ತೋಟಗಾರಿಕೆಯಲ್ಲಿವೆ ಮಾರುಕಟ್ಟೆಯ ಅವಕಾಶಗಳು: ಶ್ರೀಪಾದ ವಿಶೇಶ್ವರ
Team Udayavani, Sep 22, 2020, 4:36 PM IST
ಬಾಗಲಕೋಟೆ: ತೋಟಗಾರಿಕೆ ರೈತರು ಬಹಳಷ್ಟು ಬಾರಿ ಬೆಳೆಗಳನ್ನು ಬೆಳೆದ ನಂತರ ಮಾರುಕಟ್ಟೆಯ ಸ್ಥಳಗಳ ಬಗ್ಗೆ ಮಾಹಿತಿ ಸಿಗದೇ ಒದ್ದಾಡುವಂತಾಗಿರುತ್ತದೆ. ರೈತರು ಮಾರುಕಟ್ಟೆಯಾಧಾರಿತ ಬೆಳೆ ಯೋಜನೆಗಳನ್ನು ಮಾಡಿದರೆ ಮಾರಾಟ ಮಾಡುವುದು ಸುಲಭ ಹಾಗೂ ಹೆಚ್ಚಿನ ಲಾಭವನ್ನು ಸಹ ಪಡೆಯಬಹುದಾಗಿದೆ ಎಂದು ಕೃಷಿ ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಶ್ರೀಪಾದ ವಿಶ್ವೇಶ್ವರ ಹೇಳಿದರು.
ನವನಗರದ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡ ತೋಟಗಾರಿಕೆಯಲ್ಲಿ ಮಾರುಕಟ್ಟೆಯ ಅವಕಾಶಗಳು ಆನ್‌ಲೈನ್ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರಿಗೆ ಮಾಡಿರುವಇ-ಮಾರುಕಟ್ಟೆಯ ಅವಕಾಶಗಳುಹಾಗೂ ತೋಟಗಾರಿಕೆ ಬೆಳೆಗಳ ಶಿಥಲೀಕರಣದ ಪ್ರಾಮುಖ್ಯತೆಯನ್ನು ರೈತರು ಅರಿತುಕೊಳ್ಳಬೇಕು ಎಂದು ತಿಳಿಸಿದರು.
ತರಬೇತಿಯಲ್ಲಿ ಬೆಂಗಳೂರಿನಲ್ಲಿ ನುಗ್ಗೆ ಎಲೆಯ ಖರೀದಿದಾರ ವೇಣುಗೋಪಾಲ, ಹಣ್ಣಿನ ಖರೀದಿದಾರ ಅಜಿತ ರೈತರ ಅಹವಾಲುಗಳಿಗೆ ಸ್ಪಂದಿಸಿದರು. ವಿಸ್ತರಣಾ ನಿರ್ದೇಶಕ ಡಾ| ವೈ. ಕೆ. ಕೋಟಿಕಲ್ ಮಾತನಾಡಿ, ರೈತರು ವಿವಿಧ ಮಾರಾಟಗಾರರನ್ನು ಸಂಪರ್ಕಿಸಿ ಹೆಚ್ಚು ಬೆಲೆ ಸಿಗುವ ಮಾರುಕಟ್ಟೆಗೆ ಮಾರಾಟ ಮಾಡಬೇಕು ಹಾಗೂ ನಿರಂತರವಾಗಿ ವಿಶ್ವವಿದ್ಯಾಲಯದ ಸಂಪರ್ಕದಲ್ಲಿರಬೇಕು ಎಂದರು. ಸಂಯೋಜಕ ಡಾ| ವಿಜಯಮಹಾಂತೇಶ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್ ಪಠಾಣಗೋ?
King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!
Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.