ಮುಧೋಳ: ಸ್ಥಳಾಂತರವಾಗುವ ಮನಸ್ಸಿದೆ, ಮಾರ್ಗವಿಲ್ಲ!

Team Udayavani, Jul 30, 2024, 4:18 PM IST

ಮುಧೋಳ: ಸ್ಥಳಾಂತರವಾಗುವ ಮನಸ್ಸಿದೆ, ಮಾರ್ಗವಿಲ್ಲ!

ಉದಯವಾಣಿ ಸಮಾಚಾರ
ಮುಧೋಳ: ಪ್ರತಿ ಸಾರಿ ಪ್ರವಾಹ ಬಂದಾಗ ಒಕ್ಕಲೇಳುವಂತಾಗಿದೆ. ನಮಗೊಂದು ಶಾಶ್ವತ ನೆಲೆ ನೀಡಿ ಪುಣ್ಯ ಕಟ್ಟಿಕೊಳ್ಳಿ ಎಂದು ಪ್ರತಿನಿ ಧಿಗಳ ಮುಂದೆ ಗೋಗರೆದರೂ ಭರವಸೆ ಹೊರತು ಮತ್ತೇನೂ ಸಿಕ್ಕಿಲ್ಲ. ಸರಿ ಸುಮಾರು 2490 ಜನಸಂಖ್ಯೆ ಹಾಗೂ 1058 ಜಾನುವಾರು ಹೊಂದಿರುವ ಮಿರ್ಜಿ ಗ್ರಾಮ ಸ್ಥಳಾಂತರಿಸಬೇಕೆನ್ನುವ ಬೇಡಿಕೆ ಹಲವಾರು ದಶಕದಿಂದ ಇದ್ದರೂ ಜಾಗದ ನೆಪವೊಡ್ಡುವ ಅಧಿಕಾರಿಗಳು ಕಣ್ಣೊರೆಸುವ ತಂತ್ರ ಅನುಸರಿಸುತ್ತಿದ್ದಾರೆ.

ನಿಮ್ಮ ಶಾಶ್ವತ ನೆಲೆ ಕಟ್ಟಿಕೊಡಲು ಸರ್ಕಾರ ತಯಾರಿದ್ದು, ಆದರೆ ಗ್ರಾಮ ಸ್ಥಳಾಂತರಕ್ಕೆ ಜಮೀನು ಸಮಸ್ಯೆ ಉಂಟಾಗಿದೆ. ಯಾರಾದರೂ ಸರ್ಕಾರಿ ಬೆಲೆಯಲ್ಲಿ ಜಮೀನು ನೀಡಿದರೆ ಗ್ರಾಮ ಸ್ಥಳಾಂತರಕ್ಕೆ ನಾವು ಸಿದ್ಧ ಎನ್ನುತ್ತಾರೆ. ಬಂಗಾರ ಬೆಳೆಯುವ ಭೂಮಿಯನ್ನು ಸರ್ಕಾರಿ ಬೆಲೆಗೆ ಕೊಟ್ಟು ನೆರವಾಗಲು ಯಾವ ಜಮೀನ್ದಾರರು ಮುಂದೆ ಬರುತ್ತಿಲ್ಲ. ಇದೊಂದೇ ಕಾರಣದಿಂದ
ಮಾತ್ರ ಮಿರ್ಜಿ ಗ್ರಾಮದ ಶಾಶ್ವತ ಸ್ಥಳಾಂತರ ಮರೀಚಿಕೆಯಾಗಿಯೇ ಉಳಿದುಕೊಂಡಿದೆ.

ಪ್ರವಾಹ ಬಂದಾಗೊಮ್ಮೆ ಗ್ರಾಮಸ್ಥರಿಗೆ ಕಾಳಜಿ ಕೇಂದ್ರದ ಅನುಕೂಲ ಕಲ್ಪಿಸುವ ಜನಪ್ರತಿನಿ ಧಿಗಳು ಗ್ರಾಮಸ್ಥರ ಗೋಳು ಕಂಡು ಪರಿಹರಿಸಲಾಗದೆ ಕೈಕೈ ಹಿಸುಕಿ ಕೊಳ್ಳುವಂತಾಗಿದೆ.

ಫಲವತ್ತಾದ ಭೂಮಿ ಕೊಡಲು ನಕಾರ: ಮಿರ್ಜಿ ಗ್ರಾಮ ಘಟಪ್ರಭಾ ನದಿ ತಟದಲ್ಲಿ ನೆಲೆ ಯಾಗಿರುವ ಪ್ರದೇಶ ಇಲ್ಲಿನ ಮೆಕ್ಕಲು ಮಣ್ಣಿನ ಜಮೀನಿನಲ್ಲಿ ಬಂಗಾರ ಬೆಳೆಯುವ ಶಕ್ತಿ ಇದೆ. ಐದಾರು ವರ್ಷಕ್ಕೊಮ್ಮೆ ಬಂದು ಹೋಗುವ ಪ್ರವಾಹಕ್ಕಾಗಿ ಫಲವತ್ತಾದ ಭೂ ಪ್ರದೇಶ ಬಿಟ್ಟು ಕೊಡಲು ಯಾರೂ ಮುಂದಾಗುತ್ತಿಲ್ಲ. ಜನಪ್ರತಿನಿಧಿಗಳು ಸ್ಥಳಾಂತರವೆಂಬ ತುಪ್ಪ ಜನರ ಮೂಗಿಗೆ ಸವರಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುವುದು ಸುಳ್ಳಲ್ಲ.

*ಗೋವಿಂದಪ್ಪ ತಳವಾರ

ಟಾಪ್ ನ್ಯೂಸ್

Karnataka Govt: ವಕ್ಫ್ ವಿರುದ್ಧ ಬೀದಿಗಿಳಿದ ಕಮಲ ಪಡೆ; ಉಡುಪಿ ಸೇರಿ ಹಲವೆಡೆ ಪ್ರತಿಭಟನೆ

Karnataka Govt: ವಕ್ಫ್ ವಿರುದ್ಧ ಬೀದಿಗಿಳಿದ ಕಮಲ ಪಡೆ; ಉಡುಪಿ ಸೇರಿ ಹಲವೆಡೆ ಪ್ರತಿಭಟನೆ

Karnataka: ದೆಹಲಿ ಮಾರುಕಟ್ಟೆಗೆ ಲಗ್ಗೆ ಇಟ್ಟ ಕೆಎಂಎಫ್

Karnataka: ದೆಹಲಿ ಮಾರುಕಟ್ಟೆಗೆ ಲಗ್ಗೆ ಇಟ್ಟ ಕೆಎಂಎಫ್

Karnataka Lokayukta: ನಾಲ್ವರಿಗೆ ಲೋಕಾ ಶಾಕ್‌: 27 ಕೋಟಿ ರೂ. ಆಸ್ತಿ ಪತ್ತೆ

Karnataka Lokayukta: ನಾಲ್ವರಿಗೆ ಲೋಕಾ ಶಾಕ್‌: 27 ಕೋಟಿ ರೂ. ಆಸ್ತಿ ಪತ್ತೆ

ಯಾತ್ರಾರ್ಥಿಯಿಂದ ಸೌತಡ್ಕ ಕ್ಷೇತ್ರದ ಸಿಬಂದಿ ಮೇಲೆ ಹಲ್ಲೆ

Kokkada: ಯಾತ್ರಾರ್ಥಿಯಿಂದ ಸೌತಡ್ಕ ಕ್ಷೇತ್ರದ ಸಿಬಂದಿ ಮೇಲೆ ಹಲ್ಲೆ

Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ

Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ

4-mudhol

Mudhol: ಟ್ರ್ಯಾಕ್ಟರ್ ಹಾಗೂ ಬೊಲೆರೋ ಮುಖಾಮುಖಿ ಡಿಕ್ಕಿ

1-bagalkote

Bagalkote: ಹೇರ್ ಡ್ರೈಯರ್ ಸ್ಪೋಟಗೊಂಡು ಮಹಿಳೆಯ ಎರಡು ಕೈ ತುಂಡು

de

Kulgeri: ಟ್ರ್ಯಾಕ್ಟರ್ ಹಿಂಬದಿಗೆ ಬೈಕ್ ಡಿಕ್ಕಿ; ಸವಾರ ಮೃತ್ಯು

8

Mudhol: ಎರಡೂ ಬಣಗಳಿಂದ ಪ್ರತಿಭಟನೆ ಬಿಸಿ; ಸ್ಥಳದಲ್ಲೇ ಬೀಡುಬಿಟ್ಟಿರುವ ಎಸ್ಪಿ; ಹೈ ಅಲರ್ಟ್

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Karnataka Govt: ವಕ್ಫ್ ವಿರುದ್ಧ ಬೀದಿಗಿಳಿದ ಕಮಲ ಪಡೆ; ಉಡುಪಿ ಸೇರಿ ಹಲವೆಡೆ ಪ್ರತಿಭಟನೆ

Karnataka Govt: ವಕ್ಫ್ ವಿರುದ್ಧ ಬೀದಿಗಿಳಿದ ಕಮಲ ಪಡೆ; ಉಡುಪಿ ಸೇರಿ ಹಲವೆಡೆ ಪ್ರತಿಭಟನೆ

Karnataka: ದೆಹಲಿ ಮಾರುಕಟ್ಟೆಗೆ ಲಗ್ಗೆ ಇಟ್ಟ ಕೆಎಂಎಫ್

Karnataka: ದೆಹಲಿ ಮಾರುಕಟ್ಟೆಗೆ ಲಗ್ಗೆ ಇಟ್ಟ ಕೆಎಂಎಫ್

1-a-JG

Eden Gardens; ‘ಬಿ’ ಬ್ಲಾಕ್‌ಗೆ ಜೂಲನ್‌ ಗೋಸ್ವಾಮಿ ಹೆಸರಿಡಲು ನಿರ್ಧಾರ

Karnataka Lokayukta: ನಾಲ್ವರಿಗೆ ಲೋಕಾ ಶಾಕ್‌: 27 ಕೋಟಿ ರೂ. ಆಸ್ತಿ ಪತ್ತೆ

Karnataka Lokayukta: ನಾಲ್ವರಿಗೆ ಲೋಕಾ ಶಾಕ್‌: 27 ಕೋಟಿ ರೂ. ಆಸ್ತಿ ಪತ್ತೆ

PCB

PCB; ಚಾಂಪಿಯನ್ಸ್‌ ಟ್ರೋಫಿಗೆ ಅಧಿಕಾರಿಯ ನೇಮಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.