ಫಲಿತಾಂಶ ಸುಧಾರಣೆಗೆ ಕ್ರಮ: ಪ್ರೊ| ಶೇಖ
Team Udayavani, Jan 4, 2022, 12:16 PM IST
ರಬಕವಿ-ಬನಹಟ್ಟಿ: ರಬಕವಿ ಬನಹಟ್ಟಿ ಸರ್ಕಾರಿ ಪದವಿ ಪೂರ್ವ ಕಾಲೇಜು ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಕಾಲೇಜು ಆಗಿದ್ದು, ಮುಂದಿನ ದಿನಗಳಲ್ಲಿ ಇಲ್ಲಿರುವ ಕಾಲೇಜಿನ ನೂತನ ಕಟ್ಟಡಕ್ಕೆ ಬೇಕಾಗುವ ಮೂಲ ಸೌಕರ್ಯ ಪಡೆಯುವ ಜೊತೆಗೆ ವಿದ್ಯಾರ್ಥಿಗಳ ಫಲಿತಾಂಶ ಇನ್ನಷ್ಟು ಸುಧಾರಿಸಲು ಕ್ರಮ ತೆಗೆದುಕೊಳ್ಳುವುದಾಗಿ ನೂತನ ಪ್ರಾಚಾರ್ಯ ಪ್ರೊ| ಎಸ್.ಎಂ. ಶೇಖ ಹೇಳಿದರು.
ಸ್ಥಳೀಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾಗಿ ಅಧಿಕಾರ ಸ್ವೀಕರಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಸಂಸ್ಥೆಯ ಪಾವಿತ್ರ್ಯತೆ, ಶಿಸ್ತಿಗೆ ಹೆಚ್ಚಿನ ಮಹತ್ವ ನೀಡುವ ಜೊತೆಗೆ ಕಾಲೇಜು ಪರಿಸರ ಸ್ವತ್ಛವಾಗಿಟ್ಟುಕೊಳ್ಳಲು ಹೆಚ್ಚು ಗಮನ ನೀಡಬೇಕು. ಕಾಲೇಜು ಅಭಿವೃದ್ಧಿಗೆ ಕಾಲೇಜು ಅಭಿವೃದ್ಧಿ ಮಂಡಳಿ, ಉಪನ್ಯಾಸಕರ, ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳ ಸಹಕಾರ ಮುಖ್ಯ ಎಂದು ತಿಳಿಸಿದರು.
ಈ ವೇಳೆ ಕಾಲೇಜು ಅಭಿವೃದ್ಧಿ ಮಂಡಳಿ ಉಪಾಧ್ಯಕ್ಷ ಗೋವಿಂದ ಡಾಗಾ, ಪ್ರಭಾರ ಪ್ರಾಚಾರ್ಯ ಚಂದ್ರಪ್ರಭಾ ಬಾಗಲಕೋಟ, ಎಂ.ಆರ್. ಅಥಣಿ, ಎಸ್.ಎಂ. ಕರಿಗಾರ, ಶೋಭಾ ಪತ್ತಾರ, ಮೀನಾಜ್ ದಂಡಿನ್, ಸಂಜಯ ಮಹಾಜನ, ಎಸ್.ಎಸ್. ಕೊಣ್ಣೂರ, ಮೊಸಿನ್ ಶಿಲ್ಲೆದಾರ, ಮಧುಕೇಶ್ವರ ಬೆಳಗಲಿ ಸೇರಿದಂತೆ ಇತರರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.