ಯಡಿಯೂರಪ್ಪ ಸಮ್ಮುಖದಲ್ಲೇ ತೇರದಾಳ ಬಿಜೆಪಿ ಭಿನ್ನಮತ ಸ್ಫೋಟ

Team Udayavani, Apr 13, 2022, 6:56 PM IST

ಯಡಿಯೂರಪ್ಪ ಸಮ್ಮುಖದಲ್ಲೇ ತೇರದಾಳ ಬಿಜೆಪಿ ಭಿನ್ನಮತ ಸ್ಫೋಟ

ರಬಕವಿ-ಬನಹಟ್ಟಿ : ತೇರದಾಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ದಂಡು ಬೆಳಗಾವಿಯ ಖಾಸಗಿ ಹೊಟೇಲ್‌ನಲ್ಲಿ ಬುಧವಾರ ನಡೆದ ಬಿಜೆಪಿ ಕೋರ್ ಕಮಿಟಿಯಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹಾಗು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಬರುವ ಚುನಾವಣೆಯಲ್ಲಿ ಸ್ಥಳೀಯರಿಗೆ ಟಿಕೆಟ್ ನೀಡಬೇಕೆಂದು ಒತ್ತಾಯಿಸಲು ತೆರಳಿದ್ದ ವೇಳೆ ಕಾರ್ಯಕರ್ತರೊಂದಿಗೆ ಹಾಲಿ ಶಾಸಕ ಸಿದ್ದು ಸವದಿ ನಡೆಸಿದ ಮಾತು ವಾಗ್ವಾದಕ್ಕೆ ತಿರುಗಿದ್ದು,ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ನಡೆದಿದ್ದೇನು: ಹಳೆಯ ಕಾರ್ಯಕರ್ತರ ಮೇಲೆ ದೌರ್ಜನ್ಯ ಹಾಗು ಪಕ್ಷನಿಷ್ಠೆಆಗಿ ದುಡಿದ ಮುಖಂಡರಿಗೆ ನ್ಯಾಯ ಒದಗಿಸಬೇಕೆಂದು ಕೋರಿ ತೇರದಾಳ ಕ್ಷೇತ್ರದಿಂದ ತೇರದಾಳದ ಬಸವರಾಜ ಬಾಳಿಕಾಯಿ, ಬನಹಟ್ಟಿಯ ಭೀಮಶಿ ಮಗದುಮ್, ಮಹಾಲಿಂಗಪೂರದ ಶೇಖರ ಅಂಗಡಿ, ರಬಕವಿಯ ಬಸವರಾಜ ದಲಾಲ, ಆಸಂಗಿಯ ಹರ್ಷವರ್ಧನ ಪಟವರ್ಧನ ಸೇರಿದಂತೆ 30 ಕ್ಕೂ ಅಧಿಕ ಕಾರ್ಯಕರ್ತರು ತೆರಳಿದ್ದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಮನವಿ ಅರ್ಪಿಸುವ ಸಂದರ್ಭದಲ್ಲಿ ಹಾಲಿ ಶಾಸಕ ಸಿದ್ದು ಸವದಿಯವರೊಂದಿಗೆ ಮಾತಿನ ವಾಗ್ವಾದ ನಡೆದು ಏಕವಚನಗಳ ಮಾತಿನ ಪ್ರಯೋಗದಿಂದ ಇರುಸು-ಮುರುಸಾಗಲು ಕಾರಣವಾಯಿತು.

ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಕಟ್ಟುವ ಸಂದರ್ಭ ಸಾಕಷ್ಟು ಪ್ರಕರಣಗಳನ್ನು ಮೈಮೇಲೆ ಹಾಕಿಕೊಂಡು ಶ್ರಮಿಸಿದ್ದೇವೆ. ಪಕ್ಷದ ಮುಖಂಡರೊಂದಿಗೆ ಸಾಧಕ-ಬಾಧಕಗಳ ಚರ್ಚೆ ಮುಕ್ತವಾಗಿದೆ. ಕಾರ್ಯಕರ್ತರ ಆಹ್ವಾನ ನಿಮಿತ್ತ ತೆರಳಿದ್ದೇವು. ಆ ಸಂದರ್ಭ ವಿನಾಕಾರಣ ಶಾಸಕ ಸವದಿಯವರು ಮನಬಂದಂತೆ ಅಶ್ಲೀಲ ಪದಬಳಕೆ ಮಾಡಿ ಕಾರ್ಯಕರ್ತರನ್ನು ಅವಮಾನಿಸಿದ್ದಾರೆ ಎಂದು ಬಸವರಾಜ ಬಾಳಿಕಾಯಿ ದೂರಿದರು.

ಇದೇ ಸಂದರ್ಭದಲ್ಲಿ ತೇರದಾಳ ಶಾಸಕ ಸಿದ್ದು ಸವದಿ ಮಾತನಾಡಿ, ಪಕ್ಷದ್ರೋಹಿಗಳ ಗುಂಪು ಪಕ್ಷದ ಅಂಗಳಕ್ಕೆ ಬಂದಿತ್ತು. ಜೆಡಿಎಸ್ ಪಕ್ಷದಲ್ಲಿದ್ದು, ಬಿಜೆಪಿಯಲ್ಲಿದ್ದೇನೆಂದು ನಾಟಕವಾಡುವದು ಎಷ್ಟು ಸರಿ? ಕಳೆದ 2013 ರಲ್ಲಿ ಕೆಜೆಪಿ ಪಕ್ಷದಿಂದ ಸ್ಪರ್ಧಿಸಿ ಅಲ್ಪಮತಗಳ ಅಂತರದ ಸೋಲಿಗೆ ಕಾರಣವಾದವನು ಅರ್ಹತೆಯಿಲ್ಲದೆ ಬಂದಿದ್ದಾರೆ.

ಉಂಡ ಮನೆಗೆ ಜಂತಿ ಎಣಿಸುವ ಜಾಯಮಾನದವರಾಗಿದ್ದು, ಪಕ್ಷದಿಂದಲೇ ಬಿಡಿಸಿಸಿ, ಕೆಎಂಎಫ್ ಸೇರಿದಂತೆ ಇತರೆ ಹುದ್ದೆಗಳನ್ನು ಅಲಂಕರಿಸಿ ಇದೀಗ ವಿರೋಧವಾಗುತ್ತಿದ್ದಾರೆ. ಸ್ಥಳೀಯ ಕಾರ್ಯಕರ್ತರು ಇವರಿಗೆ ಛೀಮಾರಿ ಹಾಕಿದ್ದು, ಹೈಕಮಾಂಡ್ ಮುಂದೆ ನೈತಿಕತೆಯಿಲ್ಲದಿದ್ದರೂ ಮೊಂಡತನ ಪ್ರದರ್ಶಿಸಿದ್ದಾರೆ.

ನಾನೇ ಪಕ್ಷದ ಅಭ್ಯರ್ಥಿ: ಹಿತಶತ್ರುಗಳಂತೆ ಬೆನ್ನಿಗೆ ಚೂರಿ ಹಾಕುವವರ ವಿರುದ್ಧ ಎಚ್ಚರವಾಗಿದ್ದೇನೆ. ಕ್ಷೇತ್ರದ ಮುಖಂಡರು, ಕಾರ್ಯಕರ್ತರ ಪಡೆಯ ಒತ್ತಾಯದಿಂದ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವದಷ್ಟೇ ಅಲ್ಲದೆ ಹಳೆಯ ಗೆಲುವಿನ ನನ್ನ ದಾಖಲೆಯನ್ನು ನಾನೇ ಮುರಿಯುತ್ತೇನೆ. ಇಂತಹ ಕೊಳತೆ ರೆಜೆಕ್ಟೆಡ್ ಗೂಡ್ಸ್ ನಂತೆ ಇವೆ. ಹತಾಶೆ ಭಾವನೆಯಿಂದ ಪಕ್ಷದ ಮುಖಂಡರ ಮುಂದೆ ಬಂದು ನಿಂತಿದ್ದಾರೆಂದು ಸವದಿ ತಿಳಿಸಿದರು.

ಟಾಪ್ ನ್ಯೂಸ್

Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ

Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ

“ರವಿ ಹತ್ಯೆ ಸಂಚಿನಲ್ಲಿ ಸಿಎಂ, ಗೃಹ ಸಚಿವರ ಕೈವಾಡ’: ಆರ್‌. ಅಶೋಕ್‌

“CT Ravi ಹತ್ಯೆ ಸಂಚಿನಲ್ಲಿ ಸಿಎಂ, ಗೃಹ ಸಚಿವರ ಕೈವಾಡ’: ಆರ್‌. ಅಶೋಕ್‌

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿದ್ದರಾಮಯ್ಯ

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ

ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Krantiveer Brigade launched by worshipping the feet of 1008 saints: KS Eshwarappa

Politicss; 1008 ಸಾಧುಸಂತರ ಪಾದಪೂಜೆ‌ ಮೂಲಕ‌ ಕ್ರಾಂತಿವೀರ ಬ್ರಿಗೇಡ್‌ ಗೆ ಚಾಲನೆ: ಈಶ್ವರಪ್ಪ

India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ

India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ

Rabkavi Banhatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು

Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ

Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ

“ರವಿ ಹತ್ಯೆ ಸಂಚಿನಲ್ಲಿ ಸಿಎಂ, ಗೃಹ ಸಚಿವರ ಕೈವಾಡ’: ಆರ್‌. ಅಶೋಕ್‌

“CT Ravi ಹತ್ಯೆ ಸಂಚಿನಲ್ಲಿ ಸಿಎಂ, ಗೃಹ ಸಚಿವರ ಕೈವಾಡ’: ಆರ್‌. ಅಶೋಕ್‌

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿದ್ದರಾಮಯ್ಯ

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ

1-max

Max; ಟ್ರೈಲರ್ ಬಿಡುಗಡೆ: ಭರ್ಜರಿ ಲುಕ್ ನಲ್ಲಿ ಕಿಚ್ಚ!

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.