ನೌಕರಿಗಾಗಿ ಚಿಮ್ಮನಕಟ್ಟಿ ಮನೆ ಮುಂದೆ ಆತ್ಮಹತ್ಯೆ
Team Udayavani, Mar 23, 2018, 6:45 AM IST
ಬಾದಾಮಿ: ಗ್ರಾಮ ಸೇವಕ ಹುದ್ದೆಗೆ ತನ್ನ ಮಗನನ್ನು ನೇಮಕ ಮಾಡುವಂತೆ ಮಾಡಿದ ಮನವಿಗೆ ಸೂಕ್ತ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಶಾಸಕ ಚಿಮ್ಮನಕಟ್ಟಿ ಅವರ ಮನೆ ಎದುರೇ ವಿಷ ಸೇವಿಸಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಶಾಂತವ್ವ ಗೋವಿಂದಪ್ಪ ವಾಲಿಕಾರ(45) ಆತ್ಮಹತ್ಯೆಗೆ ಶರಣಾದ ಮಹಿಳೆ. ಈಕೆಯ ಪತಿ ಗೋವಿಂದಪ್ಪ ಬಾದಾಮಿ ತಾಲೂಕು ಯರಗೊಪ್ಪ ಗ್ರಾಮದ ಗ್ರಾಮ ಸೇವಕರಾಗಿ ಕೆಲಸ ಮಾಡುತ್ತಿದ್ದರು. ಎರಡು ವರ್ಷಗಳ ಹಿಂದೆ ನಿಧನರಾಗಿದ್ದು, ಅವರ ಪುತ್ರ ಶಂಕ್ರಪ್ಪ ವಾಲಿಕಾರ ತಾತ್ಕಾಲಿಕ ನೆಲೆಯಲ್ಲಿ ಅದೇ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದರು. ಈಚೆಗೆ ಶಂಕ್ರಪ್ಪ ಅವರನ್ನು ಕೆಲಸದಿಂದ ತೆಗೆದು ಅನಂತಗಿರಿ ಗ್ರಾಮದ ಬೇರೊಬ್ಬರನ್ನು ನೇಮಕ ಮಾಡಿಕೊಳ್ಳಲಾಗಿತ್ತು. ಮರಳಿ ತನ್ನ ಮಗನನ್ನೇ ನೇಮಕ ಮಾಡಬೇಕು ಎಂದು ಚಿಮ್ಮನಕಟ್ಟಿಗೆ ಶಾಂತವ್ವ ಮನವಿ ಮಾಡಿಕೊಂಡಿದ್ದರು. ಇದಕ್ಕೆ ಸ್ಪಂದಿಸಲಿಲ್ಲವೆಂದು ಗುರುವಾರ ಬೆಳಗ್ಗೆ ಶಾಂತವ್ವ, ಶಾಸಕರ ಮನೆ ಎದುರೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಚಿಮ್ಮನಕಟ್ಟಿ ಸೇರಿದಂತೆ 8 ಜನರ ವಿರುದಟಛಿ ಜಾತಿ ನಿಂದನೆ,
ಕೊಲೆ ಯತ್ನ ಪ್ರಕರಣ ದಾಖಲಾಗಿದೆ. ಚಿಮ್ಮನಕಟ್ಟಿ ಅವರ ಪತ್ನಿ ರತ್ನಕ್ಕ ಚಿಮ್ಮನಕಟ್ಟಿ, ಪುತ್ರ ಭೀಮಸೇನ ಚಿಮ್ಮನಕಟ್ಟಿ,
ತಹಸೀಲ್ದಾರ್ ಎಸ್.ರವಿಚಂದ್ರನ್ ನಮಗೆ ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಮೃತ ಶಾಂತವ್ವ ಅವರ ಪುತ್ರ ಶಂಕ್ರಪ್ಪ ಆರೋಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
High Court: ಮುಮ್ತಾಜ್ ಅಲಿ ಆತ್ಮಹ*ತ್ಯೆ ಪ್ರಕರಣ: ಆರೋಪಿಗಳನ್ನು ಪೊಲೀಸ್ ವಶಕ್ಕೆ ನೀಡಲ್ಲ
Karnataka: ಲೋಕಾಯುಕ್ತ ದಾಳಿ; ಕಂತೆ ಕಂತೆ ಹಣ ವಶಕ್ಕೆ
H. D. Kumaraswamy: ರಾಜ್ಯದಲ್ಲಿ ಪ್ರಜಾಪ್ರಭುತ್ವ ಕೊನೆಯುಸಿರೆಳೆಯುತ್ತಿದೆಯೇ?
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
C.T.Ravi; ಬಿಡುಗಡೆ ಬಳಿಕ ಬಿಜೆಪಿ ಕಿಡಿ ಕಿಡಿ: ನಾವೇನು ಬಳೆ ತೊಟ್ಟು ಕುಳಿತಿಲ್ಲ…!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.