ಅರ್ಜಿ ಸಲ್ಲಿಸಿ 2 ತಿಂಗಳಾದ್ರೂ ಇನ್ನೂ ದೊರೆತಿಲ್ಲ ಪಡಿತರ ಚೀಟಿ
| ನೂತನ ಪಡಿತರ ಚೀಟಿಗೆ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ ನೂರಾರು ಬಡವರು
Team Udayavani, Apr 2, 2021, 3:43 PM IST
ಮುಧೋಳ: ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿ ಎರಡು ತಿಂಗಳು ಕಳೆದರೂಸರ್ಕಾರ ಅರ್ಹ ಫಲಾನುಭವಿಗಳನ್ನುಗುರುತಿಸಿ ನೂತನ ಪಡಿತರ ಚೀಟಿ ನೀಡಿಲ್ಲ.
ಕೋವಿಡ್ ಹೊಡೆತದಿಂದ ಕಳೆದ ವರ್ಷ ಆಡಳಿತ ಯಂತ್ರ ಸಂಪೂರ್ಣನಿಷ್ಕ್ರಿಯಗೊಂಡು ಸರ್ಕಾರದ ಎಲ್ಲ ಕೆಲಸಕಾರ್ಯಗಳಿಗೂ ಗ್ರಹಣ ಹಿಡಿದಿತ್ತು.ಅದರ ಭಾಗವಾಗಿ ಕಳೆದ ವರ್ಷ ಮಾರ್ಚ್ ನಲ್ಲಿ ಸ್ಥಗಿತಗೊಂಡಿದ್ದ ನೂತನ ಪಡಿತರಚೀಟಿ ಅರ್ಜಿ ಸ್ವೀಕಾರ ಕಾರ್ಯಕ್ಕೆ2021ರ ಫೆಬ್ರವರಿಯಲ್ಲಿ ಮುಕ್ತಿದೊರೆಕಿತ್ತು. ಫೆಬ್ರುವರಿಯಿಂದ ಸರ್ಕಾರ ನೂತನ ಪಡಿತರ ಚೀಟಿ ನೀಡಲುಅರ್ಜಿ ಸ್ವೀಕಾರಕ್ಕೆ ಆದೇಶ ಹೊರಡಿಸಿದೆ.
ಅಂದಿನಿಂದ ಇಂದಿನವರೆಗೂತಾಲೂಕಿನಲ್ಲಿ ಒಟ್ಟು 1684 ನೂತನ ಅರ್ಜಿ ಸ್ವೀಕಾರಗೊಂಡಿವೆ. ಆದರೆ,ಸರ್ಕಾರ ಮಾತ್ರ ಇದುವರೆಗೂ ಅವುಗಳವಿಲೇವಾರಿ ಮಾಡಿ ಪಡಿತರ ಚೀಟಿವಿತರಿಸಲು ಮುಂದಾಗದಿರುವುದು ಬಡವರನ್ನು ಚಿಂತೆಗೀಡು ಮಾಡಿದೆ.
ತಪ್ಪದ ಸಾರ್ವಜನಿಕರ ಪರದಾಟ: ನಮ್ಮಕಾರ್ಡ್ ಇನ್ನೂ ಯಾವಾಗ ಬರುತ್ತದೆಎಂದು ಅರ್ಜಿ ಸಲ್ಲಿಸಿದ ಬಡವರುದಿನ ನಿತ್ಯ ಕಚೇರಿಗೆ ಅಲೆಯುಂತಾಗಿದೆ.ಕೆಲವು ಕಡೆಯಲ್ಲಿ ಝರಾಕ್ಸ್ ಅಂಗಡಿಗಳಮೂಲಕ ಅರ್ಜಿ ಸಲ್ಲಿಸಿರುವ ನಾಗರಿಕರು ಪ್ರತಿನಿತ್ಯ ಅಂಗಡಿಗೆ ಹೋಗಿಕಾರ್ಡ್ ಬಗ್ಗೆ ವಿಚಾರಿಸುವುದು ಸರ್ವೇಸಾಮಾನ್ಯವಾಗಿದೆ. ಸರ್ಕಾರ ಬಡವರಿಗೆಯಾವಾಗ ಪಡಿತರ ಚೀಟಿ ವಿತರಿಸುತ್ತದೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ.
ನಿತ್ಯ ಸಲ್ಲಿಕೆಯಾಗುತ್ತಿವೆ ಹತ್ತಾರು ಅರ್ಜಿ: ಪಡಿತರ ಚೀಟಿಗಾಗಿ ದೀರ್ಘಕಾಲದವರೆಗೆ ಅರ್ಜಿ ಸ್ಥಗಿತಗೊಳಿಸಿದ್ದಕಾರಣ ಪ್ರತಿನಿತ್ಯ ಹತ್ತಾರು ಅರ್ಜಿಗಳುಸಲ್ಲಿಕೆಯಾಗುತ್ತಿವೆ. ಆದರೆ ಅವುಗಳವಿಲೇವಾರಿಗೆ ಮಾತ್ರ ಸರ್ಕಾರ ಹಾಗೂ ಅಧಿಕಾರಿಗಳು ಮುಂದಾಗುತ್ತಿಲ್ಲಎಂಬ ಆರೋಪ ಸಾರ್ವಜನಿಕರಿಂದಕೇಳಿ ಬರುತ್ತಿದೆ. ಸರ್ಕಾರ ಬಡವರಿಗೆಅನುಕೂಲ ಕಲ್ಪಿಸಿಕೊಡುವ ನಿಟ್ಟಿನಲ್ಲಿಅರ್ಜಿ ವಿಲೇವಾರಿಗೆ ಶೀಘ್ರ ಕ್ರಮಕೈಗೊಂಡು ಅರ್ಹ ಬಡವರಿಗೆ ಕಾರ್ಡ್‌ವಿತರಿಸಬೇಕೆಂಬುದು ಪ್ರಜ್ಞಾವಂತಸಾರ್ವಜನಿಕರ ಆಗ್ರಹವಾಗಿದೆ.
ಹೆಚ್ಚಿನ ಹಣ ಪೀಕುವ ಕಾರ್ಯ:ಪಡಿತರ ಚೀಟಿ ಅರ್ಜಿ ಸಲ್ಲಿಕೆಗಾಗಿಕೆಲ ಖಾಸಗಿ ಅಂಗಡಿಗಳಲ್ಲಿ ಹೆಚ್ಚುಹಣ ಕೇಳುತ್ತಿದ್ದಾರೆಂಬ ಆರೋಪವೂಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.
ಮುಧೋಳ ದ್ವಿತೀಯ ಸ್ಥಾನ : ನೂತನ ಪಡಿತರ ಅರ್ಜಿ ಚೀಟಿಗಾಗಿಜಿಲ್ಲೆಯಾದ್ಯಂತ ಸಲ್ಲಿಕೆಯಾಗಿರುವ ಅರ್ಜಿದಾರರ ಸಂಖ್ಯೆಯಲ್ಲಿಮುಧೋಳ ತಾಲೂಕು ದ್ವಿತೀಯಸ್ಥಾನದಲ್ಲಿದೆ. 2758 ಅರ್ಜಿಸಲ್ಲಿಕೆಯಾಗಿರುವ ಜಮಖಂಡಿತಾಲೂಕು ಮೊದಲ ಸ್ಥಾನದಲ್ಲಿದ್ದರೆ 1684 ಅರ್ಜಿ ಸಲ್ಲಿಕೆಯಾಗಿರುವಮುಧೋಳ ತಾಲೂಕು ನಂತರ ಸ್ಥಾನದಲ್ಲಿದೆ.
ನೂತನ ಪಡಿತರ ಚೀಟಿಗಾಗಿ ತಾಲೂಕಿನಿಂದ ಸಾವಿರಾರು ಅರ್ಜಿಗಳುಸಲ್ಲಿಕೆಯಾಗಿವೆ. ಆದರೆ ಅವುಗಳ ವಿಲೇವಾರಿ ಹಾಗೂ ನೂತನ ಕಾರ್ಡ್‌ವಿತರಣೆ ನಿರ್ಧಾರವನ್ನು ಸರ್ಕಾರವೇ ಕೈಗೊಳ್ಳಬೇಕು. ಸರ್ಕಾರಹೊಸ ಕಾರ್ಡ್‌ವಿತರಣೆಗೆ ಗ್ರೀನ್ ಸಿಗ್ನಲ್ ನೀಡಿದ ಬಳಿಕ ಅರ್ಹ ಫಲಾನುಭವಿಗಳಿಗೆ ಕಾರ್ಡ್‌ವಿತರಿಸಲಾಗುವುದು. – ಸಂಗಮೇಶ ಬಾಡಗಿ, ಮುಧೋಳ ತಹಶೀಲ್ದಾರ್
ಸರ್ಕಾರ ಬಡವರಿಗೆ ಪಡಿತರ ಚೀಟಿ ವಿತರಣೆಗೆ ಅರ್ಜಿ ಕರೆದು ಎರಡು ತಿಂಗಳಾಗಿದೆ. ಅದರಂತೆ ನಾವು ಹೊಸ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿದ್ದೇವೆ.ಇದೂವರೆಗೂ ಕಾರ್ಡ್ ನಮ್ಮ ಕೈಸೇರಿಲ್ಲ. ಸರ್ಕಾರ ಬೇಗನೆ ಎಲ್ಲ ಪ್ರಕ್ರಿಯೆ ಮುಗಿಸಿನಮಗೆ ಕಾರ್ಡ್ ವಿತರಿಸಿದೆ. ಬಡವರಾದ ನಮಗೆ ಹೆಚ್ಚು ಅನುಕೂಲವಾಗುತ್ತದೆ. -ಮಲ್ಲು ಗೌಡರ, ನೂತನ ಪಡಿತರಕ್ಕಾಗಿ ಅರ್ಜಿ ಸಲ್ಲಿಸಿದ ವ್ಯಕಿ
-ಗೋವಿಂದಪ್ಪ ತಳವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ
K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ
Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.