![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Oct 26, 2021, 3:04 PM IST
ಕಲಾದಗಿ: ನಾಲ್ಕು ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಗದ್ದನಕೇರಿ ಕ್ರಾಸ್‌ನಲ್ಲಿ ಸಾರ್ವಜನಿಕ ಬೀದಿದೀಪ, ಹೆದ್ದಾರಿ ಮಧ್ಯದ ವೃತ್ತದ ಹೈಮಾಸ್ಟ್ ದೀಪಕ್ಕೂ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಸಾರ್ವಜನಿಕರು ಕತ್ತಲಲ್ಲಿ ಪರದಾಡುವಂತಾಗಿದೆ.
ಗ್ರಾಮ ಪಂಚಾಯಿತಿನಿಂದ ವಿದ್ಯುತ್ ಬಿಲ್ ಪಾವತಿಯಾಗದೇ ಹಿನ್ನೆಲೆಯಲ್ಲಿ ಶನಿವಾರ ಸಂಜೆಯಿಂದ ಹೆಸ್ಕಾಂ ಅಧಿಕಾರಿಗಳು ವಿದ್ಯುತ್ ಸಂಪರ್ಕಗೊಳಿಸಿದ್ದಾರೆ. ಬೆಳಗಾವಿ-ರಾಯಚೂರು, ಹುಬ್ಬಳ್ಳಿ- ವಿಜಯಪುರ ನಾಲ್ಕು ಜಿಲ್ಲೆಗೆ ಸಂಪರ್ಕ ಹೆದ್ದಾರಿ ರಸ್ತೆ ಗದ್ದನಕೇರಿ ಕ್ರಾಸ್‌ನಲ್ಲಿ ಸಾರ್ವಜನಿಕ ವಿದ್ಯುತ್ ದೀಪಗಳು ಬೆಳಗದೆ ಗ್ರಾಮಗಳಿಗೆ ತೆರಳುವ ಜನರು ಕತ್ತಲಲ್ಲಿ ಪರದಾಡುವಂತಾಗಿದೆ.
ಗದ್ದನಕೇರಿ ಗ್ರಾಪಂ, ಮುರುನಾಳ ಗ್ರಾಪಂ, ಯಡಹಳ್ಳಿ ಗ್ರಾಪಂ ವಿದ್ಯುತ್ ಬಿಲ್ ಪಾವತಿ ಮಾಡದಿರುವುದೇ ಅಲ್ಲಿನ ಗ್ರಾಪಂ ವ್ಯಾಪ್ತಿಯ ಸಾರ್ವಜನಿಕ ಬೀದಿ ದೀಪಗಳಿಗೆ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಗದ್ದನಕೇರಿ ಕ್ರಾಸ್ ಯಡಹಳ್ಳಿ ಗ್ರಾಪಂ ವ್ಯಾಪ್ತಿಗೆ ಬರುತ್ತಿದ್ದು, ಯಡಹಳ್ಳಿ ಗ್ರಾಪಂನಿಂದ 48 ಲಕ್ಷ ರೂಪಾಯಿ ವಿದ್ಯುತ್ ಬಿಲ್ ಬಾಕಿ ಪಾವತಿಯಾಗದಿರುವುದರಿಂದ ಹೆಸ್ಕಾಂ ಕಚೇರಿ ಅಧಿಕಾರಿಗಳು ಮೇಲಧಿಕಾರಿಗಳ ನಿರ್ದೇಶನದಂತೆ ಗದ್ದನಕೇರಿ ಕ್ರಾಸ್‌ನಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ. ಮುರನಾಳ ಗ್ರಾಪಂ 1 ಕೋಟಿ ರೂ., ಗದ್ದನಕೇರಿ ಗ್ರಾಪಂ 62 ಲಕ್ಷ ರೂ ವಿದ್ಯುತ್ ಬಿಲ್ ಪಾವತಿ ಮಾಡಬೇಕಾಗಿದೆ ಎಂದು ಹೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.
ಗ್ರಾಪಂನಲ್ಲಿ ಲಭ್ಯವಿರುವ ಅನುದಾನದಲ್ಲಿ ವಿದ್ಯುತ್ ಬಿಲ್ ಪಾವತಿಸಿಕೊಂಡು ಬರಲಾಗುತ್ತಿದೆ. ಯಡಹಳ್ಳಿ ಗ್ರಾಪಂ ಹೆಸ್ಕಾಂಗೆ ಇನ್ನೂ 49 ಲಕ್ಷ ರೂ. ವಿದ್ಯುತ್ ಬಿಲ್ ಪಾವತಿಸಬೇಕಾಗಿದೆ. ವಿದ್ಯುತ್ ಬಿಲ್ ಬಾಕಿ ಇರುವುದನ್ನು ಅಧಿಕಾರಿಗಳಿಗೆ ತಿಳಿಸಲಾಗಿದೆ. -ಪರಶುರಾಮ ಚೆಲವಾದಿ, ಯಡಹಳ್ಳಿ ಗ್ರಾಪಂ ಪಿಡಿಒ
ಇದನ್ನೂ ಓದಿ: 12 ಸಾವಿರ ಜೆಡಿಎಸ್ ಸದಸ್ಯತ್ವ ನೋಂದಣಿ ಮಾಡಿಸಿ
ಯಡಹಳ್ಳಿ ಗ್ರಾಪಂ 48 ಲಕ್ಷ, ಗದ್ದನಕೇರಿ ಗ್ರಾಪಂ 62 ಲಕ್ಷ, ಮುರನಾಳ ಗ್ರಾಪಂ 1 ಕೋಟಿ ರೂ. ವಿದ್ಯುತ್ ಬಿಲ್ ಬಾಕಿ ಉಳಿಸಿದ್ದಾರೆ. ಹೆಸ್ಕಾಂ ಮೇಲಧಿಕಾರಿಗಳ ನಿರ್ದೇಶನದಂತೆ, ಗದ್ದನಕೇರಿ, ಮುರನಾಳ ಗ್ರಾಮ ಪಂಚಾಯಿತಿ ಸಾರ್ವಜನಿಕ ವಿದ್ಯುತ್ ದೀಪ, ಗದ್ದನಕೇರಿ ಕ್ರಾಸ್‌ನಲ್ಲಿ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗಿದೆ. -ಸಿ.ಬಿ.ಲಮಾಣಿ, ಗದ್ದನಕೇರಿ ಹೆಸ್ಕಾಂ ಅಧಿಕಾರಿ
ಪ್ರಮುಖ ಕ್ರಾಸ್ ರಸ್ತೆ ಗದ್ದನಕೇರಿ ಕ್ರಾಸ್‌ನಲ್ಲಿ ಸಾರ್ವಜನಿಕ ವಿದ್ಯುತ್ ದೀಪಗಳು ಬೆಳಗದೆ ಕತ್ತಲಲ್ಲಿ ಸಾರ್ವಜನಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ದೀಪ ಬೆಳಗಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು. -ಸಂಗಣ್ಣ ನಲವತವಾಡ, ಗದ್ದನಕೇರಿ ನಿವಾಸಿ
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.