ಹತ್ತು ಗಣ್ಯರಿಗೆ ಮೇಘಮೈತ್ರಿ ಪುರಸ್ಕಾರ ಪ್ರದಾನ
ಇಬ್ರಾಹಿಂ ಸುತಾರ್ ಭಾವೈಕ್ಯತೆ ಹರಿಕಾರ
Team Udayavani, Mar 28, 2022, 6:39 PM IST
ಮುಧೋಳ: ಕಚ್ಚಾಡುವವರ ನಡುವೆ ಕೂಡಿ ಕಟ್ಟಿರುವ ಭಾವೈಕ್ಯತೆಯ ಮೇರುಗಿರಿ ಮಂದಾರ ಶಿಖರ ಇಬ್ರಾಹಿಂ ಸುತಾರ ಆಗಿದ್ದರು ಎಂದು ಪ್ರಗತಿಪರ ಚಿಂತಕ ಸಾಹಿತಿ ಡಾ| ಅಶೋಕ ನರೋಡೆ ಹೇಳಿದರು.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಕಮತಗಿ ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಘದ ಆಶ್ರಯದಲ್ಲಿ ಭಾವೈಕ್ಯತೆಯ ಹರಿಕಾರ ಪದ್ಮಶ್ರೀ ಇಬ್ರಾಹಿಂ ಸುತಾರ, ರಾಜ್ಯಮಟ್ಟದ ವಿಚಾರ ಸಂಕಿರಣ, ನುಡಿನಮನ ಹಾಗೂ ಸಾಹಿತಿ ಡಾ| ಅಶೋಕ ನರೋಡೆ ಅವರ ಎರಡು ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎಪ್ಪತರ ದಶಕದಲ್ಲಿ “ಶ್ರೀ ಗುರು ಸಾಧು ನಿರಂಜನಾವಧೂತರು ಭಾವೈಕ್ಯ ಜನಪದ ಸಂಗೀತ ಮೇಳ’ ಸ್ಥಾಪನೆ ಮಾಡಿಕೊಂಡು, ಸಂವಾದ ರೂಪ ಭಜನೆಯ ವಿನೂತನ ಕಲಾ ಪ್ರಕಾರದ ಹುಟ್ಟಿಗೆ ಕಾರಣರಾದವರು. ಇದರ ಜತೆಗೆ, ವಿನೂತನ ಕಲಾ ಪ್ರಕಾರ ವನ್ನು ಅಂದರೆ, ಪ್ರಶ್ನೋತ್ತರಗಳ ಜೊತೆ ಪದ್ಯಗಳನ್ನು ಹಾಡುವ ಸಂವಾದ ರೂಪ ಭಜನೆ ರೂಢಿಸಿಕೊಂಡು ಸುತಾರ್ ಅವರು ಗಮನ ಸೆಳೆದರು. ಸಾಹಿತ್ಯ ವಾಚನ, ಪ್ರವಚನ, ಭಜನೆ ಮತ್ತು ಸಮಾಜ ಸೇವೆಯ ಮುಖಾಂತರ ಸರ್ವ ಮಹಾತ್ಮರ ಸಾಹಿತ್ಯವನ್ನು ಬಳಸಿ ಭಾವೈಕ್ಯತೆಯ ಸಂದೇಶ ಸಾರುತ್ತಾ, ಇಡೀ ರಾಜ್ಯದಲ್ಲಿ ಗಮನ ಸೆಳೆದರು. ಇದರ ಜತೆಗೆ ಮಹಾರಾಷ್ಟ್ರ ಆಂಧ್ರಪ್ರದೇಶ, ದಿಲ್ಲಿ, ಒರಿಸ್ಸಾ, ರಾಜಸ್ಥಾನ, ಗೋವಾ ಸೇರಿದಂತೆ ಇತರ ಪ್ರದೇಶದಲ್ಲಿ ಪ್ರವಚನ ನೀಡಿ, ಸ್ಥಳೀಯರಿಗೆ ಆಕರ್ಷಣೆ ಆಗಿದ್ದರು. ಇಬ್ರಾಹಿಂ ಸುತಾರ ಅವರು ಪ್ರವಚನಗಳ ಮೂಲಕವಾಗಿ ಸಮಾಜದಲ್ಲಿರುವ ಮೂಢನಂಬಿಕೆ ಮತಾಂಧತೆ ತೊರೆದು ಮಾನವ ಜಾತಿ ಒಂದೇ ಕುಲ ಎಂದು ಸಾರಿದವರು ಅಗಿದ್ದರು ಎಂದರು.
ಲೋಕಾಪುರದ ಹಿರೇಮಠದ ಡಾ| ಚಂದ್ರಶೇಖರ ಸ್ವಾಮೀಜಿ ಮಾತನಾಡಿ, ಖ್ಯಾತ ಪ್ರವಚನಕಾರ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಇಬ್ರಾಹಿಮ್ ಸುತಾರ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಮೋಘ. ಸಮಾಜದಲ್ಲಿ ಏಕತೆಯ ನಾದದ ತಂತಿ ಮೀಟಿದ ಭಾವೈಕ್ಯ ಭಕ್ತಿಯ ಸಂಗಮ ಅವರಾಗಿದ್ದರು. ಶರಣರ, ಸೂಫಿ ಸಂತರ, ದಾರ್ಶನಿಕರ ಸಂದೇಶಗಳನ್ನು ಜನಸಾಮಾನ್ಯರಿಗೆ ತಲುಪಿಸಿದ ಹೆಗ್ಗಳಿಕೆ ಅವರದ್ದಾಗಿತ್ತು. ಇವರಿಬ್ಬರ ಅಗಲುವಿಕೆ ಸಾಹಿತ್ಯ-ಸಂಗೀತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.
ಕಮತಗಿ ಹಿರೇಮಠದ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಈ ನಾಡು ಕಂಡ ಸೌಮ್ಯ ವ್ಯಕ್ತಿತ್ವ ಸಾಹಿತಿ ಡಾ| ಅಶೋಕ ನರೋಡೆಯವರು ಕೃತಿಗಳು ವಿಶೇಷವಾಗಿದ್ದು ಕೋಟಿ ನಾನು ಕಂಡಂತೆ-ಕಂಡಿದ್ದು ಹಾಗೂ ಮಹಾಕಾವ್ಯಗಳಲ್ಲಿ ಬುದ್ಧ ಅದ್ಬುತ ಕೃತಿಗಳಾಗಿವೆ ಇಬ್ರಾಹಿಂ ಸುತಾರ ಅವರ ನುಡಿನಮನ ಕಾರ್ಯ ಸ್ಮರಣೀಯ ಎಂದರು.
ಪ್ರಾಸ್ತಾವಿಕ ನುಡಿಯನ್ನು ಮೇಘಮೈತ್ರಿ ಕನ್ನಡ ಸಂಘದ ರಾಜ್ಯಾಧ್ಯಕ್ಷ ಎಂ. ರಮೇಶ ಕಮತಗಿ ಮಾತನಾಡಿ, ನಮ್ಮ ಸಂಸ್ಥೆಯಿಂದ ಐದು ಸಮ್ಮೇಳನ ನಡೆದಿದ್ದು ಹಲವಾರು ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿದೆ ಈ ನಿಟ್ಟಿನಲ್ಲಿ ಸಾಂಸ್ಕೃತಿಕ, ಸಾಹಿತ್ಯಿಕ ಕಾರ್ಯ ನಿರಂತರವಾಗಿ ಮುಂದುವರಿಯುತ್ತದೆ ಎಂದರು.
ಶಿಕ್ಷಕ ಹುಮಾಯೂನ್ ಸುತಾರ ಹಾಗೂ ಹಿರಿಯ ನಾಗರಿಕ ವೇದಿಕೆಯ ಅಧ್ಯಕ್ಷ ಕಲ್ಲಪ್ಪಣ್ಣ ಸಬರದ ಅವರು ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದರು .
ಕಸಾಪ ತಾಲೂಕು ಅಧ್ಯಕ್ಷ ಆನಂದ ಪೂಜಾರ, ಶಿಕ್ಷಕ ಹುಮಾಯೂನ್ ಇಬ್ರಾಹಿಂ ಸುತಾರ, ಗುರುಕುಲ ಕಲಾ ಪ್ರತಿಷ್ಠಾನ ಜಿಲ್ಲಾಧ್ಯಕ್ಷ ವೆಂಕಟೇಶ ಗುಡೆಪ್ಪನವರ ಮಾತನಾಡಿದರು. ನಿಖೀತಾ ಕುಮಕಾಲೆ, ಸುನೀಲ್ ಮಾರಬಸರಿ, ರಮೇಶ ಕೋಕಾಣ ಇತರರು ಇದ್ದರು.
ಮಲ್ಲಿಕಾರ್ಜುನ ಬಟಕುರ್ಕಿ, ಸಾಧಿಕ್ ದಬಾಡಿ, ಗಾಯಕ ರುದ್ರಪ್ಪ ಬೆಣ್ಣೂರ, ಮಹಾಂತೇಶ ಕುಂಬಾರ, ಡಾ| ಹುಸೇನ ಪತ್ತೇಖಾನ, ಡಾ| ಸುರೇಶ ಹನಗಂಡಿ, ರಮೇಶ ಗೋಗೇಲಿ, ಮಂಜುನಾಥ ಕೆ. ಫರೀಟ, ರೇವಯ್ಯ ನಿಂಗೊಳ್ಳಿ ಅವರಿಗೆ ಮೇಘಮೈತ್ರಿ ಗೌರವ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ನಂತರ ನಡೆಯುವ ಕಾವ್ಯ ನಮನ ಕಾರ್ಯಕ್ರಮದಲ್ಲಿ ಸುವರ್ಣ ಆಸಂಗಿ ಸವಿತಾ ಅಂಗಡಿ, ಕವಿತಾ ಎಸ್., ವಿಜಯಲಕ್ಷ್ಮೀ ಕಗಲಗೊಂಬ, ಸ್ನೇಹಾ ಹಿರೇಮಠ, ಹನಮಂತ ಕಾಂಬ್ಳೆ, ಪ್ರಕಾಶ ಪೀಠಕ, ಮಹಾಮತೇಶ ಕುಂಬಾರ, ಮುತ್ತು ತುಂಗಳ, ಗುರುನಾಥ ಬೇವಿನಗಿಡದ ಗಾಯನ ಪ್ರಸ್ತುತಪಡಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.