ಮುಧೋಳ ತಾಲೂಕಿನ ಹಲಗಲಿ ಆಸ್ಪತ್ರೆಗೆ ರಾಷ್ಟ್ರೀಯ ಪ್ರಮಾಣಪತ್ರ
ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಿತ್ಯ ನೂರಾರು ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.
Team Udayavani, Sep 23, 2024, 1:36 PM IST
ಉದಯವಾಣಿ ಸಮಾಚಾರ
ಮುಧೋಳ: ತಾಲೂಕಿನ ಹಲಗಲಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರಾಷ್ಟ್ರಮಟ್ಟದ ಅತ್ಯುತ್ತಮ ಗುಣಮಟ್ಟ ಪ್ರಮಾಣಪತ್ರ ದೊರೆತಿದ್ದು, ತಾಲೂಕು ಹಾಗೂ ಹಲಗಲಿ ಗ್ರಾಮದ ಹಿರಿಮೆ ಹೆಚ್ಚಿಸಿದೆ. ರಾಷ್ಟ್ರಮಟ್ಟದ ಆರೋಗ್ಯ ಅಧಿಕಾರಿಗಳು ಆಸ್ಪತ್ರೆಯಲ್ಲಿನ ಸಮಗ್ರ ಕಾರ್ಯವೈಖರಿ ಮೆಚ್ಚಿ ಪ್ರಮಾಣೀಕರಿಸಿದ್ದಾರೆ.
ತಾಲೂಕಿನಲ್ಲಿ ಎರಡನೇ ಆಸ್ಪತ್ರೆ: ಈ ಹಿಂದೆ ಮುಧೋಳ ತಾಲೂಕಿನ ಮಳಲಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಈ ಪ್ರಶಂಸೆಗೆ ಪಾತ್ರವಾಗಿತ್ತು. ಅದನ್ನು ಹೊರತುಪಡಿಸಿದರೆ ಹಲಗಲಿ ಗ್ರಾಮದ ಆರೋಗ್ಯ ಕೇಂದ್ರ ಇದೀಗ ಉನ್ನತ ಮಟ್ಟದ ಸಾಧನೆಗೈದಿದೆ.
ಹೇಗೆ ನಡೆಯುತ್ತೆ ಪ್ರಕ್ರಿಯೆ?: ಒಟ್ಟು 1368 ಅಂಶಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ಪ್ರತಿ ಅಂಶಕ್ಕೂ ಅದರದೇ ಮಾನದಂಡ ಮೇಲೆ ಅಂಕಗಳನ್ನು ನೀಡುತ್ತಾರೆ. ಹೀಗೆ ನೀಡುವ ಒಟ್ಟು ಅಂಕಗಳ ಒಟ್ಟು ಸರಾಸರಿ 70 ದಾಟಿದರೆ ಅಂತಹ ಆಸ್ಪತ್ರೆಗೆ ಉತ್ತಮ ಗುಣಮಟ್ಟದ ಪ್ರಮಾಣಪತ್ರ ನೀಡಿ ಪ್ರಶಂಸಿಸುತ್ತಾರೆ. ಹೊರರೋಗಿಗಳ ವಿಭಾಗ, ಲ್ಯಾಬೋರೊಟರಿ, ರಾಷ್ಟ್ರೀಯ ಆರೋಗ್ಯ ಸುಧಾರಣೆ ಕಾರ್ಯಾಗಾರಗಳ ಅನುಷ್ಠಾನ, ಆಸ್ಪತ್ರೆ ಆಡಳಿತ ಸೇರಿದಂತೆ ಒಟ್ಟು 6 ವಿಭಾಗದಲ್ಲಿ ಆಸ್ಪತ್ರೆ ಉತ್ತಮ ಹಂತದ ಸುಧಾರಣೆ ಕ್ರಮ ಕೈಗೊಂಡಿದೆ ಎಂಬುದನ್ನು ಪರಿಶೀಲಿಸಿದ ಮೇಲೆ ಆಸ್ಪತ್ರೆ ಪ್ರಮಾಣಪತ್ರ ವಿತರಣೆಯಾಗುತ್ತದೆ.
ರಾಜ್ಯಕ್ಕೆ ಮೂರನೇ ಸ್ಥಾನ: ದೇಶಾದ್ಯಂತ ನೂರಾರು ಆಸ್ಪತ್ರೆಗಳಿಗೆ ಉತ್ತಮ ಗುಣಮಟ್ಟದ ಪ್ರಮಾಣ ಪತ್ರ ವಿತರಿಸಿದ್ದು, ಅವುಗಳಲ್ಲಿ ಹಲಗಲಿ ಪ್ರಾಥಮಿಕ ಆರೋಗ್ಯ ಕೇಂದ್ರ ರಾಜ್ಯದಲ್ಲೇ ಮೂರನೇ ಸ್ಥಾನ ಅಲಂಕರಿಸಿದೆ. ಮೊದಲ ಸ್ಥಾನದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಿದ್ದು ಶೇ.93.6 ಅಂಕ ಪಡೆದಿದೆ. ಅದರ ನಂತರದಲ್ಲಿ ಕೋಲಾರದ ಅನ್ನೇಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಶೇ.91.35 ಅಂಕ ಪಡೆದಿದೆ.ಇವುಗಳ ತರುವಾಯ ಮುಧೋಳ ತಾಲೂಕಿನ ಹಲಗಲಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಶೇ. 91.15 ಪ್ರತಿಶತ ಅಂಕ ಪಡೆದು ಮಹತ್ತರ ಸಾಧನೆ ಮಾಡಿದೆ. ಇನ್ನು ಹಲಗಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಿತ್ಯ ನೂರಾರು ರೋಗಿಗಳು ಚಿಕಿತ್ಸೆ ಪಡೆಯುತ್ತಾರೆ.
ತಾಲೂಕು ಕೇಂದ್ರದಿಂದ 30 ಕಿ.ಮೀ ಅಂತರವಿರುವ ಕಾರಣ ಗ್ರಾಮೀಣ ಪ್ರದೇಶದ ಜನರು ಹೆಚ್ಚಾಗಿ ಇದೇ ಆಸ್ಪತ್ರೆ ಅವಲಂಬಿಸಿದ್ದು, ಆಸ್ಪತ್ರೆ ಸಿಬ್ಬಂದಿ ಸಹ ಕೆಲಸದ ಬದ್ಧತೆ ತೋರಿದ್ದಾರೆ. ಆಂಧ್ರಪ್ರದೇಶದ ವಿಜಯವಾಡ, ಮಹಾರಾಷ್ಟ್ರ ನಾಶಿಕ್‌ನಿಂದ ಆಗಮಿಸಿದ್ದ ಉನ್ನತಮಟ್ಟದ ಆರೋಗ್ಯಾಧಿಕಾರಿಗಳು ಆಸ್ಪತ್ರೆ ಅವಲೋಕನೆಗೆ ಬಂದಿದ್ದರು. ಆಗಸ್ಟ್ 29-30ರಂದು ನಡೆದ ಮಾನದಂಡ ಪರೀಕ್ಷೆಯಲ್ಲಿ
3 ವರ್ಷಗಳ ಕಾಲ ಅನುದಾನ: ರಾಷ್ಟ್ರೀಯ ಉತ್ತಮ ಗುಣಮಟ್ಟ ಹೊಂದಿದ ಆಸ್ಪತ್ರೆಗೆ ಅಭಿವೃದ್ಧಿ ಹಾಗೂ ಇನ್ನಿತರೆ ಕಾರ್ಯ ಕೆಲಸಗಳಿಗೆ ಪ್ರಮಾಣೀಕೃತಗೊಂಡ ವರ್ಷದಿಂದ 3 ವರ್ಷಗಳ ಕಾಲ ವಾರ್ಷಿಕ 300000 ರೂ. ಅನುದಾನ ದೊರೆಯಲಿದೆ. ಆದರೆ ಪ್ರತಿವರ್ಷ ರಾಜ್ಯದ ಹಿರಿಯ ಆರೋಗ್ಯ ಇಲಾಖೆ ಅಧಿಕಾರಿಗಳು ಆಸ್ಪತ್ರೆ ಕಾರ್ಯವೈಖರಿ ಪರಿಶೀಲಿಸಿ ಅನುದಾನ
ಬಿಡುಗಡೆಗೊಳಿಸುವರು.
ಗ್ರಾಮೀಣ ಪ್ರದೇಶದ ಜನರಿಗೆ ಗುಣಮಟ್ಟದ ಚಿಕಿತ್ಸೆ ಒದಗಿಸುತ್ತಿರುವ ಹಲಗಲಿ ಪ್ರಾಥಮಿಕ ಆರೋಗ್ಯ ಕೇಂದ್ರ ರಾಷ್ಟ್ರೀಯ ಗುಣಮಟ್ಟದ ಆಸ್ಪತ್ರೆಯೆಂದು ಪ್ರಮಾಣೀಕೃತಗೊಂಡಿರುವುದಕ್ಕೆ ಹೆಚ್ಚಿನ ಸಂತಸ ಉಂಟಾಗಿದೆ. ಅಲ್ಲಿನ ವೈದ್ಯರು ಇದೇ ರೀತಿ ಉತ್ತಮ ಕಾರ್ಯ ನಿರ್ವಹಿಸಿ ಸಾರ್ವಜನಿಕರಿಗೆ ಹೆಚ್ಚಿನ ಸೇವೆ ಒದಗಿಸಲಿ.
*ಆರ್.ಬಿ. ತಿಮ್ಮಾಪುರ,
ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ
ರಾಷ್ಟ್ರೀಯ ಗುಣಮಟ್ಟದ ಆಸ್ಪತ್ರೆಯೆಂದು ಪ್ರಮಾಣೀಕೃತಗೊಂಡಿರುವುದು ಹೆಚ್ಚಿನ ಸಂತಸ ತಂದಿದೆ. ನಮ್ಮ ಇಲಾಖೆ ಮೇಲಧಿಕಾರಿಗಳ ಮಾರ್ಗದರ್ಶನ ಹಾಗೂ ಗ್ರಾಮಸ್ಥರ ಸಹಕಾರದಿಂದ ಆಸ್ಪತ್ರೆ ಹೆಚ್ಚು ಗುಣಮಟ್ಟದಿಂದ ಕೂಡಿರುವಂತೆ ನೋಡಿಕೊಳ್ಳಲು ಸಾಧ್ಯವಾಯಿತು. ಇದರಿಂದಾಗಿ ನಮಗೆ ಈ ಪ್ರಶಂಸೆ ದೊರೆತಿದೆ.
*ಸಚಿನ ಮಾನೆ, ಪ್ರಾಥಮಿಕ ಆರೋಗ್ಯ
ಕೇಂದ್ರದ ವೈದ್ಯಾಧಿಕಾರಿ
■ ಗೋವಿಂದಪ್ಪ ತಳವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ
ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಸಾವು
ಹೊಸ ಸೇರ್ಪಡೆ
Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು
Border Gavaskar Trophy: ಕಾಂಗರೂ ಚಾಲೆಂಜ್ ಗೆ ಅಣಿಯಾದ ಭಾರತ; ಹೇಗಿದೆ ತಂಡದ ಬಲಾಬಲ
Kollywood: ʼಅಮರನ್ʼ ಚಿತ್ರತಂಡದಿಂದ 1 ಕೋಟಿ ರೂ. ಪರಿಹಾರ ಕೇಳಿದ ವಿದ್ಯಾರ್ಥಿ; ಕಾರಣವೇನು?
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.