Mudhol:ಯಾದವಾಡ ಸೇತುವೆ ಜಲಾವೃತ, ಗ್ರಾಮಗಳಿಗೆ ನುಗ್ಗಿದ ನೀರು;ಸಂತ್ರಸ್ಥರಲ್ಲಿ ಹೆಚ್ಚಿದ ಆತಂಕ
Team Udayavani, Jul 28, 2024, 11:37 AM IST
ಮುಧೋಳ: ಘಟಪ್ರಭಾ ನದಿ ಪ್ರವಾಹದ ಅಬ್ಬರಕ್ಕೆ ಮುಧೋಳ-ಯಾದವಾಡ ಸೇತುವೆ ಜಲಾವೃತಗೊಂಡಿದ್ದು, ರಸ್ತೆ ಸಂಚಾರ ಸ್ಥಗಿತಗೊಂಡಿದೆ.
ಜು.27ರ ಶನಿವಾರ ಘಟಪ್ರಭಾ ನದಿಗೆ 80,000 ಕ್ಯುಸೆಕ್ ನೀರು ಹರಿದು ಬಿಡಲಾಗಿತ್ತು. ನದಿ ನೀರಿನ ಪ್ರಮಾಣದಲ್ಲಿ ಭಾರಿ ಏರಿಕೆ ಕಂಡ ಹಿನ್ನೆಲೆ ಶನಿವಾರ ರಾತ್ರಿ ಸೇತುವೆ ಜಲಾವೃತಗೊಂಡಿದೆ.
ಯಾದವಾಡ-ಮುಧೋಳ ಸೇತುವೆ ಜಲಾವೃತಗೊಂಡಿರುವುದರಿಂದ ಯಾದವಾಡ, ಮಿರ್ಜಿ, ಒಂಟಗೋಡಿ, ಉತ್ತೂರ, ಜಾಲಿಬೇರಿ, ರಂಜಣಗಿ ಸೇರಿದಂತೆ 15ಕ್ಕೂ ಹಳ್ಳಿಗಳ ಸಂಪರ್ಕ ಸ್ಥಗಿತಗೊಂಡಿದ್ದು, ಮುಧೋಳಕ್ಕೆ ಆಗಮಿಸಬೇಕಾದರೆ ಸುತ್ತಿ ಬಳಸಿ ಮಾರ್ಗವನ್ನು ಬಳಕೆ ಮಾಡಬೇಕಾಗಿದೆ.
ಗ್ರಾಮಗಳಿಗೆ ನುಗ್ಗಿದ ನೀರು; ಸಂತ್ರಸ್ಥರಲ್ಲಿ ಹೆಚ್ಚಿದ ಆತಂಕ
ಮುಧೋಳ: ಘಟಪ್ರಭೆಯ ರೌದ್ರನರ್ತನಕ್ಕೆ ತಾಲೂಕಿನ ಗ್ರಾಮೀಣ ಭಾಗದ ಜನರ ಜೀವನ ಅಯೋಮಯವಾಗುತ್ತಿದೆ.
ಇಲ್ಲಿಯವರೆಗೆ ಗ್ರಾಮದ ಸರಹದ್ದಿನಲ್ಲಿ ರೌದ್ರನರ್ತನ ತೋರುತ್ತಿದ್ದ ನದಿ ನೀರು ಜು.27ರ ಶನಿವಾರ ರಾತ್ರಿ ಹಲವು ಗ್ರಾಮಗಳಿಗೆ ನುಗ್ಗುವ ಮೂಲಕ ಅವಾಂತರ ಸೃಷ್ಟಿಸಿದೆ.
ತಾಲೂಕಿನ ಮಿರ್ಜಿ, ಮಳಲಿ ಗ್ರಾಮಗಳಿಗೆ ನುಗ್ಗಿರುವ ನೀರು ಹೆಚ್ಚಿನ ಆತಂಕ ಸೃಷ್ಟಿಸಿದೆ. ನದಿ ನೀರಿನಿಂದ ಮನೆಮಠ ತೊರೆದಿರುವ ಗ್ರಾಮದ ಹಲವು ಕುಟುಂಬಗಳು ಜಿಲ್ಲಾಡಳಿತ ನಿರ್ಮಿಸಿರುವ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆಯುತ್ತಿವೆ.
ನದಿ ನೀರಿನ ಮಟ್ಟ ಇನ್ನೂ ಹೆಚ್ಚಾಗಲಿದ್ದು, ಪ್ರವಾಹ ತಡೆಗೆ ಜಿಲ್ಲಾಡಳಿತ ಹಗಳಿರುಳು ಶ್ರಮಿಸುತ್ತಿದೆ. ಇಂದು (ಜು.28ರ ಭಾನುವಾರ) ಸಂಜೆ ಇನ್ನಷ್ಟು ಗ್ರಾಮಗಳಿಗೆ ನೀರು ಸುತ್ತುವರಿಯುವ ಆತಂಕವಿದ್ದು ಮುಂಜಾಗೃತ ಕ್ರಮವಾಗಿ ಸಂತ್ರಸ್ಥರನ್ನು ಕಾಳಜಿ ಕೇಂದ್ರಗಳತ್ತ ಕರೆದ್ಯೊಯುವ ಕೆಲಸ ಭರದಿಂದ ಸಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ
Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು
ವಿಳಾಸ ಕೇಳುವ ನೆಪದಲ್ಲಿ ವ್ಯಕ್ತಿಯ ಕೊರಳಲ್ಲಿದ್ದ ಚಿನ್ನದ ಚೈನ್ ಕದ್ದ ಅಪರಿಚಿತ ವ್ಯಕ್ತಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.