ರಸ್ತೆ ದುರಸ್ತಿಗೆ ಸಾಲಲ್ಲ ಹಣ
Team Udayavani, Dec 6, 2019, 11:15 AM IST
ಬಾಗಲಕೋಟೆ: ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಹಿಂಗಾರು ಮತ್ತು ಮುಂಗಾರು ಹಂಗಾಮಿನಲ್ಲಿ ಉಂಟಾದ ಅತಿವೃಷ್ಟಿ ಹಾಗೂ ಪ್ರವಾಹದಿಂದ ಗ್ರಾಮೀಣ ರಸ್ತೆಗಳ ಸ್ಥಿತಿ ಅಯೋಮಯವಾಗಿದೆ. ಒಂದೇ ವರ್ಷದಲ್ಲಿ ಜಿಲ್ಲೆಯ 701 ಕಿ.ಮೀ ರಸ್ತೆ ಸಂಪೂರ್ಣ ಹಾನಿಯಾಗಿದ್ದು, ಸರ್ಕಾರ ನೀಡಿದ ಹಣ, ಗುಂಡಿ ಮುಚ್ಚಲೂ ಸಾಕಾಗಲ್ಲ ಎಂಬ ಮಾತು ಆಡಳಿತ ಪಕ್ಷದ ಜನಪ್ರತಿನಿಧಿಗಳಿಂದಲೇ ಕೇಳಿಬರುತ್ತಿದೆ.
ಹೌದು, ಆಗಸ್ಟ್‌ನಲ್ಲಿ ಬಂದ ಭಾರಿ ಪ್ರವಾಹ ಹಾಗೂ ಸೆಪ್ಟೆಂಬರ್‌ನಲ್ಲಿ ಉಂಟಾದ ಮಳೆಯಿಂದ ಜಿಲ್ಲೆಯ ಆರು ತಾಲೂಕು ವ್ಯಾಪ್ತಿ (ಹೊಸ ತಾಲೂಕು ಸಹಿತ)ಯ 317 ರಸ್ತೆಗಳು ಹಾಳಾಗಿವೆ.
ಅತಿವೃಷ್ಟಿ ಹಾಗೂ ಮಳೆಯಿಂದ ಯಾನಿಯಾದ ಜಿಪಂ ವ್ಯಾಪ್ತಿಯ ಗ್ರಾಮೀಣ ರಸ್ತೆಗಳ ಸಮೀಕ್ಷೆ ಮಾಡಿದ್ದು, ಒಟ್ಟು 701.58 ಕಿ.ಮೀ ರಸ್ತೆ ಹಾನಿಯಾಗಿದ್ದು, ಇದಕ್ಕಾಗಿ 3099.82 (30.99 ಕೋಟಿ) ಅನುದಾನದ ಅಗತ್ಯವಿದೆ ಎಂದು ಜಿಪಂ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಆದರೆ, ಎನ್‌ಡಿಆರ್‌ಎಫ್ ನಿಯಮಗಳ ಪ್ರಕಾರ, ಕೇವಲ 3.57 ಕೋಟಿ ಅನುದಾನ ಜಿಲ್ಲೆಗೆ ಬಂದಿದೆ.
ವಾರಗಳ ಕಾಲ ನೀರಲ್ಲೇ ನಿಂತಿದ್ದವು: ಭೀಕರ ಪ್ರವಾಹ ಈ ಬಾರಿ ಜಿಲ್ಲೆಯಲ್ಲಿ ಉಂಟಾಗಿತ್ತು. 198 ಗ್ರಾಮಗಳು ಅಕ್ಷರಶಃ ನೀರಿನಲ್ಲಿದ್ದರೆ, 224 ಗ್ರಾಮಗಳ ರೈತರು ಬೆಳೆದ ಬೆಳೆ, ಸಂಪೂರ್ಣ ಹಾನಿಯಾಗಿತ್ತು. ಜಮಖಂಡಿ, ಮುಧೋಳ, ಹುನಗುಂದ ಹಾಗೂ ಬಾದಾಮಿ ತಾಲೂಕಿನ ಹಲವು ಮನೆ, ರಸ್ತೆಗಳು ವಾರಗಟ್ಟಲೇ ನೀರಿನಲ್ಲೇ ನಿಂತಿದ್ದವು. ನೀರು ಇಳಿದ ಮೇಲೆ ರಸ್ತೆಗಳು ಸಂಪೂರ್ಣ ನೆನೆದು ಡಾಂಬರ್ ಕಿತ್ತು ಹೋಗಿದೆ.
19 ಸೇತುವೆ–ಸಿಡಿ ಹಾನಿ: ಈ ವರ್ಷ ಜಿಲ್ಲೆಯಲ್ಲಿ 19 ಸಿಡಿ, ಸೇತುವೆ ಹಾನಿಯಾಗಿವೆ. ಬಾದಾಮಿ-4, ಹುನಗುಂದ-1, ಜಮಖಂಡಿ-7 ಹಾಗೂ ಮುಧೋಳ ತಾಲೂಕಿನಲ್ಲಿ 7 ಸಿ.ಡಿ/ ಸೇತುವೆ ಹಾನಿಯಾಗಿದ್ದು, ಇವುಗಳ ಪುನರ್ ನಿರ್ಮಾಣಕ್ಕೆ 65.05 ಲಕ್ಷ ಅನುದಾನದ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ, ಕೇವಲ 11.40 ಲಕ್ಷ ಅನುದಾನ ನೀಡಿದ್ದು, ಇದರಿಂದ ತಾತ್ಕಾಲಿಕ ದುರಸ್ತಿ ಮಾಡುವುದೂ ಕಷ್ಟವಾಗಿದೆ ಎನ್ನಲಾಗಿದೆ.
ಜಿಲ್ಲೆಯಲ್ಲಿ ಅತಿವೃಷ್ಟಿ ಮತ್ತು ಪ್ರವಾಹದಿಂದ ಹಾನಿಯಾದ ಗ್ರಾಮೀಣ ರಸ್ತೆ, ಸಿಡಿ/ಸೇತುವೆ ನಿರ್ಮಾಣಕ್ಕೆ ಒಟ್ಟು 30.64 ಕೋಟಿ ಪ್ರಸ್ತಾವನೆ ಬಂದಿತ್ತು ಎನ್‌ಡಿಆರ್‌ಎಫ್ ನಿಯಾಮಾವಳಿ ಪ್ರಕಾರ, ತಾತ್ಕಾಲಿಕ ದುರಸ್ತಿಗಾಗಿ ಗ್ರಾಮೀಣ ರಸ್ತೆಗಾಗಿ 3.57 ಕೋಟಿ ಹಾಗೂ ಸಿಡಿ/ ಸೇತುವೆಗಳಿಗಾಗಿ 11.40 ಲಕ್ಷ ರೂ. ಅನುದಾನ ನೀಡಲಾಗಿದೆ. –ಮಹಾದೇವ ಮುರಗಿ, ಅಪರ ಜಿಲ್ಲಾಧಿಕಾರಿ
–ಶ್ರೀಶೈಲ ಕೆ. ಬಿರಾದಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bagalkot : ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧ ಮಹೇಶ್ ಮರೆಗೊಂಡ ಅಂತ್ಯಸಂಸ್ಕಾರ
ಪತ್ನಿ ಊರಿನತ್ತ ಪ್ರಯಾಣ ಬೆಳೆಸಿದರೆ… ಸಾವಿನ ಮನೆಯ ಕದ ತಟ್ಟಿದ ಯೋಧ ನಾಗಪ್ಪ ಮರೆಗೊಂಡ
Mahalingpur: ಇಂದು ಮೃತ ಯೋಧ ಮಹೇಶ ಅಂತ್ಯಕ್ರಿಯೆ; ಯೋಧನ ಮನೆಗೆ ಸಚಿವ ತಿಮ್ಮಾಪುರ ಭೇಟಿ
Mudhola: ಸಿಲಿಂಡರ್ ಸ್ಫೋಟ: ಹೊತ್ತಿ ಉರಿದ ಮನೆ
Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.