ನೂತನ ವೆಬ್‌ಸೈಟ್‌ಗೆ ಶಾಸಕ ಚರಂತಿಮಠ ಚಾಲನೆ
Team Udayavani, Feb 2, 2020, 12:19 PM IST
ಬಾಗಲಕೋಟೆ: ಜಿಲ್ಲೆಯಲ್ಲಿ ಫೆ.27 ಮತ್ತು 28 ರಂದು ಹಮ್ಮಿಕೊಂಡ ಜಿಲ್ಲಾಮಟ್ಟದ ಉದ್ಯೋಗ ಮೇಳದ ನೂತನ ವೆಬ್‌ಸೈಟ್‌ಗೆ ಶಾಸಕ ಡಾ| ವೀರಣ್ಣ ಚರಂತಿಮಠ ಚಾಲನೆ ನೀಡಿದರು.
ಶನಿವಾರ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಜಿಲ್ಲಾಮಟ್ಟದ ಉದ್ಯೋಗ ಮೇಳದ ಅಂಗವಾಗಿ ರೂಪಿಸಲಾದ ಹೊಸ ವೆಬ್ ಸೈಟ್‌ಗೆ ಚಾಲನೆ ನೀಡಿ ಪ್ರಚಾರ ಸಾಮಗ್ರಿ ಬಿಡುಗಡೆ ಮಾಡಿ ಮಾತನಾಡಿದ ಅವರು,ನಿರುದ್ಯೋಗಿ ಯುವಕ, ಯುವತಿಯರಿಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ವಿದ್ಯಾಗಿರಿಯ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಉದ್ಯೋಗ ಮೇಳ ಹಮ್ಮಿಕೊಂಡಿದ್ದು, ಪ್ರಾರಂಭಿಸಲಾದ ಉದ್ಯೋಗ ಮೇಳದ ವೆಬ್‌ಸೈಟ್‌ನಲ್ಲಿ ಉದ್ಯೋಗಾಕಾಂಕ್ಷಿಗಳು ನೋಂದಣಿ ಮಾಡಿಕೊಳ್ಳಬಹುದಾಗಿದೆ ಎಂದರು.
ಈ ವೆಬ್‌ಸೈಟ್ ನಲ್ಲಿ ಆಯಾ ಕಂಪನಿಗಳಲ್ಲಿ ಖಾಲಿ ಇರುವ ಹುದ್ದೆ ಹಾಗೂ ವಿದ್ಯಾರ್ಹತೆ ಮಾಹಿತಿ ವೆಬ್‌ಸೈಟ್ ಮೂಲಕ ಮಾಹಿತಿ ಪಡೆಯಬಹುದು. ಅಲ್ಲದೇ ಮೇಳದಲ್ಲಿ ಪಾಲ್ಗೊಳ್ಳಲು ಇಚ್ಛಿಸುವ ಕಂಪನಿಗಳು ಸಹ ಖಾಲಿ ಇರುವ ಹುದ್ದೆಗಳ ಮಾಹಿತಿ ಹಾಗೂ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಈ ಅವಕಾಶದ ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು.
ಇದೇ ವೇಳೆ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ| ಕೆ. ರಾಜೇಂದ್ರ ಮಾತನಾಡಿ, ಉದ್ಯೋಗ ಮೇಳದಲ್ಲಿ 50ಕ್ಕೂ ಹೆಚ್ಚು ವಿವಿಧ ಕಂಪನಿಗಳು ಭಾಗವಹಿಸಲಿದ್ದು, ಸುಮಾರು 3 ಸಾವಿರಕ್ಕಿಂತ ಹೆಚ್ಚು ಹುದ್ದೆ ಭರ್ತಿ ಮಾಡಲಿದ್ದಾರೆ. ಆಸಕ್ತ ಉದ್ಯೋಗಾಕಾಂಕ್ಷಿಗಳು ವಿದ್ಯಾರ್ಹತೆಗೆ ಅನುಗುಣವಾಗಿ ನೂತನ ಉದ್ಯೋಗ ಮೇಳದ ವೆಬ್‌ಸೈಟ್‌ನಲ್ಲಿ ಫೆ.25 ರೊಳಗಾಗಿ ನೋಂದಾಯಿಸಿ ಕೊಳ್ಳಬಹುದು. ಮಾಹಿತಿಗಾಗಿ ದೂ: 08354-235337, ಮೊ: 8722914903, 9538162203ಗೆ ಸಂಪರ್ಕಿಸಬಹುದು ಎಂದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ತರಬೇತಿ ಐಎಎಸ್ ಅಧಿಕಾರಿ ಗರಿಮಾ ಪನ್ವಾರ, ಎನ್‌ಐಸಿಯ ಗಿರಿಯಾಚಾರ, ಆಹಾರ ಇಲಾಖೆ ಉಪ ನಿರ್ದೇಶಕ ಶ್ರೀಶೈಲ ಕಂಕಣವಾಡಿ, ಜಿಲ್ಲಾ ಅಂಕಿ ಸಂಖ್ಯಾಧಿಕಾರಿ ಗಂಗಾಧರ ದಿವಟರ, ಜಿಪಂ ಮುಖ್ಯ ಲೆಕ್ಕಾಧಿಕಾರಿ ಶಾಂತಾ ಕಡಿ, ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ವಿ.ಎಸ್. ಹಿರೇಮಠ, ಜಿಲ್ಲಾ ಕೌಶಲ್ಯ ಇಲಾಖೆ ವ್ಯವಸ್ಥಾಪಕ ಎನ್. ಎಸ್. ಏರಗೂಡಿ, ಸಹಾಯಕ ನಿಯಂತ್ರಕ ಕೋಳೂರ ಸೇರಿದಂತೆ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
India-Afghanistan: ಆಫ್ಘನ್ ಜೊತೆಗೆ ಬಾಂಧವ್ಯ ಪುನಃಸ್ಥಾಪನೆಗೆ ಭಾರತ ಸಜ್ಜು?
Washington: ಅಮೆರಿಕದ ಭರವಸೆಯಬೆಳಕು ಜೀವಂತವಿರಲಿದೆ: ಕಮಲಾ ಭಾವುಕ ಭಾಷಣ
MUDA CASE: ಸಿಎಂ, ಪತ್ನಿಗೆ ಇ.ಡಿ. ನೋಟಿಸ್?
IND Vs SA: ಇಂದಿನಿಂದ 4 ಪಂದ್ಯಗಳ ಟಿ20 ಸರಣಿ; ಸೂರ್ಯ ಪಡೆಗೆ ಸೌತ್ ಆಫ್ರಿಕಾ ಸವಾಲು
Doctor: ಸೀರೆ ಉಟ್ಟ ಸ್ತ್ರೀಯರೇ,ಪೆಟಿಕೋಟ್ ಕ್ಯಾನ್ಸರ್ ಬಗ್ಗೆ ಎಚ್ಚರವಿರಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.