ಖಾತ್ರಿ ಯೋಜನೆಯಲ್ಲಿ ಹಿರೇಪಡಸಲಗಿ ಪ್ರಥಮ
32780 ಮಾನವ ದಿನಗಳ ಬಳಕೆ ಗುರಿ | ಶೇ.45.22 ಗುರಿ ಸಾಧನೆ | ಅಂದಾಜು 42 ಲಕ್ಷ ಮೊತ್ತದ ಕಾಮಗಾರಿ ನಿರ್ವಹಣೆ
Team Udayavani, May 20, 2021, 3:22 PM IST
ಮಲ್ಲೇಶ ರಾ. ಆಳಗಿ
ಜಮಖಂಡಿ: ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿ ಯಂತ್ರಗಳ ಬಳಕೆ ಮಾಡದೇ ದುಡಿಯುವ ಕೈಗಳಿಗೆ ಹಿರೇಪಡಸಲಗಿ ಗ್ರಾಮ ಪಂಚಾಯತ್ ಕೆಲಸ ನೀಡಿದೆ. ಪ್ರಸಕ್ತ ಹಿರೇಪಡಸಲಗಿ ಗ್ರಾಪಂಗೆ 32780 ಮಾನವ ದಿನಗಳ ಸೃಜಿಸಿ ನಿಗದಿತ ಗುರಿ ನೀಡಲಾಗಿದೆ. ಅದರಲ್ಲಿ ಈಗಾಗಲೇ 14824 ದಿನಗಳನ್ನು ಸೃಜನೆ ಮಾಡುವ ಮೂಲಕ ಶೇ.45.22 ಗುರಿ ಸಾಧನೆ ಮಾಡಿದೆ.
ಗ್ರಾಮದ ಜನರಿಗೆ ಕೆಲಸ ನೀಡುವ ಮೂಲಕ ಗ್ರಾಮ ಅಭಿವೃದ್ಧಿಪಡಿಸುವ ಯೋಜನೆಯಲ್ಲಿ 4 ಚರಂಡಿ, 35 ದನಗಳ ದೊಡ್ಡಿ (ಕೊಟ್ಟಿಗೆ), 4 ಮನೆಗಳ ನಿರ್ಮಾಣ, ಕಾಲ್ನಡಿಗೆ ರಸ್ತೆಗಳ ಮರು ನಿರ್ಮಾಣ ಮತ್ತು ಸುಧಾರಣೆ, 19 ಕೃಷಿಹೊಂಡ, ಗ್ರಾಮದಲ್ಲಿ ವಿವಿಧ ಸಿಸಿ ರಸ್ತೆಗಳು ನಿರ್ಮಿಸುವ ಮೂಲಕ ಕೊರೊನಾ ಸಾಂಕ್ರಾಮಿಕ ರೋಗದ ಪರಿಸ್ಥಿತಿಯಲ್ಲಿ ಸುರಕ್ಷತೆ ಕ್ರಮಗಳೊಂದಿಗೆ ಸಾಮಾಜಿಕ ಅಂತರದೊಂದಿಗೆ ಅಂದಾಜು 42 ಲಕ್ಷ ಮೊತ್ತದ ಕಾಮಗಾರಿ ನಿರ್ವಹಿಸಿದ್ದಾರೆ. ಉದ್ಯೋಗ ಖಾತ್ರಿ ಯೋಜನೆಯಡಿ ಹಿರೇಪಡಸಲಗಿ ಗ್ರಾಪಂ ನಿಗ ದಿತ ಗುರಿಯೊಂದಿಗೆ 14824 ಮಾನವ ದಿನಗಳ ಬಳಕೆ ಮಾಡುವ ಮೂಲಕ ತಾಲೂಕಿಗೆ ಪ್ರಥಮ ಸ್ಥಾನದಲ್ಲಿದೆ. ಮರೇಗುದ್ದಿ ಗ್ರಾಪಂ ಕೇವಲ 320 ಮಾನವ ದಿನಗಳ ಬಳಕೆಯೊಂದಿಗೆ ಕೊನೆ ಸ್ಥಾನದಲ್ಲಿದೆ. ಪ್ರಸಕ್ತ ವರ್ಷದಲ್ಲಿ 26 ಗ್ರಾಪಂಗಳಿಗೆ ಒಂದು ವರ್ಷದ ಅವ ಧಿಯಲ್ಲಿ ಕನಿಷ್ಠ 644545 ಮಾನವ ದಿನಗಳ ಸೃಜನೆ ಮಾಡಬೇಕೆಂದು ಗುರಿ ನೀಡಲಾಗಿದೆ. ಅದರಲ್ಲಿ ಮೇ ತಿಂಗಳವರೆಗೆ 83527 ಮಾನವ ದಿನಗಳ ಬಳಕೆಯಾಗಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ತಾಲೂಕಿನ ಅಡಿಹುಡಿ ಗ್ರಾಪಂನಲ್ಲಿ 8328 ಮಾನವ ದಿನಗಳ ಬಳಕೆ ಮಾಡಿದೆ.
ಆಲಗೂರ 5393, ಬಿದರಿ 1593, ಚಿಕ್ಕಪಡಸಲಗಿ 584, ಗೋಠೆ 7061, ಹಿರೇಪಡಸಲಗಿ 14824, ಹುಲ್ಯಾಳ 585, ಹುನ್ನೂರ 528, ಜಂಬಗಿ ಬಿ.ಕೆ. 2261, ಕಡಪಟ್ಟಿ 1917, ಕಾಜಿಬೀಳಗಿ 5717, ಕಂಕಣವಾಡಿ 3338, ಕನ್ನೋಳ್ಳಿ 7124, ಕೊಣ್ಣೂರ 2798, ಕುಂಬಾರಹಳ್ಳ 1568, ಕುಂಚನೂರ 515, ಲಿಂಗನೂರ 507, ಮಧುರಖಂಡಿ 2006, ಮೈಗೂರ 2595, ಮರೇಗುದ್ದಿ 320, ಮುತ್ತೂರ 4652, ಸಾವಳಗಿ 3342, ಶೂಪಾರ್ಲಿ685, ಸಿದ್ದಾಪುರ 1953, ತೊದಲಬಾಗಿ 367, ತುಂಗಳ 2965 ದಿನಗಳವರೆಗೆ ಯಂತ್ರಗಳ ಬಳಕೆ ಬಳಸದೇ ದುಡಿಯುವ ಕೈಗಳಿಗೆ ಕೆಲಸ ನೀಡಿ ಇಂದಿನವರೆಗೆ ಅಂದಾಜು 83527 ಮಾನವ ದಿನಗಳ ಬಳಕೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bagalkot : ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧ ಮಹೇಶ್ ಮರೆಗೊಂಡ ಅಂತ್ಯಸಂಸ್ಕಾರ
ಪತ್ನಿ ಊರಿನತ್ತ ಪ್ರಯಾಣ ಬೆಳೆಸಿದರೆ… ಸಾವಿನ ಮನೆಯ ಕದ ತಟ್ಟಿದ ಯೋಧ ನಾಗಪ್ಪ ಮರೆಗೊಂಡ
Mahalingpur: ಇಂದು ಮೃತ ಯೋಧ ಮಹೇಶ ಅಂತ್ಯಕ್ರಿಯೆ; ಯೋಧನ ಮನೆಗೆ ಸಚಿವ ತಿಮ್ಮಾಪುರ ಭೇಟಿ
Mudhola: ಸಿಲಿಂಡರ್ ಸ್ಫೋಟ: ಹೊತ್ತಿ ಉರಿದ ಮನೆ
Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.