ಈಜಿಪ್ಟ್ ನ ಮರುಭೂಮಿಯಲ್ಲಿ ಬೇವಿನ ಗಿಡ ನೆಟ್ಟ ಕನ್ನಡಿಗ
Team Udayavani, Dec 11, 2021, 12:44 PM IST
ಮುದ್ದೇಬಿಹಾಳ: ಕನ್ನಡಿಗ ಪರಿಸರ ವಿಜ್ಞಾನಿಯೊಬ್ಬರು ಈಜಿಪ್ಟ್ ದೇಶದ ಕೈರೋ ಭಾಗದ ಮರುಭೂಮಿಯಲ್ಲಿ ಬೇವಿನ ಗಿಡ ನೆಟ್ಟು ಅಲ್ಲಿನ ಕನ್ನಡಿಗರಿಗೂ, ಈಜಿಪ್ತಿಯನ್ನರಿಗೂ ಗಿಡ ನೆಡುವ ಮಹತ್ವ ತೋರಿಸಿಕೊಟ್ಟಿದ್ದಾರೆ.
ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕು ಢವಳಗಿ ಗ್ರಾಮದವರಾಗಿರುವ ಡಾ. ಚಂದ್ರಶೇಖರ ಬಿರಾದರ ಪರಿಸರ ಮತ್ತು ಕೃಷಿ ವಿಜ್ಞಾನಿಯಾಗಿದ್ದು ಹಲವು ದೇಶಗಳಿಗೆ ಪರಿಸರ ಮತ್ತು ಕೃಷಿ ವಿಜ್ಞಾನ ಸಲಹೆಗಾರ, ಸಂಶೋಧಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸದ್ಯ ಈಜಿಪ್ಟ್ ನ ಕೈರೋದಲ್ಲಿ ತಾತ್ಕಾಲಿಕವಾಗಿ ನೆಲೆಸಿರುವ ಅವರಿಗೆ ಭಾರತದಲ್ಲಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದ್ದು ರಾಷ್ಟ್ರದ ರಾಜಧಾನಿ ನವದೆಹಲಿಯನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿ ಆಯ್ಕೆ ಮಾಡಿಕೊಂಡಿದ್ದು 2022 ಜನವರಿಯಿಂದ ತಮ್ಮ ಚಟುವಟಿಕೆ ಪ್ರಾರಂಭಿಸಲಿದ್ದಾರೆ.
ಕೃಷಿ ಪರಿಸರ ವಿಜ್ಞಾನಿಯಾಗಿರುವ ಡಾ. ಚಂದ್ರಶೇಖರ ಅವರಿಗೆ ಈ ವರ್ಷದ ಅಂತ್ಯದಲ್ಲಿ ಮೂರು ದೇಶಗಳ ಪೈಕಿ ಒಂದರಲ್ಲಿ ಸಂಶೋಧನೆ, ಅದ್ಯಯನ ನಡೆಸಲು ಆಹ್ವಾನ ನೀಡಲಾಗಿತ್ತು. ಅಮೇರಿಕದ ವಾಷಿಂಗ್ಟನ್ ಡಿಸಿ, ಇಟಲಿಯ ರೋಮ್ ಮತ್ತು ಭಾರತದ ನವದೆಹಲಿ ಕೇಂದ್ರಸ್ಥಾನವಾಗಿ ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಲಾಗಿತ್ತು. ಭಾರತದ ಮೇಲಿನ ಪ್ರೀತಿ ದೇಶಾಭಿಮಾನದ ಕಾರಣಕ್ಕಾಗಿ ಡಾ.ಚಂದ್ರಶೇಖರ ಅವರು ಭಾರತದ ರಾಜಧಾನಿ ನವದೆಹಲಿಯನ್ನು ತಮ್ಮ ಮುಂದಿನ ಕಾರ್ಯಕ್ಷೇತ್ರವನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಅರಣ್ಯದ ಹೊರಗಿನ ಪ್ರದೇಶದಗಳಲ್ಲಿ ಗಿಡಗಳನ್ನು ನೆಡುವುದು ಅವರ ಸಂಶೋಧನೆಯ ವಸ್ತುವಾಗಿದೆ. ಭವಿಷ್ಯದ ಉತ್ತಮ ಜೀವನಕ್ಕೆ ಮತ್ತು ಭೂಮಿಯ ಆರೋಗ್ಯಕ್ಕೆ ಅತಿ ಅವಶ್ಯವಾಗಿರುವ ಕೃಷಿ ಪರಿಸರ ಸಂಶೋಧನೆಗೆ ಮುಂದಿನ ದಿನಗಳಲ್ಲಿ ಮಹತ್ವ ದೊರಕಿಸುವುದು ಈ ಯೋಜನೆಯ ಉದ್ದೇಶವಾಗಿದೆ.
ಅವರು ಈಜಿಪ್ಟ್ ನಿಂದ ಭಾರತಕ್ಕೆ ಬರುವುದಕ್ಕೂ ಮುನ್ನ ಅಲ್ಲಿನ ಕನ್ನಡಿಗ ಸ್ನೇಹಿತರು ಮತ್ತು ವಿಜ್ಞಾನಿಗಳು ಅಲ್ಲಿನ ಮರುಭೂಮಿಯೊಂದರಲ್ಲಿ ಅತ್ಯದ್ಬುತ, ಸದಾ ಸ್ಮರಣೀಯ ಬೀಳ್ಕೊಡುಗೆ ಸಮಾರಂಭವನ್ನು ಶನಿವಾರ ಏರ್ಪಡಿಸಿದ್ದರು.
ಆ ಸಮಾರಂಭದಲ್ಲಿಯೂ ತಮ್ಮ ಪರಿಸರ ಕಾಳಜಿ ತೋರಿದ ಡಾ.ಚಂದ್ರಶೇಖರ ಅವರು ಬೇವಿನ ಗಿಡಗಳನ್ನು ಮರುಭೂಮಿಯ ಓಯಸಿಸ್ ಪ್ರದೇಶಗಳಲ್ಲಿ ನೆಟ್ಟು, ಇತರರಿಗೂ ನೆಡಲು ಪ್ರೋತ್ಸಾಹಿಸಿ ಬೇವಿನ ಸಸಿಗಳನ್ನು ಎಲ್ಲರಿಗೂ ಹಂಚಿದರು.
ಈಜಿಪ್ತನ ಮಳೆಕಾಡು ಪ್ರದೇಶದ ಅವಶೇಷಗಳು, ಪಳೆಯುಳಿಕೆಗಳನ್ನು ಒಳಗೊಂಡಿರುವ ಶಿಲಾಮಯ ಅರಣ್ಯ ಪಾರ್ಕ್ (petrified forest park of Egypt- the fossils remnants of the ancient rain forests) ನಲ್ಲಿ ನಡೆದ ಗಮನಸೆ ಳೆಯುವ ಕಾರ್ಯಕ್ರಮದಲ್ಲಿ ಬೇವಿನ ಮರದ ಮಹತ್ವ ಸಾರಿದ್ದು ವಿಶೇಷವಾಗಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.