ಗಾಂಧಿ ಗ್ರಾಮ ಪುರಸ್ಕಾರ ಪಡೆದ ಕೋಟೆಕಲ್ಲನಲ್ಲಿ ಸ್ವಚ್ಛತೆ ಮರೀಚಿಕೆ
Team Udayavani, Oct 2, 2019, 10:52 AM IST
ಗುಳೇದಗುಡ್ಡ: ಕೋಟೆಕಲ್‌ಗೆ ಗ್ರಾಪಂಗೆ ಮೂರು ಬಾರಿ “ಗಾಂಧಿ ಗ್ರಾಮ ಪುರಸ್ಕಾರ’ ಲಭಿಸಿದ್ದರೂ ಸ್ವಚ್ಛತೆ ಮರೀಚಿಕೆಯಾಗಿದೆ. ಊರಿನ ಕೆಲವು ಕಡೆ ಗಟಾರು ಕೊಳಚೆ ತುಂಬಿ ನಿತ್ಯವೂ ಗಬ್ಬು ವಾಸನೆ ಹರಡುತ್ತಿದೆ. ಸೊಳ್ಳೆಗಳ ಉತ್ಪತಿ ತಾಣವಾಗಿದೆ ಆದರೂ ಇತ್ತ ಗಮನ ಹರಿಸುವವರೇ ಇಲ್ಲದಾಗಿದೆ.
ಗ್ರಾಮದ ಲಕ್ಷ್ಮೀನಗರದಲ್ಲಿ ಮಲೀನ ನೀರು ಹರಿದು ಹೋಗಲು ನರೇಗಾ ಯೋಜನೆಯಲ್ಲಿ ಅಂದಾಜು 4ಲಕ್ಷ ವೆಚ್ಚದಲ್ಲಿ ಗಟಾರು ನಿರ್ಮಿಸಲಾಗಿದೆ ಆದರೆ ಕೆಲಸ ಮಾತ್ರ ಪೂರ್ಣಗೊಂಡಿಲ್ಲ. ಹೀಗಾಗಿ ಗಟಾರಿನಲ್ಲಿ ಸಂಗ್ರಹಗೊಳ್ಳುವ ಕೊಳಚೆ ನೀರು ನಿಂತು ಹಲವು ತಿಂಗಳುಗಳೇ ಕಳೆದರೂ ಕೇಳುವವರೇ ಇಲ್ಲವಾಗಿದೆ. ಓಣಿಯಲ್ಲಿ ಹರಿಯುವ ನೀರು ಅಲ್ಲಿಯೇ ನಿಂತು ಮಲೀನಗೊಂಡು ಗಬ್ಬು ವಾಸನೆ ಬೀರುತ್ತಿದೆ. ಇದರಿಂದ ಅಲ್ಲಿನ ನಿವಾಸಿಗಳಿಗೆ ನಿತ್ಯವೂ
ಕಿರಿಕಿರಿಯಾಗಿದೆ. ಪೂರ್ಣಗೊಂಡಿಲ್ಲ ಕಾಮಗಾರಿ: ಸದ್ಯ ಪೊಲೀಸ್ ಠಾಣೆಯಿಂದ ಅಂಕಿತಾ ಚಿತ್ರಮಂದಿರದವರೆಗೆ ಮಾತ್ರ ಗಟಾರು ನಿರ್ಮಿಸಲಾಗಿದೆ. ಮುಂದೆ ಆ ಕಾಮಗಾರಿಯನ್ನು ಅಲ್ಲಿಯೇ ನಿಲ್ಲಿಸಲಾಗಿದೆ. ಮುಂದೆ ಹಳ್ಳದವರೆಗೂ ಗಟಾರು ನಿರ್ಮಿಸಬೇಕಿದೆ. ಹೀಗಾಗಿ ಲಕ್ಷ್ಮೀನಗರದಿಂದ ಹರಿದು ಬರುವ ನೀರು ಮುಂದೆ ಸಾಗಲು ಆಗದೇ ರಸ್ತೆಗೆ ಬರುತ್ತಿದೆ. ಆ ಕೊಳಚೆ ನೀರಿನಲ್ಲೇ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಸಾವಿರಾರು ಜನ ಸಂಚರಿಸುತ್ತಾರೆ. ಕೊಳಚೆ ನೀರು ಸಂಗ್ರಹಗೊಂಡು ರಸ್ತೆಯ ತುಂಬೆಲ್ಲ ನಿಲ್ಲುವುದರಿಂದ ಎಲ್ಲೆಂದರಲ್ಲಿ ಗುಂಡಿಗಳು ಬಿದ್ದಿವೆ.
ಸಾಂಕ್ರಾಮಿಕ ರೋಗ ಉತ್ಪತ್ತಿ ತಾಣ: ಗಟಾರಿನಲ್ಲಿ ಮಲೀನ ನೀರು ನಿಂತಿದ್ದರೂ ಸ್ಥಳೀಯ ಗ್ರಾಮ ಪಂಚಾಯತ್‌ನವರು ಅದನ್ನು ಸ್ವತ್ಛ ಮಾಡುವ ಗೋಜಿಗೆ ಹೋಗಿಲ್ಲ. ಇದರಿಂದ ಮಲೀನ ನೀರು ನಿಂತು ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗಿದೆ. ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ.
4 ಲಕ್ಷ ರೂ.ಗಳ ಯೋಜನೆ: ಸದ್ಯ ಬಾಕಿ ಉಳಿದಿರುವ ಕಾಮಗಾರಿಗೆ 4 ಲಕ್ಷ ವೆಚ್ಚದಲ್ಲಿ ಕ್ರಿಯಾಯೋಜನೆ ರೂಪಿಸಲಾಗಿದ್ದು, ಇದರಲ್ಲಿ ರಸ್ತೆ ಕ್ರಾಸ್ ಮಾಡಿ, ಹಳ್ಳದವರೆಗೆ ಗಟಾರು ನಿರ್ಮಿಸುವ ಕೆಲಸ ಹಾಕಿಕೊಳ್ಳಲಾಗಿದೆ ಎಂದು ಗ್ರಾಮ ಪಂಚಾಯತ್ ಅಧಿಕಾರಿಗಳು ಹೇಳುತ್ತಾರೆ
ಮುಖ್ಯರಸ್ತೆಯೇ ಹೀಗಾದರೆ? : ಕೋಟೆಕಲ್ ಗ್ರಾಮದ ಈ ರಸ್ತೆ ಐತಿಹಾಸಿಕ ಬಾದಾಮಿ-ಬನಶಂಕರಿಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯಾಗಿದೆ. ಈ ಮಾರ್ಗದಲ್ಲಿ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ರಸ್ತೆಯಲ್ಲಿ ನೀರು ನಿಂತು ಎಲ್ಲೆಂದರಲ್ಲಿ ಗುಂಡಿಗಳು ಬಿದ್ದಿವೆ. ಎಷ್ಟೋ ಜನರು ಬೈಕ್‌ಗಳ ಮೇಲಿಂದ ಉದಾಹರಣೆಗಳೂ ಇವೆ.ಈ ರಸ್ತೆ ಹದಗೆಟ್ಟು ಹಲವು ವರ್ಷಗಳೇ ಕಳೆದರೂ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ಕೋಟೆಕಲ್ ಗ್ರಾಮ ಪಂಚಾಯತ್‌ಗೆ ನಾಗರಿಕರು ಅನೇಕ ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಜನರು ಈ ರಸ್ತೆ ಇಂದು ಸುಧಾರಿಸುತ್ತದೆ, ನಾಳೆ ಸುಧಾರಿಸುತ್ತದೆ ಎಂದು ಕಾಯ್ದು ಕುಳಿತಿದ್ದಾರೆ.
ಗ್ರಾಮದ ಲಕ್ಷ್ಮೀನಗರದಲ್ಲಿ ಗಟಾರು ನಿರ್ಮಿಸಿದ್ದರೂ ಉಪಯೋಗವಾಗಿಲ್ಲ. ಗಟಾರು ನೀರು ಮುಂದೆ ಹೋಗದೇ ರಸ್ತೆ ಮೇಲೆ ಹರಿಯುತ್ತಿರುವುದರಿಂದ ರಸ್ತೆ ತುಂಬೆಲ್ಲ ತಗ್ಗುಗಳು ಬಿದ್ದಿವೆ. ರಸ್ತೆ ಹದಗೆಟ್ಟಿದ್ದರೂ ಈ ಬಗ್ಗೆ ಮನವಿ ಮಾಡಿದರೂ ಗ್ರಾಪಂ ಗಮನ ಹರಿಸುತ್ತಿಲ್ಲ. –ಗುಂಡಪ್ಪ ಕೋಟಿ, ಸಮಾಜ ಸೇವಕ, ಕೋಟೆಕಲ್
ಲಕ್ಷ್ಮೀನಗರದಲ್ಲಿ ನೀರು ಹರಿಯುವ ಸಮಸ್ಯೆ ಬಗೆಹರಿಸಲು ಎನ್‌ಆರ್ ಇಜಿಯಲ್ಲಿ ಸದ್ಯ 4ಲಕ್ಷ ರೂ. ವೆಚ್ಚದ ಕ್ರಿಯಾಯೋಜನೆ ತಯಾರಿಸಲಾಗಿದೆ. ಹಳ್ಳದವರೆಗೆ ಗಟಾರು ನಿರ್ಮಿಸುವ ಕೆಲಸ ಹಾಕಿಕೊಳ್ಳಲಾಗಿದೆ. 5-6 ದಿನಗಳಲ್ಲಿ ಕೆಲಸ ಆರಂಭಿಸಲಾಗುವುದು.-ಎಲ್.ಜಿ.ಶಾಂತಗೇರಿ, ಪಿಡಿಒ, ಕೋಟೆಕಲ್ ಗ್ರಾಪಂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ
K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ
Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.