Pollution water: ಮುಧೋಳ ಮಹಾರಾಣಿ ಕೆರೆಗೆ ಕಲುಷಿತ ನೀರು

ಜಾಲಿಕಂಟಿ ತೆರವುಗೊಳಿಸಿ ನೀರು ಸರಾಗವಾಗಿ ಹರಿದುಹೋಗಲು ಅನುವು ಮಾಡಿಕೊಡಬೇಕು

Team Udayavani, Aug 11, 2023, 2:18 PM IST

Pollution water: ಮುಧೋಳ ಮಹಾರಾಣಿ ಕೆರೆಗೆ ಕಲುಷಿತ ನೀರು

ಮುಧೋಳ: ನಗರದ ಜೀವನಾಡಿ ಮಹಾರಾಣಿ ಕೆರೆಗೆ ಪೂರೈಕೆಯಾಗುವ ನೀರು ಹರಿದು ಬರುವ ಕಾಲುವೆಯಲ್ಲಿ ಸಂಗ್ರಹವಾಗುತ್ತಿರುವ ತ್ಯಾಜ್ಯ ನಗರ ನಿವಾಸಿಗಳಲ್ಲಿ ಸಾಂಕ್ರಾಮಿಕ ರೋಗದ ಆತಂಕ ಹುಟ್ಟುಹಾಕುತ್ತಿದ್ದು, ಕಾಲುವೆ ಸ್ವಚ್ಛತೆಗೆ ಮುಂದಾಗದ ಅಧಿಕಾರಿಗಳ ಕ್ರಮಕ್ಕೆ ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.

ನಗರದ ಸರಿಸುಮಾರು 50 ಸಾವಿರ ಜನಸಂಖ್ಯೆಗೆ ನಿತ್ಯ ಬಳಕೆಗೆ ಸದ್ಯ ಈ ಕೆರೆಯ ನೀರನ್ನೇ ಪೂರೈಕೆ ಮಾಡಲಾಗುತ್ತಿದೆ. ಆದರೆ ಘಟಪ್ರಭಾ ನದಿಯಿಂದ ಕೆರೆಗೆ ನೀರು ಹರಿದು ಬರಲು ಮಾಡಿರುವ ಕಾಲುವೆ ಘನತ್ಯಾಜ್ಯ ಎಸೆಯುವ ತಿಪ್ಪೆಗುಂಡಿಯಂತಾಗಿರುವುದರಿಂದ ಕೆರೆಯ ನೀರು ಮಲಿನಗೊಂಡು ಸಾರ್ವಜನಿಕರಲ್ಲಿ ರೋಗದ ಭೀತಿಯನ್ನು ಹುಟ್ಟುಹಾಕಿದೆ.

ಕಾಲುವೆ ಅಕ್ಕಪಕ್ಕ ಘನತ್ಯಾಜ್ಯ: ಮಂಟೂರು ರಸ್ತೆಯ ಬಳಿಯಿರುವ ಮುಖ್ಯ ಕಾಲುವೆಯಿಂದ ಕೆರೆಗೆ ಸಣ್ಣ ಕಾಲುವೆ ನಿರ್ಮಿಸಲಾಗಿದೆ. ಅದೇ ರೀತಿ ಮಂಡಬಸಪ್ಪನ ದೇವಸ್ಥಾನದ ಪಕ್ಕದಲ್ಲಿರುವ ಮುಖ್ಯ ಕಾಲುವೆಯಿಂದ ಮತ್ತೂಂದು ಸಣ್ಣ ಕಾಲುವೆಯನ್ನು ನಿರ್ಮಿಸಲಾಗಿದೆ. ಸದ್ಯ ಈ ಎರಡೂ ಕಾಲುವೆಯಿಂದ ಘಟಪ್ರಭಾ ನದಿ ನೀರನ್ನು ಮಹಾರಾಣಿ ಕೆರೆಗೆ ಹರಿಸಲಾಗುತ್ತದೆ. ಎರಡೂ ಸಣ್ಣ ಕಾಲುವೆಗಳು ನಗರದ ಪ್ರಮುಖ ಬಡಾವಣೆ ಪಕ್ಕದಲ್ಲಿ ಹಾದು ಹೋಗಿರುವ ಕಾರಣ ಸಾರ್ವಜನಿಕರು ಕಾಲುವೆ ಅಕ್ಕಪಕ್ಕದಲ್ಲಿಯೇ ಘನತ್ಯಾಜ್ಯ ಹಾಕುತ್ತಿದ್ದಾರೆ. ಇದರಿಂದಾಗಿ ಕಾಲುವೆ ಅಕ್ಕಪಕ್ಕ ದುರ್ವಾಸನೆ ಬೀರುತ್ತಿದೆ. ಇಲ್ಲಿಯ ನೀರೇ ಕೆರೆಯಲ್ಲಿ ಸಂಗ್ರಹಗೊಳ್ಳುವುದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬುದು ಸಾರ್ವಜನಿಕ ವಾದವಾಗಿದೆ.

ಗಿಡಗಂಟಿಗಳ ಬೀಡು: ಇನ್ನು ಅಂದಾಜು 1 ಕಿ.ಮೀ. ವರೆಗೆ ಇರುವ ಕಾಲುವೆ ಅಕ್ಕಪಕ್ಕದಲ್ಲಿ ಜಾಲಿಕಂಟಿ ಗಿಡಗಂಟಿ ಹೆಚ್ಚಿನ ಪ್ರಮಾಣದಲ್ಲಿ ಬೆಳದುಕೊಂಡಿದೆ. ಸಂಬಂಧಿಸಿದ ಅಧಿಕಾರಿಗಳು ಕಾಲ ಕಾಲಕ್ಕೆ ಕಾಲುವೆ ಸ್ವಚ್ಛಗೊಳಿಸದ ಕಾರಣ ಕಾಲುವೆ ಇಕ್ಕೆಲಗಳಲ್ಲಿ ಕಸಕಡ್ಡಿಯೇ ತುಂಬಿಕೊಂಡಿದೆ. ಕಸವು ಕಾಲುವೆಯಲ್ಲಿ ಬಿದ್ದು ನೀರನ್ನು ಮುಂದಕ್ಕೆ ಹರಿಬಿಡದ ಕಾರಣ ನೀರು ನಿಂತಲ್ಲಿಯೇ ನಿಂತು ಮಲಿನಗೊಂಡು ಸೊಳ್ಳಗಳ ಉತ್ಪತ್ತಿಗೂ ಕಾರಣವಾಗುತ್ತಿದೆ. ಕಾಲುವೆ ಪಕ್ಕ ಬೆಳೆದಿರುವ ಜಾಲಿಕಂಟಿಯನ್ನು ಕಂಡೂ ಕಾಣದವರಂತೆ ಅಧಿ ಕಾರಿಗಳು ವರ್ತಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕೂಡಲೇ ಕಾಲುವೆ
ಇಕ್ಕೆಲುಗಳಲ್ಲಿರುವ ಜಾಲಿಕಂಟಿ ತೆರವುಗೊಳಿಸಿ ನೀರು ಸರಾಗವಾಗಿ ಹರಿದುಹೋಗಲು ಅನುವು ಮಾಡಿಕೊಡಬೇಕು ಎಂಬುದು ಸ್ಥಳೀಯರ ಆಗ್ರಹ.

ಭಯ ಉಟ್ಟಿಸುವ ವೈದ್ಯಕೀಯ ತ್ಯಾಜ್ಯ: ಕಾಲುವೆ ಕೆಲ ಭಾಗದಲ್ಲಿ ವೈದ್ಯಕೀಯ ತ್ಯಾಜ್ಯವನ್ನು ಸುರಿದಿರುವುದು ಸಾರ್ವಜನಿಕರ ಆತಂಕವನ್ನು ಹೆಚ್ಚುವಂತೆ ಮಾಡಿದೆ. ವೈದ್ಯಕೀಯ ತ್ಯಾಜ್ಯ ನೀರಿನೊಂದಿಗೆ ಬೆರೆತು ಸಾಂಕ್ರಾಮಿಕ ರೋಗ ಉಲ್ಬಣಿಸುವ ಪರಿಸ್ಥಿತಿ ಇದ್ದು ಸಂಬಂ ಧಿಸಿದ ಅಧಿಕಾರಿಗಳು ಕಾಲುವೆ ಸ್ವತ್ಛತೆಗೆ ಕ್ರಮ ವಹಿಸಿಕೊಳ್ಳಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಕೆರೆಯಲ್ಲಿನ ನೀರು ತಿಂಗಳುಗಟ್ಟಲೆ ಸಂಗ್ರಹಗೊಳ್ಳುವುದರಿಂದ ಅದು ಮಲಿನಗೊಳ್ಳುವ ಸಂಭವ ಹೆಚ್ಚಿರುತ್ತದೆ. ಹರಿದು ಬರುವ ನೀರು ಶುದ್ಧವಾಗಿದ್ದರೆ ಮಾತ್ರ ಸಾರ್ವಜನಿಕ ಬಳಕೆಗೆ ಯೋಗ್ಯ. ಆದರೆ ತ್ಯಾಜ್ಯದೊಂದಿಗೆ ಬೆರೆತು ಬರುವ ನೀರಿನಿಂದ ರೋಗ ಹರಡುವ ಸಂಭವ ಹೆಚ್ಚಿದ್ದು ಅಧಿಕಾರಿಗಳು ಅನಾಹುತ ಸಂಭವಿಸುವ ಮುನ್ನವೇ ಎಚ್ಚೆತ್ತು ಕಾಲುವೆಯನ್ನು ಸ್ವತ್ಛಗೊಳಿಸಿ ಅಕ್ಕಪಕ್ಕದಲ್ಲಿ ಕಸ ಹಾಕದಂತೆ ಸಾರ್ವಜನಿಕರಿಗೆ ಮನವರಿಕೆ ಮಾಡಬೇಕು.

ಸ್ಪಷ್ಟತೆ ಇಲ್ಲ: ಇನ್ನು ಕಾಲುವೆಗೆ ಸಂಬಂಧಿಸಿದಂತೆ ಜಿಎಲ್‌ ಬಿಸಿ ಹಾಗೂ ನಗರಸಭೆ ಅಧಿಕಾರಿಗಳಲ್ಲಿ ಸ್ಪಷ್ಟತೆಯೇ ಇಲ್ಲ. ಕಾಲುವೆ ಸ್ವಚ್ಛತೆ ಬಗ್ಗೆ ಜಿಎಲ್‌ಬಿಸಿ ಅಧಿಕಾರಿಗಳನ್ನು ಪ್ರಶ್ನಿಸಿದರೆ ನಗರವ್ಯಾಪ್ತಿಯೊಳಗಿರುವುದರಿಂದ ಸ್ವಚ್ಚತಾ ಕಾರ್ಯ ನಗರಸಭೆ ಅಧಿಕಾರಿಗಳಿಗೆ ಸಂಬಂಧಪ ಡುತ್ತದೆ ಎನ್ನುತ್ತಾರೆ. ಇನ್ನು ನಗರಸಭೆ ಅಧಿಕಾರಿಗಳನ್ನು ಪ್ರಶ್ನಿಸಿದರೆ ಅದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ, ನೀರಾವರಿ ಇಲಾಖೆಗೆ ಸಂಬಂಧಿಸುತ್ತದೆ ಎಂದು ಹಾರಿಕೆ ಉತ್ತರ ಕೊಡುತ್ತಾರೆ. ಒಟ್ಟಿನಲ್ಲಿ ಅಧಿಕಾರಿಗಳ ನಮನ್ವಯತೆ ಕೊರತೆ ಮಧ್ಯೆ ಕಾಲುವೆ ತಿಪ್ಪೆಗುಂಡಿಯಂತಾಗಿರುವುದು ದುರ್ದೈವವೆ ಸರಿ.

ಕಾಲುವೆ ನಮ್ಮ ವ್ಯಾಪ್ತಿಗೆ ಬರುವುದೇ ಎಂಬುದನ್ನು ಪರಿಶೀಲಿಸಿ ಸ್ವಚ್ಛತಾ ಕಾರ್ಯ ಕೈಗೊಳ್ಳುತ್ತೇವೆ. ಸ್ಥಳ ಪರಿಶೀಲನೆ ಬಳಿಕ ಸ್ವಚ್ಛ ತೆಗೆ ಮುಂದಾಗುತ್ತೇವೆ.
*ಶಿವಪ್ಪ ಅಂಬಿಗೇರ ನಗರಸಭೆ ಪೌರಾಯುಕ್ತ

ಗೋವಿಂದಪ್ಪ ತಳವಾರ

ಟಾಪ್ ನ್ಯೂಸ್

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-mudhol

Mudhol: ನಾರಿಯರ ಗಸ್ತುಕಾರ್ಯಕ್ಕೆ ಪೊಲೀಸ್ ಇಲಾಖೆ ಶ್ಲಾಘನೆ

Bagalakote: ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ ಮಹತ್ವದ ಒಪ್ಪಂದಕ್ಕೆ ಎಂ.ಆರ್.ಎನ್ ಸಮೂಹ ಸಹಿ

Bagalakote: ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ ಮಹತ್ವದ ಒಪ್ಪಂದಕ್ಕೆ ಎಂ.ಆರ್.ಎನ್ ಸಮೂಹ ಸಹಿ

11

Mudhol: ಅಂತಾರಾಜ್ಯ ಕಳ್ಳನ ಬಂಧನ; ಟ್ರ್ಯಾಕ್ಟರ್ ವಶ

4

Mudhol: ಮನೆ ಕಳ್ಳತನ; ದೂರು ದಾಖಲು

Mudhol: ನಗರದಲ್ಲಿ ಹೆಚ್ಚಿದ ಕಳ್ಳರ ಹಾವಳಿ… ಮಹಿಳಾ‌ಮಣಿಗಳಿಂದ ರಾತ್ರಿ‌ ಗಸ್ತು

Mudhol: ನಗರದಲ್ಲಿ ಹೆಚ್ಚಿದ ಕಳ್ಳರ ಹಾವಳಿ… ಮಹಿಳಾ‌ಮಣಿಗಳಿಂದ ರಾತ್ರಿ‌ ಗಸ್ತು

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.