Mahalingapura:ನಿರ್ಗತಿಕ ಅಜ್ಜಿಯ ಶವ ಸಂಸ್ಕಾರ ನೇರವೇರಿಸಿದ ವಿಎಚ್ ಪಿ, ಬಜರಂಗ ದಳ
Team Udayavani, Aug 18, 2023, 11:28 PM IST
ಮಹಾಲಿಂಗಪುರ : ಶುಕ್ರವಾರ ರಾತ್ರಿ ಪಟ್ಟಣದ ನಿರ್ಗತಿಕ ಅಜ್ಜಿಯ ಅಂತ್ಯಸಂಸ್ಕಾರ ನಡೆಸುವ ಮೂಲಕ ಮಹಾಲಿಂಗಪುರ ಪಟ್ಟಣದ ವಿಶ್ವ ಹಿಂದೂ ಪರಿಷತ್ ಬಜರಂಗ ದಳದ ಕಾರ್ಯಕರ್ತರು ಮಾನವೀಯತೆ ಮೆರೆದಿದ್ದಾರೆ.
ಪಟ್ಟಣದ ನಿರ್ಗತಿಕ ನಿವಾಸಿ ನೀಲವ್ವ ಕೆರೂರ ಎಂಬ ವಯಸ್ಸಾದ ಅಜ್ಜಿಯು ಅನಾರೋಗ್ಯದಿಂದ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಸಂಜೆ ನಿಧನ ಹೊಂದಿದ್ದರು. ಅಜ್ಜಿಯ ಸಂಬಂಧಿಕರು ಯಾರು ಇಲ್ಲ, ನಿರ್ಗತಿಕ ಅನಾಥ ಅಜ್ಜಿ ಎಂಬ ವಿಷಯ ತಿಳಿಯುತ್ತಿದ್ದಂತೆ ಪಟ್ಟಣದ ವಿಶ್ವ ಹಿಂದೂ ಪರಿಷತ್ ಬಜರಂಗ ದಳದ ಹತ್ತಾರು ಯುವಕರು ಸರ್ಕಾರಿ ಆಸ್ಪತ್ರೆಗೆ ಆಗಮಿಸಿ, ಅಂತ್ಯ ಸಂಸ್ಕಾರಕ್ಕೆ ಬೇಕಾದ ಸಾಮಗ್ರಿಗಳನ್ನು ತೆಗೆದುಕೊಂಡು ಬಂದು, ಪುರಸಭೆಯ ಶವ ಸಾಗಾಣಿಕೆಯ ಮುಕ್ತಿ ವಾಹನದಲ್ಲಿ ಸರ್ಕಾರಿ ಆಸ್ಪತ್ರೆಯಿಂದ ಹಿಂದೂ ರುದ್ರಭೂಮಿಗೆ ಶವವನ್ನು ತಂದು, ಶಾಸ್ತ್ರೋಕ್ತವಾಗಿ ನಿರ್ಗತಿಕ ಅಜ್ಜಿಯ ಅಂತ್ಯ ಸಂಸ್ಕಾರ ನಡೆಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಯುವಕರ ಈ ಸಾಮಾಜಿಕ ಸೇವಾ ಕಾರ್ಯಕ್ಕೆ ಪಟ್ಟಣದ ಹಿರಿಯರು, ಸರ್ಕಾರಿ ಆಸ್ಪತ್ರೆಯ ವೈದ್ಯರು ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ. ವಿಶ್ವ ಹಿಂದೂ ಪರಿಷತ್- ಬಜರಂಗ ದಳದ ಸಚಿನ ಕಲ್ಮಡಿ, ರಾಘು ಪವಾರ, ಅಭಿ ಲಮಾಣಿ, ಸಂತೋಷ ಹಜಾರೆ, ಈರಣ್ಣ ಹುಣಶ್ಯಾಳ, ಸಚಿನ ವಂದಾಲ, ಶ್ರೀನಿಧಿ ಕುಲಕರ್ಣಿ, ಸಂಜು ಪವಾರ, ಮಹಾಲಿಂಗ ಕಲಾಲ, ಕೃಷ್ಣಾ ಕಳ್ಳಿಮನಿ, ಸಾಗರ ಭೋವಿ, ಆನಂದ ಬಂಡಿಗಣಿ, ಹಣಮಂತ ನಾವ್ಹಿ, ಪುರಸಭೆ ಸದಸ್ಯ ರವಿ ಜವಳಗಿ, ಮಾಜಿ ಅಧ್ಯಕ್ಷ ಜಿ.ಎಸ್.ಗೊಂಬಿ, ಮಹಾದೇವ ಪುಕಾಳೆ, ಶಂಭುಲಿಂಗ ಬಡಿಗೇರ, ಗಂಗಪ್ಪ ಲಾತೂರ ನಿರ್ಗತಿಕ ಅಜ್ಜಿಯ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ
K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ
Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.