ಹಗಲಲ್ಲೇ ಚಿಲ್ಲರೆ ನೆಪದಲ್ಲಿ ಹಣ ದೋಚಿ ಪರಾರಿ: ಹೆಚ್ಚುತ್ತಿರುವ ಪ್ರಕರಣಗಳಿಂದ ಜನತೆ ಕಂಗಾಲು
Team Udayavani, Apr 3, 2021, 9:23 AM IST
ಬನಹಟ್ಟಿ(ಬಾಗಲಕೋಟೆ) : ಚಿಲ್ಲರೆ ಕೇಳುವ ನೆಪದಲ್ಲಿ ಬಂದು 15 ಸಾವಿರ ನಗದು ದೋಚಿ ಪರಾರಿಯಾದ ಘಟನೆ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಬನಹಟ್ಟಿಯ ವೈಭವ ಚಿತ್ರಮಂದಿರ ಬಳಿಯಿರುವ ರಾಜ್ ವರ್ಲ್ಡ್ ಮೊಬೈಲ್ ಸೆಂಟರ್‌ನಲ್ಲಿ ಮಧ್ಯಾಹ್ನ 3 ಗಂಟೆ ಸುಮಾರಿಗೆ ಒಂಟಿ ಯುವತಿ ಅಂಗಡಿಯಲ್ಲಿ ಕುಳಿತಿದ್ದನ್ನು ಕಂಡ ಇಬ್ಬರು ಅನಾಮಿಕ ವ್ಯಕ್ತಿಗಳು ಬೈಕ್ ಮೇಲೆ ಬಂದು 500 ರೂ.ಗಳ ಚಿಲ್ಲನೆ ನೀಡಿ ಎಂದು ಕೇಳಿದ್ದಾರೆ. ಅಂಗಡಿಯೊಳಗಿದ್ದ ಯುವತಿ ಚಿಲ್ಲರೆಯಿಲ್ಲವೆಂದು ಸ್ಪಷ್ಟವಾಗಿ ತಿಳಿಸಿದರೂ ಕೊನೆಗೆ 100 ರೂ.ಗಳದದ್ದಾರೂ ಕೊಡಿ, ಹೊಸದಾದ ನೋಟುಗಳನ್ನು ಕೊಡಿ ಎಂದು ಒಬ್ಬರು ಮಾತಿಗಿಳಿದ್ದರು.
ಇದನ್ನೂ ಓದಿ:ಮಂಜು ಕವಿದ ವಾತಾವರಣ: ಹುಬ್ಬಳ್ಳಿಯಲ್ಲಿ ಲ್ಯಾಂಡ್ ಆಗಬೇಕಿದ್ದ ವಿಮಾನ ಮಂಗಳೂರಿಗೆ!
ಮತ್ತೋರ್ವ ವ್ಯಕ್ತಿ ನೇರವಾಗಿ ಅಂಗಡಿಯೊಳಗೆ ಹೋಗಿ ಹಣವಿದ್ದ ಡ್ರಾವರ್ ನಲ್ಲಿ ಇಲ್ಲಿವೆ ನೋಡಿ ಎಂದು ಹೇಳುತ್ತ, ಮತ್ತೋರ್ವ ವ್ಯಕ್ತಿಯೊಂದಿಗೆ ಮಾತಿನೊಂದಿಗೆ ಗೊಂದಲ ಸೃಷ್ಟಿಸಿ ಏಕಾಏಕಿ ಡ್ರಾವರ್ ದಲ್ಲಿದ್ದ ಹಣದ ಬಂಡಲ್‌ನ್ನು ಕ್ಷಣಾರ್ಧದಲ್ಲಿಯೇ ಕಣ್ಣು ಮುಂದೆಯೇ ಎತ್ತಿಕೊಂಡು ಇಬ್ಬರೂ ಬೈಕ್ ಏರಿ ಪರಾರಿಯಾದ ಘಟನೆ ನಡೆದಿದೆ. ಇದರಿಂದ ಕಕ್ಕಾಬಿಕ್ಕಿಯಾದ ಯುವತಿ ಜೋರಾಗಿ ಕೂಗುವಷ್ಟರಲ್ಲಿಯೇ ಪರಾರಿಯಾಗಿದ್ದಾರೆ. ಕಳ್ಳರ ಕೈಚಳಕ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಚಿಲ್ಲರೆ ನೀಡಿ ಎಂದು 500 ಅಥವಾ 2000 ಮುಖಬೆಲೆಯ ನೋಟಿನೊಂದಿಗೆ ಫೀಲ್ಡಿಗಳಿಯುತ್ತಿರುವ ಅನಾಮಿಕ ವ್ಯಕ್ತಿಗಳಿಂದ ಕಳೆದೊಂದು ತಿಂಗಳಿನಿಂದ ಅಲ್ಲಲ್ಲಿ ಇಂತಹ ಕೃತ್ಯಗಳು ನಡೆಯುತ್ತಿವೆ.
ಇದನ್ನೂ ಓದಿ: 10 ಮತ್ತು 12ನೇ ತರಗತಿ ಪರೀಕ್ಷೆ ಸುತ್ತೋಲೆ ಗೊಂದಲಕ್ಕೆ ಸಿಬಿಎಸ್‌ಇ ತೆರೆ
ಕಳೆದೊಂದು ವಾರದ ಹಿಂದೆಯೇ ಇದೇ ಪ್ರದೇಶದ ಸೋಮವಾರ ಪೇಟೆಯ ಜನಧನ ಸೌಹಾರ್ದ ಸಂಘದಲ್ಲಿಯೇ ಇದೇ ರೀತಿ ಪ್ರಕರಣ ನಡೆದಿತ್ತು.
ಇದರಿಂದ ರಬಕವಿ-ಬನಹಟ್ಟಿ ತಾಲೂಕಿನಾದ್ಯಂತ ವ್ಯಾಪಾರಿ ಹಾಗು ಸಹಕಾರಿ ಸಂಘಗಳಲ್ಲಿ ಆತಂಕ ಹೆಚ್ಚಾಗಿದೆ. ಇಂತಹ ಕೃತ್ಯವೆಸಗುತ್ತಿರುವ ಜಾಲವನ್ನು ಬೆನ್ನಟ್ಟಿ ಪೊಲೀಸರು ತಕ್ಕ ಶಾಸ್ತಿ ಮಾಡಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.