ಸಂಕಷ್ಟದಲ್ಲಿ ಕೂಲಿಕಾರರ ಕೈ ಹಿಡಿದ ಖಾತ್ರಿ!


Team Udayavani, Apr 22, 2020, 3:24 PM IST

ಸಂಕಷ್ಟದಲ್ಲಿ  ಕೂಲಿಕಾರರ ಕೈ ಹಿಡಿದ ಖಾತ್ರಿ!

ಬಾಗಲಕೋಟೆ: ಚೆಕ್‌ಡ್ಯಾಂ ನಿರ್ಮಾಣ ಕಾಮಗಾರಿಯಲ್ಲಿ ಕೂಲಿಕಾರರೊಂದಿಗೆ ಕೆಲಹೊತ್ತು ಕೆಲಸ ಮಾಡಿದ ಸಿಇಒ ಗಂಗೂಬಾಯಿ

ಬಾಗಲಕೋಟೆ: ಕೋವಿಡ್ 19 ವೈರಸ್‌ ನಿಯಂತ್ರಣಕ್ಕಾಗಿ ಎಲ್ಲೆಡೆ ಲಾಕ್‌ಡೌನ್‌ ಮುಂದುವರಿದಿದ್ದು, ನಿತ್ಯ ದುಡಿದು ಜೀವನ ನಡೆಸುವವರ ಬದುಕು ಕಷ್ಟಕರವಾಗಿದೆ. ಆದರೆ, ಗ್ರಾಮೀಣ ಭಾಗದ ಕೂಲಿ ಕಾರ್ಮಿಕರಿಗೆ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಸಂಕಷ್ಟದ ಕಾಲದಲ್ಲೂ ಕೈಹಿಡಿದಿದೆ.

ಹೌದು, ಜಿಲ್ಲೆಯಲ್ಲಿ ಒಟ್ಟು 198 ಗ್ರಾ.ಪಂ.ಗಳಿದ್ದು, 602 ಕಂದಾಯ (15 ನಗರ ಸ್ಥಳೀಯ ಸಂಸ್ಥೆಗಳು ಹೊರತುಪಡಿಸಿ) ಗ್ರಾಮಗಳಿವೆ. ಅಲ್ಲದೇ 1007 ಜನವಸತಿಗಳಿವೆ. ಅಷ್ಟೂ ಗ್ರಾಮಗಳ ಕೂಲಿ ಕಾರ್ಮಿಕರ ಕೈಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಜಿಪಂನಿಂದ ಹಲವು ಜಾಗೃತಿ, ಕೋವಿಡ್ 19 ವಿಷಯದಲ್ಲಿ ಮುಂಜಾಗ್ರತೆ ಕೈಗೊಂಡಿದ್ದು, ದುಡಿಯುವ ಕೈಗೆ ಉದ್ಯೋಗ ಖಾತ್ರಿ ಸದ್ಯಕ್ಕೆ ಆಸರೆಯಾಗಿದೆ.

875 ಕಾಮಗಾರಿ: ಜಿಲ್ಲೆಯ ಆರು ತಾಲೂಕು (ಹೊಸ ತಾಲೂಕು ಸಹಿತ) 198 ಗ್ರಾಪಂ ವ್ಯಾಪ್ತಿಯಲ್ಲೂ ಉದ್ಯೋಗ ಖಾತ್ರಿ ಪರಿಣಾಮಕಾರಿ ಅನುಷ್ಠಾನಕ್ಕೆ ಸರ್ಕಾರ ನಿರ್ದೇಶನ ನೀಡಿದ್ದು, ಜಿಲ್ಲೆಯಲ್ಲಿ ಅದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಜಿಲ್ಲೆಯಲ್ಲಿಯೇ ಇರುವ ಕಾರ್ಮಿಕರು, ಬೇರೆಡೆ ವಲಸೆ ಹೋಗಿದ್ದ ಕಾರ್ಮಿಕರೂ ಸದ್ಯ ಜಿಲ್ಲೆಗೆ ಬಂದಿದ್ದಾರೆ. ಬೇರೆಡೆ ಹೋಗಿದ್ದ ಸುಮಾರು 21 ಸಾವಿರ ವಲಸಿಗರು ಮರಳಿ ಜಿಲ್ಲೆಗೆ ಬಂದಿದ್ದು, ಅವರನ್ನು ಕಡ್ಡಾಯವಾಗಿ 14 ದಿನಗಳ ಕಾಲ ಹೋಂ ಕ್ವಾರಂಟೈನ್ನಲ್ಲಿ ಇಡಲಾಗಿದೆ. ಆಯಾ ಗ್ರಾಮವಾರು ಕಾರ್ಮಿಕರಿಗೆ ಉದ್ಯೋಗ ನೀಡಲು ಏ. 1ರಿಂದ ಈವರೆಗೆ ಒಟ್ಟು 875 ವಿವಿಧ ಕಾಮಗಾರಿ ಕೈಗೆತ್ತಿಕೊಂಡಿದ್ದು, ನಿತ್ಯವೂ ಕಾರ್ಮಿಕರು ಕೆಲಸದಲ್ಲಿ ನಿರತರಾಗಿದ್ದಾರೆ.

6 ಸಾವಿರ ಕೂಲಿಕಾರರು: ಜಿಲ್ಲೆಯಲ್ಲಿ ಸದ್ಯ 6518 ಜನ ಕೂಲಿ ಕಾರ್ಮಿಕರು ನಿತ್ಯ ಕೆಲಸದಲ್ಲಿ ತೊಡಗಿದ್ದಾರೆ. ಅವರಿಗೆ ಪ್ರತಿ ವಾರಕ್ಕೊಮ್ಮೆ ಅವರ ಬ್ಯಾಂಕ್‌ ಖಾತೆಗೆ ಕೂಲಿ ಹಣ ಪಾವತಿ ಮಾಡುವ ಕಾರ್ಯವೂ ನಡೆಯುತ್ತಿದ್ದು, ಕೆಲವು ಅನಿವಾರ್ಯ ಸಂದರ್ಭದಲ್ಲಿ ಮಾತ್ರ 2-3ದಿನ ವಿಳಂಬವಾಗುತ್ತಿದೆ. ಆದರೆ, ಲಾಕ್‌ಡೌನ್‌ದಿಂದ ಎಲ್ಲಿಯೂ ಕೆಲಸವಿಲ್ಲದೇ, ಮುಂದಿನ ಜೀವನ ಹೇಗೆ ಎಂಬ ಸಂದಿಗ್ಧ ಪರಿಸ್ಥಿತಿಯಲ್ಲಿ ಕೂಲಿ ಸಿಕ್ಕಿರುವುದು ಕೂಲಿಕಾರರ ಬದುಕಿಗೆ ಆಸರೆಯಾಗಿದೆ. ಇಂದಲ್ಲ ನಾಳೆ ವೇತನ ಬರುತ್ತದೆ. ಸದ್ಯ ಸಾವಿರಾರು ಜನರು ಕೆಲಸವಿಲ್ಲದೇ ಮನೆಯಲ್ಲೇ ಇದ್ದಾರೆ. ನಮಗೆ ದುಡಿಯಲು ಕೆಲಸ ಸಿಕ್ಕ ನೆಮ್ಮದಿ ಇದೆ ಎಂದು ಬಾದಾಮಿ ತಾಲೂಕಿನ ಯಂಕಂಚಿ-ಮಣಿನಾಗರ ಗ್ರಾಮದ ಕೂಲಿ ಕಾರ್ಮಿಕ ಮಹಿಳೆ ಸುಶೀಲಾ ಮೇಟಿ ಹೇಳಿದರು.

20 ದಿನದಲ್ಲಿ 31 ಸಾವಿರ ಮಾನವ ದಿನ: ಜಿಲ್ಲೆಯಲ್ಲಿ ಏ.1ರಿಂದ ಈವರೆಗೆ ಒಟ್ಟು 31,972 ಮಾನವ ದಿನಗಳ ಸೃಜನೆ ಮಾಡಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಮಾನವ ದಿನಗಳ ಸೃಜನೆ ಹೆಚ್ಚಾಗಿದೆ. ಅಲ್ಲದೇ ಉದ್ಯೋಗಕೇಳಿ ಬರುವವರ ಸಂಖ್ಯೆಯೂ ಹೆಚ್ಚಾಗಿದೆ ಎಂದು ಗ್ರಾ.ಪಂ. ಪಿಡಿಒಯೊಬ್ಬರು ತಿಳಿಸಿದ್ದಾರೆ. ಪ್ರತಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಸಮುದಾಯ ಕಾಮಗಾರಿಗೆ ಮೊದಲ ಆದ್ಯತೆ ನೀಡಲಾಗಿದೆ. ಜತೆಗೆ ರೈತರು, ತೋಟಗಾರಿಕೆ, ಕೃಷಿ ಇಲಾಖೆಯಡಿ ತಮ್ಮ ಹೊಲದಲ್ಲಿ ವೈಯಕ್ತಿಕ ಕಾಮಗಾರಿ ಕೈಗೊಳ್ಳಲು ಅವಕಾಶವಿದೆ. ಈ ಕುರಿತು ಪ್ರತಿ ಗ್ರಾಪಂ ವ್ಯಾಪ್ತಿಯಲ್ಲೂ ಯಾವ ಕಾಮಗಾರಿ ಕೈಗೊಳ್ಳಲು ಉದ್ಯೋಗ ಖಾತ್ರಿಯಡಿ ಅವಕಾಶವಿದೆ ಎಂಬ ಪ್ರಚಾರವೂ ಮಾಡಿದ್ದು, ಜನರು ಕಾಮಗಾರಿ ಕೈಗೊಳ್ಳಲು ಮುಂದೆ ಬರುತ್ತಿದ್ದಾರೆ ಎಂದು ಜಿಪಂ ಸಿಇಒ ಗಂಗೂಬಾಯಿ ಮಾನಕರ ಉದಯವಾಣಿಗೆ ತಿಳಿಸಿದ್ದಾರೆ.

ಜಿಲ್ಲೆಯ 198 ಗ್ರಾಪಂ. ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುವ 6518 ಜನ ಕೂಲಿ ಕಾರ್ಮಿಕರಿಗೂ ತಲಾ ಎರಡು ಉಚಿತ ಮಾಸ್ಕ್ ನೀಡಲಾಗಿದೆ. ಅಲ್ಲದೇ ಸ್ಯಾನಿಟೈಜರ್‌ ಕೂಡ, ಕಾಮಗಾರಿ ನಡೆದ ಸ್ಥಳದಲ್ಲಿಟ್ಟಿದ್ದು, ಕೆಲಸ ಆರಂಭಕ್ಕೂ ಮುಂಚೆ, ಮನೆಗೆ ಹೋಗುವ ವೇಳೆ, ಸ್ಯಾನಿಟೈಜರ್‌ ನಿಂದ ಕೈ ತೊಳೆದು, ಮನೆಗೆ ಹೋಗುತ್ತಾರೆ. ಅವರ ಆರೋಗ್ಯದ ದೃಷ್ಟಿಯಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಜತೆಗೆ ಎಲ್ಲ ರೀತಿಯ ಮುಂಜಾಗ್ರತೆ ಕೈಗೊಳ್ಳಲಾಗಿದೆ. – ಗಂಗೂಬಾಯಿ ಮಾನಕರ, ಜಿ.ಪಂ. ಸಿಇಒ

 

-ಶ್ರೀಶೈಲ ಕೆ. ಬಿರಾದಾರ

ಟಾಪ್ ನ್ಯೂಸ್

Charmady Ghat: ಬಿದಿರುತಳ ಅರಣ್ಯದಲ್ಲಿ ಕಾಡ್ಗಿಚ್ಚು

Charmady Ghat: ಬಿದಿರುತಳ ಅರಣ್ಯದಲ್ಲಿ ಕಾಡ್ಗಿಚ್ಚು

1-eewq

ತುಬಚಿ- ಬಬಲೇಶ್ವರ ಏತ ನೀರಾವರಿ: 3,048 ಎಕರೆ ಸ್ವಾಧೀನ, ಹಣ ಬಿಡುಗಡೆಗೆ ಎಂ.ಬಿ.ಪಾಟೀಲ ಸೂಚನೆ

1-5555

Vijayapura; ಕಾರ್ಮಿಕರ ಕೂಡಿ ಹಾಕಿ ರಾಕ್ಷಸಿ ಕೃತ್ಯ: ಎಲ್ಲ 5 ಆರೋಪಿಗಳ ಬಂಧನ

Tarikere: ತಂದೆ ಸಾವಿನ ವಿಷಯ ಗೊತ್ತಿಲ್ಲದೆ ಹಸೆಮಣೆ ಏರಿದ ಮಗಳು!

Tarikere: ತಂದೆ ಸಾವಿನ ವಿಷಯ ಗೊತ್ತಿಲ್ಲದೆ ಹಸೆಮಣೆ ಏರಿದ ಮಗಳು!

renukaacharya

BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ

1-jan-26

R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು

1-sp

Farmers; ಕಬ್ಬು ಹಾನಿಗೆ ಪರಿಹಾರ ನಿಧಿ,ತೊಗರಿಗೆ ಪ್ರೋತ್ಸಾಹ ಧನ: ಸಚಿವ ಶಿವಾನಂದ ಪಾಟೀಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-mudhol

Mudhol: ಮಧ್ಯರಾತ್ರಿ‌ ನಡುರಸ್ತೆಯಲ್ಲಿ ಕಬ್ಬು ತುಂಬಿದ ಟ್ರೇಲರ್ ಪಲ್ಟಿ

UT-Khader

Political Gap: ನಾನು ರಾಜಕೀಯದಿಂದ ಸ್ವಿಚ್ಡ್‌ ಆಫ್‌ ಆಗಿದ್ದೇನೆ: ಸ್ಪೀಕರ್‌ ಯು.ಟಿ. ಖಾದರ್‌

Thimmapura

Excise: ಅಬಕಾರಿ ಇಲಾಖೆಯಲ್ಲಿ ವರ್ಗಾವಣೆಗೆ ಇನ್ನು ಕೌನ್ಸೆಲಿಂಗ್‌: ಸಚಿವ ತಿಮ್ಮಾಪುರ

ನಿರ್ವಹಣೆಯೇ ಇಲ್ಲದ ಬಸ್‌ ನಿಲ್ದಾಣ! ರಾತ್ರಿ ವೇಳೆ ಬಸ್‌ಗಳ ಓಡಾಟ ತೀರಾ ಕಡಿಮೆ

ನಿರ್ವಹಣೆಯೇ ಇಲ್ಲದ ಬಸ್‌ ನಿಲ್ದಾಣ! ರಾತ್ರಿ ವೇಳೆ ಬಸ್‌ಗಳ ಓಡಾಟ ತೀರಾ ಕಡಿಮೆ

2-rabakavi

Rabakavi-Banahatti: ಯಲ್ಲಟ್ಟಿ ಬಳಿ ಸಿಎನ್‌ಜಿ ಟ್ಯಾಂಕರ್ ಪಲ್ಟಿ

MUST WATCH

udayavani youtube

|ಹೂವಿನ ತೋಟದಲ್ಲಿ ಅರಳಿದೆ ರಾಮಾಯಣ ಕಥನ

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

ಹೊಸ ಸೇರ್ಪಡೆ

14

Sullia: ಚರಂಡಿಯಲ್ಲಿ ಸಿಲುಕಿದ ಶಾಲಾ ವಾಹನ

byndoor

Shirva: ಕಾರು ಢಿಕ್ಕಿ; ದ್ವಿಚಕ್ರ ಸವಾರನಿಗೆ ಗಾಯ

car-parkala

Kaup: ಉದ್ಯಾವರ; ಮಹಿಳೆಗೆ ಬೈಕ್‌ ಢಿಕ್ಕಿ

2

Udupi: ವೇಶ್ಯಾವಾಟಿಕೆ; ಓರ್ವನ ಬಂಧನ

Charmady Ghat: ಬಿದಿರುತಳ ಅರಣ್ಯದಲ್ಲಿ ಕಾಡ್ಗಿಚ್ಚು

Charmady Ghat: ಬಿದಿರುತಳ ಅರಣ್ಯದಲ್ಲಿ ಕಾಡ್ಗಿಚ್ಚು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.