ನಗರಸಭೆ ಆಸ್ತಿ ಅತಿಕ್ರಮಣ; ಕ್ರಮಕ್ಕೆ ಸೂಚನೆ


Team Udayavani, Jul 7, 2021, 9:47 AM IST

ನಗರಸಭೆ ಆಸ್ತಿ ಅತಿಕ್ರಮಣ; ಕ್ರಮಕ್ಕೆ ಸೂಚನೆ

ಬನಹಟ್ಟಿ: ರಬಕವಿ-ಬನಹಟ್ಟಿ ನಗರಸಭೆಯ ಸಾಮಾನ್ಯ ಸಭೆ ನಗರಸಭೆ ಅಧ್ಯಕ್ಷ ಶ್ರೀಶೈಲ ಬೀಳಗಿ ಅಧ್ಯಕ್ಷತೆಯಲ್ಲಿ ನಡೆಯಿತು.

ಮಂಗಳವಾರ ರಾಮಪುರನ ನಗರಸಭೆ ಕಾರ್ಯಾಲಯದಲ್ಲಿ ನಡೆದ ಸಭೆಯಲ್ಲಿ ಹಲವಾರು ವಿಷಯಗಳ ಬಗ್ಗೆ ಚರ್ಚೆ ನಡೆಯಿತು. ಕಾಮಗಾರಿ ಟೆಂಡರ್‌ ಕರೆಯುವಲ್ಲಿ ತಾರತಮ್ಯ ಎಸಗುತ್ತಿದ್ದು, ಕೆಲವರ ಮಾತುಗಳಂತೆ ನಗರಸಭೆ ನಡೆಯುತ್ತಿದೆ ಎಂದು ಸದಸ್ಯರಾದ ಪ್ರಭಾಕರ ಮೊಳೇದ, ಸಂಜಯ ತೆಗ್ಗಿ, ಶಿವಾನಂದ ಬುದ್ನಿ, ಬಸು ಗುಡ್ಡೋಡಗಿ ಸಾಮೂಹಿಕವಾಗಿ ಆರೋಪಿಸಿದರು.

ಮನಬಂದಂತೆ ಕಾರ್ಯನಿರ್ವಹಿಸುವುದಾದರೆ ಸದಸ್ಯರ ಸಾಮಾನ್ಯ ಸಭೆಯಾದರೂ ಏಕೆ ಬೇಕೆಂದು ರಬಕವಿ-ಬನಹಟ್ಟಿ ನಗರಸಭೆಯಲ್ಲಿ ಜರುಗಿದ ಸಾಮಾನ್ಯ ಸಭೆಯಲ್ಲಿ ಬಿಸಿ ಬಿಸಿ ಚರ್ಚೆ ನಡೆಯಿತು. ಕಳೆದ ವರ್ಷದಿಂದ ನಗರಸಭೆ ಅಧಿಧೀನದ 15 ವಾಣಿಜ್ಯ ಮಳಿಗೆಗಳಿಗೆ ಟೆಂಡರ್‌ ಏಕೆ ಕರೆದಿಲ್ಲ.

ಮೊದಲೇ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ನಗರಸಭೆಗೆ ಮತ್ತಷ್ಟು ಹೊರೆಯಾಗುವಂತೆ ಅಧಿಕಾರಿಗಳೇ ಮಾಡಿದ್ದಾರೆಂದು ಸದಸ್ಯ ಯಲ್ಲಪ್ಪ ಕಟಗಿ ಆರೋಪಿಸಿದರು. ಈ ಕುರಿತು ಪ್ರಕ್ರಿಯೆ ನಡೆಯುತ್ತಿದ್ದು, ಕಂದಾಯ ವಿಭಾಗದಲ್ಲಿ ಸಿಬ್ಬಂದಿ ಕೊರತೆ ಕಾರಣ ವಿಳಂಬವಾಗಿದೆ. ತಕ್ಷಣವೇ ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಕಳಿಸಿ ಲೀಲಾವು ಮಾಡಲಾಗುವುದು ಎಂದು ಪೌರಾಯುಕ್ತ ಶ್ರೀನಿವಾಸ ಜಾಧವ ಹೇಳಿದರು.

ನೈರ್ಮಲ್ಯ ನಿರ್ವಹಣೆಗೆಂದು ಈಗಿರುವ 85 ಪೌರ ಕಾರ್ಮಿಕರಿಂದ ಸಾಧ್ಯವಾಗುತ್ತಿಲ್ಲ. ಎಲ್ಲ 31 ವಾರ್ಡ್‌ ಗಳಿಗೆ ಇನ್ನೂ 20 ಕಾರ್ಮಿಕರನ್ನು ಹೊಸದಾಗಿ ಪಡೆದುಕೊಳ್ಳುವಲ್ಲಿ ಸಭೆ ಅನುಮೋದಿಸಿತು. ಬಿಡಾಡಿ ದನಗಳ ರಕ್ಷಣೆಗೆ ರಬಕವಿ-ಬನಹಟ್ಟಿ ನಗರ ವ್ಯಾಪ್ತಿ ಗೋಮಾಳ ಜಾಗ ಪರಿಶೀಲಿಸುವಲ್ಲಿ ಸಭೆ ಮಹತ್ವದ ನಿರ್ಧಾರ ಪಡೆಯಿತು. ಅವಳಿ ನಗರಾದ್ಯಂತ ಉದ್ಯಾನವನ ಸೇರಿದಂತೆ ನಗರಸಭೆಯ ಅಂದಾಜು 133 ಆಸ್ತಿಗಳನ್ನು ಕಬ್ಜಾ ಮಾಡಿಕೊಳ್ಳುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ.

ನ್ಯಾಯಾಲಯದಲ್ಲಿರುವ ಪ್ರಕರಣಗಳಿಗೂ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲವೆಂಬ ಸದಸ್ಯರ ಗಂಭೀರ ಆರೋಪದ ಹಿನ್ನೆಲೆ ಈ ಕುರಿತು ಮಹತ್ವದ ಸಭೆ ಕರೆದು ಎಲ್ಲ ಆಸ್ತಿಗಳ ವಿವರ ಪಡೆದುಕೊಂಡು ನಗರಸಭೆ ಅಧೀನದಲ್ಲಿರಿಸುವಂತೆ ಚರ್ಚೆ ನಡೆಸಲು ಶಾಸಕ ಸಿದ್ದು ಸವದಿ ಸಲಹೆ ನೀಡಿದರು. ಅಲ್ಲದೆ ನಗರಸಭೆ ಆಸ್ತಿಗಳ ಪಟ್ಟಿ ತಯಾರಿಸಿ ಆಸ್ತಿ ಕಬಳಿಸದಂತೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕೆಂದು ನಗರಸಭೆ ಅಧ್ಯಕ್ಷರು ಅಧಿಕಾರಿಗಳಿಗೆ ಸೂಚಿಸಿದರು.

ಸದಸ್ಯರಿಗೆ ಕಿಮ್ಮತ್ತಿಲ್ಲ.: ರಸ್ತೆ ತೆರವುಗೊಳಿಸುವಂತೆ ಸದಸ್ಯರೆ ಅರ್ಜಿ ಕೊಟ್ಟು ಮೂರ್‍ನಾಲು ತಿಂಗಳಾದ್ರೂ ಕ್ರಮ ಕೈಗೊಂಡಿಲ್ಲ. ಸದಸ್ಯರಿಗೆ ನಗರಸಭೆಯಲ್ಲಿ ಗೌರವವಿಲ್ಲ ಎಂದರೆ ಜನಸಾಮಾನ್ಯರ ಗತಿ ಹೇಗೇ ಎಂದು ಸದಸ್ಯ ಯೂನಸ್‌ ಚೌಗಲಾ ಶಾಸಕ ಸಿದ್ದು ಸವದಿ ಅವರನ್ನು ಪ್ರಶ್ನಿಸಿದರು.

ಶಾಸಕ ಸಿದ್ದು ಸವದಿ ಮಾತನಾಡಿ, ನಗರಸಭೆ ಆಸ್ತಿಯನ್ನು ಯಾರೇ ಅತಿಕ್ರಮಣ ಮಾಡಿದರೂ ಬಿಡಬೇಡಿ. ಅಂತವರ ವಿರುದ್ಧ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳಿ ಎಂದು ಅಧಿ ಕಾರಿಗಳಿಗೆ ಸೂಚಿಸಿದರು. ಎಸ್‌ಎಫ್‌ಸಿ ಯೋಜನೆಯಡಿ ಅಭಿವೃದ್ಧಿಗೆ ಪೂರಕವಾಗಿ ಅನುದಾನ ದೊರಕುತ್ತಿಲ್ಲ. ಸರ್ಕಾರಕ್ಕೆ ಒತ್ತಡ ಹೇರಿ ಮೂಲಭೂತ ಸೌಲಭ್ಯಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹೆಚ್ಚಳಗೊಳಿಸಲು ಸರ್ಕಾರವನ್ನು ಒತ್ತಾಯಿಸುವಂತೆ ಸವದಿ ಸೂಚಿಸಿದರು.

ನಗರದ ಹೃದಯಭಾಗದಲ್ಲಿರುವ ನಗರಸಭೆ ಕಚೇರಿ ಸುತ್ತ 10 ಎಕರೆ ಪ್ರದೇಶ ಹೊಂದಿರುವ ನಗರಸಭೆ ಆಸ್ತಿಯಲ್ಲಿ ಕೊಳಚೆ ಅಭಿವೃದ್ಧಿ ಕಚೇರಿಗೆ 1.5 ಎಕರೆ ಜಾಗೆ ನೀಡುವಲ್ಲಿ ಸಭೆ ತೀರ್ಮಾನಿಸುತ್ತಿದ್ದಂತೆ ಈಗಾಗಲೇ ಒತ್ತುವರಿ ಮಾಡಿಕೊಂಡಿರುವ 67 ಕುಟುಂಬಗಳಿಗೆ ಹಕ್ಕು ಪತ್ರದ ವ್ಯವಸ್ಥೆ ಕಲ್ಪಿಸಬೇಕೆಂದು ಸದಸ್ಯೆ ರೇಖಾ ರವಿ ಒತ್ತಾಯಿಸಿದರು. 2021 12ನೇ ಸಾಲಿನ ಸಂತೆ ಕರವು 20 ಲಕ್ಷ ರೂ.ಗಳಿಗೆ ಹರಾಜಾಗಿದ್ದು, ರಬಕವಿ-ಬನಹಟ್ಟಿ-ಹೊಸೂರ ಪಟ್ಟಣಗಳ ಪ್ರಮುಖ ಜಾತ್ರೆಗೆ ಇದು ಪರಿಗಣನೆಗಿಲ್ಲಂದು ಸಭೆ ತಿಳಿಸಿತು. ಆಸ್ತಿ ತೆರಿಗೆಯಲ್ಲಿ ಬದಲಾವಣೆ: ಸ್ವಯಂ ಘೋಷಿತ ಆಸ್ತಿ ತೆರಿಗೆಯಲ್ಲಿ ಉಪನೋಂದಣಿ ಇಲಾಖೆಯ 2018-19 ನೇ ಸಾಲಿನಲ್ಲಿ ನಿವೇಶನ ಖರೀದಿಯಲ್ಲಿ ಹೊಸ ದರದ ನಿಯಮದಂತೆ ಸ್ವಯಂ ಘೋಷಿತಆಸ್ತಿ ತೆರಿಗೆಯಲ್ಲಿಯೂ ಸಹಿತ ಈಗಿದ್ದ ತೆರಿಗೆಗೆಶೇ.0.5 ದಿಂದ 1.2 ವಸತಿ ನಿವೇಶನಕ್ಕೆ, ಖಾಲಿ ನಿವೇಶನಕ್ಕೆ ಶೇ.0.1 ರ ಬದಲಾಗಿ ಶೇ.0.2 ಹಾಗುವಾಣಿಜ್ಯ ತೆರಿಗೆಯನ್ನು ಶೇ. 0.7 ರಿಂದ 1.5 ವರೆಗೆ ವಿಸ್ತರಿಸಲಾಯಿತು.

ನಗರಸಭೆ ಉಪಾಧ್ಯಕ್ಷೆ ಬಾಳವ್ವ ಕಾಖಂಡಕಿ, ಪೌರಾಯುಕ್ತ ಶ್ರೀನಿವಾಸ ಜಾಧವ, ವ್ಯವಸ್ಥಾಪಕ ಬಿ. ಎಂ. ಡಾಂಗೆ, ಅಭಿನಂದನ ಸೋನಾರ, ಬಸವರಾಜಶರಣಪ್ಪನವರ, ಎಸ್‌. ಬಿ. ಕಲಬುರ್ಗಿ, ವೈಶಾಲಿ ಹಿಪ್ಪರಗಿ, ರಮೇಶ ಮಳ್ಳಿ, ಬಿ. ಎಸ್‌. ಮಠದ, ಮಹಾಲಿಂಗ ಮುಗಳಖೋಡ ಇದ್ದರು.

ಟಾಪ್ ನ್ಯೂಸ್

1-world

2025 ರ ವರ್ಷ ಫಲ: ದ್ವಾದಶ ರಾಶಿಗಳ ಫ‌ಲಾಫ‌ಲ ಹೇಗಿದೆ ನೋಡಿ

KSRtc-1

New Way: ಸಾರಿಗೆ ನೌಕರರ ಸಮಸ್ಯೆ ಇತ್ಯರ್ಥಕ್ಕೆ “ತ್ರಿವಳಿ ಸೂತ್ರ’

High-Court

Criminal Case: 44 ವರ್ಷದ ಹಿಂದಿನ ಪ್ರಕರಣ ವಿಲೇವಾರಿಗೊಳಿಸಿದ ಹೈಕೋರ್ಟ್‌

Mangaluru: ಹೈನುಗಾರರಿಗೆ ಇಂದಿನಿಂದ ಪ್ರೋತ್ಸಾಹಧನ ಏರಿಕೆ

Mangaluru: ಹೈನುಗಾರರಿಗೆ ಇಂದಿನಿಂದ ಪ್ರೋತ್ಸಾಹಧನ ಏರಿಕೆ

12-udupi

Udupi: ಅಯ್ಯಪ್ಪ ಮಾಲಾಧಾರಿ ಭಕ್ತರಿಂದ ದಾಂಧಲೆ: ದೂರು

Priyank-Kharghe

ರಾಷ್ಟ್ರಮಟ್ಟದಲ್ಲೂ ಪ್ರತಿಭಟಿಸಲಿ, ಬಿಜೆಪಿಯವರೇ ಮೂಗು ಕೊಯ್ಯಿಸಿಕೊಳ್ತಾರೆ: ಪ್ರಿಯಾಂಕ್‌

Will Rohit retire after the Sydney Test?

Rohit Sharma; ಸಿಡ್ನಿ ಟೆಸ್ಟ್‌  ಬಳಿಕ ರೋಹಿತ್‌ ವಿದಾಯ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-rabakavi

Rabakavi: ಬ್ರಹ್ಮಾನಂದ ಉತ್ಸವ; ಗಮನ ಸೆಳೆದ ರೊಟ್ಟಿ ಜಾತ್ರೆ

10

Bagalkot : ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧ ಮಹೇಶ್ ಮರೆಗೊಂಡ ಅಂತ್ಯಸಂಸ್ಕಾರ

ಪತ್ನಿ ಊರಿನತ್ತ ಪ್ರಯಾಣ ಬೆಳೆಸಿದರೆ… ಸಾವಿನ ಮನೆಯ ಕದ ತಟ್ಟಿದ ಯೋಧ ನಾಗಪ್ಪ ಮರೆಗೊಂಡ

ಪತ್ನಿ ಊರಿನತ್ತ ಪ್ರಯಾಣ ಬೆಳೆಸಿದರೆ… ಸಾವಿನ ಮನೆಯ ಕದ ತಟ್ಟಿದ ಯೋಧ ನಾಗಪ್ಪ ಮರೆಗೊಂಡ

4-soldier

Mahalingpur: ಇಂದು ಮೃತ ಯೋಧ ಮಹೇಶ ಅಂತ್ಯಕ್ರಿಯೆ; ಯೋಧನ ಮನೆಗೆ ಸಚಿವ ತಿಮ್ಮಾಪುರ ಭೇಟಿ

Mudhola

Mudhola: ಸಿಲಿಂಡರ್ ಸ್ಫೋಟ: ಹೊತ್ತಿ ಉರಿದ ಮನೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-world

2025 ರ ವರ್ಷ ಫಲ: ದ್ವಾದಶ ರಾಶಿಗಳ ಫ‌ಲಾಫ‌ಲ ಹೇಗಿದೆ ನೋಡಿ

KSRtc-1

New Way: ಸಾರಿಗೆ ನೌಕರರ ಸಮಸ್ಯೆ ಇತ್ಯರ್ಥಕ್ಕೆ “ತ್ರಿವಳಿ ಸೂತ್ರ’

High-Court

Criminal Case: 44 ವರ್ಷದ ಹಿಂದಿನ ಪ್ರಕರಣ ವಿಲೇವಾರಿಗೊಳಿಸಿದ ಹೈಕೋರ್ಟ್‌

Mangaluru: ಹೈನುಗಾರರಿಗೆ ಇಂದಿನಿಂದ ಪ್ರೋತ್ಸಾಹಧನ ಏರಿಕೆ

Mangaluru: ಹೈನುಗಾರರಿಗೆ ಇಂದಿನಿಂದ ಪ್ರೋತ್ಸಾಹಧನ ಏರಿಕೆ

12-udupi

Udupi: ಅಯ್ಯಪ್ಪ ಮಾಲಾಧಾರಿ ಭಕ್ತರಿಂದ ದಾಂಧಲೆ: ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.