಶೋ ಸಂಜೆ 7.30 ರವರೆಗೆ ನಡೆಯಿತು.
ಯುವಕರ ಉತ್ಸಾಹ ಇಮ್ಮಡಿ : ಸಂಜೆ 5.30ರಿಂದ 7.30 ರವರೆಗೆ ನಡೆದ ಪಾದಯಾತ್ರೆಗೆ ಡಿಜೆ ಸೌಂಡ ಯುವಕರ ಉತ್ಸಾಹವನ್ನು ಇಮ್ಮಡಿಗೊಳಿಸಿತ್ತು.ಡಿಜೆ ಸೌಂಡಿನೊಂದಿಗೆ ಯುವಕರು ಬಿಜೆಪಿ ಮತ್ತು ಶಾಸಕ ಸಿದ್ದು ಸವದಿ ಪರ ಘೋಷಣೆಗಳನ್ನು ಕೂಗುತ್ತಾ ನೃತ್ಯಮಾಡಿ ಗಮನ ಸೆಳೆದರು. ಯುವ ಸಂಕಲ್ಪ ಸಮಾವೇಶದ ನಿಮಿತ್ಯ ಪಟ್ಟಣದ ಎಲ್ಲಾ ರಸ್ತೆಗಳ ವಿದ್ಯುತ್ ಕಂಬಗಳಿಗೆ ಕೇಸರಿ ಬಟ್ಟೆಯಿಂದ ಅಲಂಕಾರ ಮಾಡಲಾಗಿತ್ತು. ಮೆರವಣಿಗೆ ಉದ್ದಕ್ಕೂ ಪ್ರಧಾನಿ ನರೇಂದ್ರ ಮೋದಿ, ಅಮಿತಶಾ, ಬೊಮ್ಮಾಯಿ, ಸಿದ್ದು ಸವದಿಯವರ ಸಣ್ಣ ಸಣ್ಣ ಕಟೌಟ್ ಹೊತ್ತು ಯುವಕರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.
ಪೊಲೀಸರ್ ಹರಸಾಹಸ : ಯುವಶಕ್ತಿ ಸಮಾವೇಶದ ನಿಮಿತ್ಯ ಜಿಲ್ಲೆಯ ವಿವಿಧ ಭಾಗಗಳಿಂದ ಯುವಶಕ್ತಿಯು ಅಪಾರ ಸಂಖ್ಯೆಯಲ್ಲಿ ಮಹಾಲಿಂಗಪುರಕ್ಕೆ ಆಗಮಿಸಿದ ಹಿನ್ನಲೆಯಲ್ಲಿ ಗಣಪತಿ ದೇವಸ್ಥಾನದಿಂದ ಗಾಂಧಿವೃತ್ತ, ಬಸವ ವೃತ್ತದಿಂದ ಸಮಾವೇಶದ ಸ್ಥಳ ತಲುಪುವರೆಗೆ ಟ್ರಾಪೀಕ್ ಸಮಸ್ಯೆಯಾಗಿ, ಸುಗಮ ಸಂಚಾರಕ್ಕಾಗಿ ಪೊಲೀಸರು ಹರಸಾಹಸ ಪಡುವಂತಾಗಿತ್ತು.
ತೇರದಾಳ ಶಾಸಕ ಸಿದ್ದು ಸವದಿ, ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿಸೂರ್ಯ, ರಾಜ್ಯಾಧ್ಯಕ್ಷ ಸಂದೀಪ್‌ಕುಮಾರ್, ಜಿಲ್ಲಾಧ್ಯಕ್ಷ ಆನಂದ ಇಂಗಳಗಾಂವಿ, ಪುರಸಭೆ ಅಧ್ಯಕ್ಷ ಬಸವರಾಜ ಹಿಟ್ಟಿನಮಠ, ಮುಖಂಡರಾದ ಸುರೇಶ ಅಕ್ಕಿವಾಟ, ಆನಂದ ಕಂಪು, ಲಕ್ಕಪ್ಪ ಪಾಟೀಲ, ವಿದ್ಯಾಧರ ಸವದಿ, ಬಸನಗೌಡ ಪಾಟೀಲ, ಮಹಾಂತೇಶ ಹಿಟ್ಟಿನಮಠ, ಮಹಾಲಿಂಗ ಕುಳ್ಳೋಳ್ಳಿ, ಮನೋಹರ ಶಿರೋಳ, ಈರಪ್ಪ ದಿನ್ನಿಮನಿ, ಪ್ರಕಾಶ ಅರಳಿಕಟ್ಟಿ ಸೇರಿದಂತೆ ಬಿಜೆಪಿ ಹಲವು ಮುಖಂಡರು, ಬಿಜೆಪಿ ಯುವ ಮೋರ್ಚಾ ರಾಜ್ಯ, ಜಿಲ್ಲಾ ಘಟಕದ ಪದಾಧಿಕಾರಿಗಳು ಪಾದಯಾತ್ರೆ, ಬೃಹತ್ ರೋಡ್‌ಶೋದಲ್ಲಿ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.