ಅಗ್ನಿಶಾಮಕ ಠಾಣೆಯಿಂದ ಅಣಕು ಪ್ರದರ್ಶನ
Team Udayavani, Jan 30, 2021, 3:34 PM IST
ಮುಧೋಳ: ಆಕಸ್ಮಿಕವಾಗಿ ಉಂಟಾಗುವ ಬೆಂಕಿ ಆರಿಸುವುದು ಇತರೆಡೆಗೆ ಹರಡದಂತೆ ಮುಂಜಾಗ್ರತೆ ವಹಿಸುವುದು ಅಗ್ನಿಶಾಮಕ ದಳದ ಮುಖ್ಯ ಕಾರ್ಯವಾಗಿದೆ ಎಂದು ಮುಧೋಳ ಅಗ್ನಿಶಾಮಕ ದಳದಠಾಣಾಧಿಕಾರಿ ಬಿ.ಎಂ. ಬಂಡಿವಡ್ಡರ ಹೇಳಿದರು.
ನಗರದ ತ್ರಿವೇಣಿ ಶಿಕ್ಷಣ ಸಂಸ್ಥೆಯ ಸಂಗಮನಾಥ ಪ್ರೌಢ ಶಾಲಾ ಆವರಣದಲ್ಲಿ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಯ ಅಗ್ನಿಶಾಮಕ ಠಾಣೆ ಆಶ್ರಯಲ್ಲಿ ಜರುಗಿದ ತುರ್ತು ಸೇವೆಯಲ್ಲಿ ಅಗ್ನಿಶಾಮಕದಳ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೆಂಕಿ ಅಪಘಾತದಿಂದ ಉಂಟಾಗುವ ಪ್ರಾಣಹಾನಿ, ಆಸ್ತಿ ಪಾಸ್ತಿಗಳ ನಷ್ಟ, ಪರಿಸರದಲ್ಲಿ ಆಕಸ್ಮಿಕವಾಗಿ ಸಂಭವಿಸುವ ಬೆಂಕಿ ಅವಘಡ ಹಾಗೂ ನೀರಿನಿಂದಾಗುವ ಪ್ರಾಣ ಹಾನಿಯನ್ನು ನುರಿತ ಕೌಶಲ್ಯದಿಂದತಡೆಯಬಹುದು ಎಂದು ಹೇಳಿದರು.
ಬಹುಮಹಡಿ ಕಟ್ಟಡಗಳಿಗೆ ನಿರ್ಮಾಣ ಪೂರ್ವದಲ್ಲಿ ಅಗ್ನಿಶಾಮಕ ಇಲಾಖೆಯಿಂದನೀಡಲಾಗುವ ನಿರಾಪೇಕ್ಷಣಾ ಪತ್ರ, ಬೆಂಕಿ ಆಕಸ್ಮಿಕದ ತುರ್ತು ಕರೆಗೆ ಪ್ರತಿಕ್ರಿಯೆ, ಅಪಘಾತ, ನೈಸರ್ಗಿಕ ವಿಪತ್ತು, ರಕ್ಷಣಾಕಾರ್ಯ ಮತ್ತು ವಿಪತ್ತು ನಿರ್ವಹಣೆಯ ತುರ್ತು ಕರೆಗಳಿಗೆ ಪ್ರತಿಕ್ರಿಯೆ, ಪಟಾಕಿಗಳ ಲೈಸನ್ಸ್‌ಗಾಗಿ ನಿರಾಪೇಕ್ಷಣಾ ಪತ್ರಗಳು ಕಾರ್ಯವು ನಮ್ಮ ವ್ಯಾಪ್ತಿಗೆ ಬರುತ್ತವೆ ಎಂದರು.
ಮುಖ್ಯಶಿಕ್ಷಕ ವೆಂಕಟೇಶ ಗುಡೆಪ್ಪನವರ ಮಾತನಾಡಿ, ಅಗ್ನಿ ಅವಘಡಗಳನ್ನು, ಪ್ರಾಕೃತಿಕ ವಿಕೋಪಗಳನ್ನು ತಡೆದು ಪ್ರಾಣ ಹಾನಿಯಾಗದ ರೀತಿಯಲ್ಲಿ ಜೀವದ ಹಂಗನ್ನು ಪಣಕ್ಕಿಟ್ಟು ಸಾರ್ವಜನಿಕರ ಹಾಗೂ ಪ್ರಾಣಿ ಪಕ್ಷಿ ಸಂಕುಲಕ್ಕೆ ವಿಶೇಷ ಸೇವೆ ನೀಡುವ ಅಗ್ನಿಶಾಮಕ ದಳದ ಕಾರ್ಯ ಶ್ಲಾಘನೀಯ ಎಂದರು.
ಇದನ್ನೂ ಓದಿ:ಕಾರವಾರ ಜಿಪಂಗೆ ಶಾಲಿನಾ ಸಿದ್ದಿ ಏಕ್ ದಿನ್ ಕಾ ಸಿಇಒ
ಆಡಳಿತಾ ಧಿಕಾರಿ ಮಲ್ಲು ಕಳ್ಳೆನ್ನವರ, ಅಗ್ನಿ ಶ್ಯಾಮಕದಳದ ರಜಾಕ ಮಂಟೂರ, ಎ.ಬಿ. ಹಿರೇಮಠ, ಎಂ.ವೈ. ಪಾಟೀಲ, ಎಸ್.ಎ. ಹಿರೇಮಠ, ಜೆ.ಐ. ಮಠ, ಗಂಗಾ ಕಡಕೋಳ, ಪ್ರೇಮಾ ವಿ.ಎಂ., ಎ.ಎಚ್. ಪಲ್ಲೇದ, ಎಚ್. ಎನ್. ಬಡಿಗೇರ, ಎಲ್.ಕೆ. ಕಿತ್ತೂರ, ಶಾಂತಾ ಒಂಟಗೋಡಿ, ಸುಮನ್ ಕೊಡಗ, ಮೇಘಾ ಗಣಿ, ಶೃತಿ ಗೌಡಣ್ಣವರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bantwal: ತುಂಬೆ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.