Karnataka Polls: ಸುಳ್ಳು ಗ್ಯಾರೆಂಟಿಗಳಿಗೆ ಕಿವಿಗೊಡಬೇಡಿ: ಮುರುಗೇಶ ನಿರಾಣಿ
30 ವರ್ಷಗಳ ದೂರದೃಷ್ಟಿಯೊಂದಿಗೆ ಬೀಳಗಿ ಅಭಿವೃದ್ಧಿ
Team Udayavani, Apr 29, 2023, 12:20 PM IST
ಬಾಗಲಕೋಟೆ: ಸಾಮಾಜಿಕ ಬದ್ಧತೆ ಹಾಗೂ ಜನಪರ ಕಳಕಳಿಯಿಂದ 5 ವರ್ಷ ಜನಸೇವೆ ಮಾಡಿದ್ದೇನೆ. ಪ್ರಚಾರ ವೇಳೆಯಲ್ಲಿ ಮತದಾರರ ಸ್ಪಂದನೆ ದೊರೆಯುತ್ತಿದೆ ಎಂದು ಮುರುಗೇಶ ನಿರಾಣಿ ಹೇಳಿದರು.
ಬೀಳಗಿ ಕ್ಷೇತ್ರದ ವಿವಿಧೆಡೆ ಬಿರುಸಿನ ಪ್ರಚಾರ ನಡೆಸಿದ ಅವರು, ಮುಂದಿನ 30 ವರ್ಷಗಳ ದೂರದೃಷ್ಟಿ ಇಟ್ಟುಕೊಂಡು ಬೀಳಗಿ ಮತಕ್ಷೇತ್ರದಲ್ಲಿ ಅಭಿವೃದ್ಧಿ ನಡೆಸಲಾಗಿದೆ. ಹೀಗಾಗಿ ವಿದ್ಯುತ್, ನೀರಾವರಿಯಲ್ಲಿ ಬೀಳಗಿ ಮತಕ್ಷೇತ್ರ ಎಲ್ಲ ಕ್ಷೇತ್ರಗಳಿಗಿಂತ ಹೆಚ್ಚು ಮುಂದಿದೆ. ರಾಜ್ಯದಲ್ಲಿಯೇ ಅತೀ ಹೆಚ್ಚು ಏತ ನೀರಾವರಿ ಯೋಜನೆಗಳನ್ನು ಬೀಳಗಿಯಲ್ಲಿ ಅನುಷ್ಠಾನಗೊಳಿಸಿದ್ದೇವೆ ಎಂದು ಹೇಳಿದರು.
ಮತಕ್ಷೇತ್ರದಲ್ಲಿ 250 ಕೋಟಿ ರೂ. ವೆಚ್ಚದಲ್ಲಿ ವಿದ್ಯುತ್ ಜಾಲ ಬಲವರ್ಧನೆಗೊಳಿಸಲಾಗಿದೆ. ಹಾಲಿ ಇರುವ
ವಿದ್ಯತ್ ವಿತರಣಾ ಸ್ಥಾವರಗಳ ವಿಸ್ತರಣೆಯ ಜೊತೆಗೆ 9 ಹೊಸ ವಿದ್ಯುತ್ ವಿತರಣಾ ಕೇಂದ್ರ ನಿರ್ಮಿಸಲು ಪ್ರಸ್ತಾವಣೆ
ಸಲ್ಲಿಸಲಾಗಿದೆ. ಅಭಿವೃದ್ಧಿಯ ಅಜೆಂಡಾ ಇಟ್ಟುಕೊಂಡು ನಾವು ಈ ಬಾರಿಯೂ ಚುನಾವಣೆ ಎದುರಿಸುತ್ತಿದ್ದೇವೆ.
ಬೀಳಗಿ ಸಮಗ್ರ ಅಭಿವೃದ್ಧಿಗೆ ಮತ್ತೂಮ್ಮೆ ಆಶೀರ್ವದಿಸಿ ಎಂದು ಹೇಳಿದರು.
ಬೀಳಗಿ ಕಾಂಗ್ರೆಸ್ ಒಡೆದ ಮನೆಯಾಗಿದೆ. ದೇಶದಲ್ಲಿಯ ಕಾಂಗ್ರೆಸ್ ಸ್ಥಿತಿ ಹಾಗೂ ಬೀಳಗಿ ಕಾಂಗ್ರೆಸ್ ಸ್ಥಿತಿ ಭಿನ್ನವಾಗಿಲ್ಲ. ಜನತೆ ಕಾಂಗ್ರೆಸ್ ಮೇಲೆ ಭರವಸೆ ಕಳೆದುಕೊಂಡು ಬಹಳ ವರ್ಷಗಳಾಗಿವೆ. ಜನರನ್ನು ನಂಬಿಸಲು ಹೊಸ ವೇಷ ಹಾಕಿಕೊಂಡು ಮತ್ತೆ ಜನರ ಬಳಿ ಬಂದಿದ್ದಾರೆ. ಜನತೆ ಜಾಗೃತರಾಗಿರಬೇಕು. ನಮ್ಮ ಹಿರಿಯರು ಹಲವು ವರ್ಷಗಳ ಹಿಂದೆ ಮನೆಯ ಬಾಗಿಲ ಮೇಲೆ ನಾಳೆ ಬಾ ಎಂದು ಬರೆಯುತ್ತಿದ್ದರು. ಈಗಲೂ ಚುನಾವಣಾ ಪ್ರಚಾರ ವೇಳೆ ಸುಳ್ಳು ಗ್ಯಾರೆಂಟಿ ಕಾರ್ಡ್ ಹಿಡಿದು ಕೆಲವರು ಮನೆ ಬಾಗಿಲಿಗೆ ಬರುತ್ತಾರೆ. ಹೀಗಾಗಿ ಕಾಂಗ್ರೆಸ್ಸಿಗರು ಬಂದಾಗ ನಾಳೆ ಬಾ ಎಂದು ಹೇಳಿ ಎಂದರು.
ಪ್ರಮುಖರಾದ ರಾಣಾ ರಣದೀಪಸಿಂಗ್, ಮಲ್ಲಿಕಾರ್ಜುನ ಅಂಗಡಿ, ಶ್ರೀಧರ ಕಲ್ಲೂರ, ದೇವರಾಜ ನಾಯ್ಕ, ಪುಂಡಲೀಕ ಲಗೇರಿ, ಮಿಥುನ ನಾಯ್ಕ, ರುದ್ರನಗೌಡ ಜಕರಡ್ಡಿ ಮುಂತಾದವರು ಉಪಸ್ಥಿತರಿದ್ದರು.
ಬೀಳಗಿ ಕಾಂಗ್ರೆಸ್ ಒಡೆದ ಮನೆಯಾಗಿದೆ. ಕಾಂಗ್ರೆಸ್ ಮೇಲಿನ ಭರವಸೆ ಕಳೆದುಕೊಂಡು ಬಹಳ ದಿನವಾಗಿವೆ.
ಈಗ ಜನರನ್ನು ನಂಬಿಸಲು ಹೊಸ ವೇಷ ಹಾಕಿಕೊಂಡು ಬರುತ್ತಿದ್ದಾರೆ. ಜನ ಜಾಗೃತರಾಗಿರಬೇಕು.
-ಮುರುಗೇಶ ನಿರಾಣಿ, ಬೀಳಗಿ ಬಿಜೆಪಿ ಅಭ್ಯರ್ಥಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.