Mahalingpur; ದುಷ್ಕರ್ಮಿಗಳ ಅಟ್ಟಹಾಸಕ್ಕೆ ಕಮರಿದ ಶಬಾನಾಳ ಖಾಕಿ ಕನಸು
ಶೆಡ್‌ಗೆ 100 ಲೀ. ಪೆಟ್ರೋಲ್ ಹಾಯಿಸಿ ಬೆಂಕಿ ಹಚ್ಚಿ ತಾಯಿ ಮಗಳ ಭೀಕರ ಹತ್ಯೆ
Team Udayavani, Jul 17, 2024, 9:34 AM IST
ಮಹಾಲಿಂಗಪುರ : ಮಂಗಳವಾರ ಸಮೀಪದ ರನ್ನಬೆಳಗಲಿ ಪಟ್ಟಣ ವ್ಯಾಪ್ತಿಯ ಪೆಂಡಾರಿ ತೋಟದಲ್ಲಿ ಜರುಗಿದ ಸಜೀವ ದಹನ ಪ್ರಕಣದಲ್ಲಿ ತಾಯಿಯೊಂದಿಗೆ ಸಜೀವ ದಹನವಾದ ಶಬಾನಾ ದಸ್ತಗೀರಸಾಬ ಪೆಂಡಾರಿ(29) ಅವರು ಮುಧೋಳದ ಎಸ್.ಆರ್.ಕಂಠಿ ಕಾಲೇಜಿನಲ್ಲಿ ಎಂಎ ಇಂಗ್ಲಿಷ್ ಅಂತಿಮ ಸೆಮಿಸ್ಟೆರ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದರು.
ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಬೇಕೆಂಬ ಇಚ್ಛೆಯುಳ್ಳ ಪ್ರತಿಭಾವಂತೆ ಶಬಾನಾ ಎರಡು ಬಾರಿ(402 ಮತ್ತು 545 ಹುದ್ದೆಗಳ ನೇಮಕಾತಿ) ಪೊಲೀಸ್ ದೈಹಿಕ ಪರೀಕ್ಷೆಯಲ್ಲಿ ಪಾಸಾಗಿದ್ದರು. ಕಳೆದ ಜನವರಿ 23 ರಂದು ಜರುಗಿದ 545 ಹುದ್ದೆಗಳ ನೇಮಕಾತಿಗಾಗಿ ನಡೆದ ಪಿಎಸ್‌ಐ ಮರುಪರೀಕ್ಷೆಯಲ್ಲಿ ಪರೀಕ್ಷೆ ಬರೆದಿದ್ದಾರೆ. ಮಾರ್ಚ್ 1, 2024 ರಂದು ಪ್ರಕಟವಾದ ತಾತ್ಕಾಲಿಕ ಅಂಕಪಟ್ಟಿಯಲ್ಲಿ (ರ.ನಂ : 382255095303 ) ಮೊದಲ ಪೇಪರ್‌ನಲ್ಲಿ 36 , ದ್ವಿತೀಯ ಪೇಪರನಲ್ಲಿ 49.125 ಅಂಕಗಳನ್ನು ಗಳಿಸಿದ್ದಾರೆ. ಆಯ್ಕೆಯ ಅರ್ಹತೆಯ ಅಂತಿಮ ಫಲಿತಾಂಶದ ನಿರೀಕ್ಷೆಯಲ್ಲಿದ್ದರು.
ಕಮರಿದ ಖಾಕಿ ಕನಸು
ವಿಧಿಯಾಟಕ್ಕೆ ಬಲಿಯಾಗಿ ತಾಯಿಯೊಂದಿಗೆ ಸಜೀವ ದಹನವಾಗುವ ಮೂಲಕ ಶಬಾಳ ಖಾಕಿ ಕನಸು ಕೌಟುಂಬಿಕ ದ್ವೇಷದ ದಳ್ಳುರಿಯಲ್ಲಿ ಸುಟ್ಟು ಕರಕಲಾಗಿದೆ. ತಾವೊಂದು ಬಗೆದರೆ ದೈವವೊಂದು ಬಗೆಯುತ್ತದೆ ಎಂಬ ಮಾತಿನಂತೆ ಪೊಲೀಸ್ ಇಲಾಖೆಗೆ ಸೇರಬೆಕೆಂಬ ಬಹುದೊಡ್ಡ ಕನಸು ಕಂಡಿದ್ದ ಅಲ್ಪಸಂಖ್ಯಾಕ ಯುವತಿಯೊಬ್ಬಳು ಈ ರೀತಿಯಾಗಿ ದಾರುಣ ಅಂತ್ಯವಾಗಿದ್ದು ಖೇದಕರ ಸಂಗತಿಯಾಗಿದೆ.
ಸಿನಿಮಾ ಮಾದರಿ ಹತ್ಯೆ
ನೀರು ತುಂಬಿಸುವ ಟ್ಯಾಂಕಿಯಲ್ಲಿ ಸುಮಾರು 100 ಲೀಟರ್ ಪೆಟ್ರೋಲ್ ತುಂಬಿಸಿ, ಪಂಪ್ ಮೂಲಕ ಇಡೀ ಗುಡಿಸಲಿಗೆ ಪೆಟ್ರೋಲ್ ಹಾಯಿಸಿ,
ಬೆಂಕಿ ಹಚ್ಚಿ ಇಬ್ಬರನ್ನು ಕೊಂದು ಹಾಕಿರುವ ಭೀಕರ ಘಟನೆ ರನ್ನಬೆಳಗಲಿಯ ಮಹಾಲಿಂಗಪುರ-ಅಕ್ಕಿಮರಡಿ ರಸ್ತೆಯ ಪೆಂಡಾರಿ ತೋಟದಲ್ಲಿ ಮಂಗಳವಾರ ಬೆಳಗಿನ ಜಾವ ನಡೆದಿತ್ತು.
ಸಿನೆಮಾದ ಮಾದರಿಯಲ್ಲಿ ನಡೆದ ಈ ಭೀಕರ ಕೃತ್ಯದಿಂದ ಶೆಡ್‌ನಲ್ಲಿದ್ದ ತಾಯಿ-ಮಗಳು ಸಜೀವ ದಹನವಾಗಿದ್ದರು. ಜೈಬಾನ ಪೆಂಡಾರಿ (55), ಶಬಾನಾ ಪೆಂಡಾರಿ ಸುಟ್ಟು ಕರಕಲಾಗಿದ್ದರು. ದಸ್ತಗಿರಿಸಾಬ್ ಪೆಂಡಾರಿ ಹಾಗೂ ಸುಭಾನ್ ಪೆಂಡಾರಿ ಗಂಭೀರವಾಗಿ ಗಾಯಗೊಂಡಿದ್ದಾರೆ.ಅವಘಡದಲ್ಲಿ ಸಿದ್ದಿಕಿ ಎಂಬಾತ ಬಚಾವಾಗಿದ್ದ.
ಚಂದ್ರಶೇಖರ ಮೋರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ
Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.