ನರಿ ಬುದ್ಧಿ ನಾಯಕರಿಗೆ ತಕ್ಕ ಪಾಠ: ಚರಂತಿಮಠ
Team Udayavani, May 4, 2023, 9:33 AM IST
ಬಾಗಲಕೋಟೆ: ಬಾಗಲಕೋಟೆ ಕ್ಷೇತ್ರದ ಅಭಿವೃದ್ಧಿಗಾಗಿ ಪಣ ತೊಟ್ಟಿರುವ ಸ್ವಾಭಿಮಾನಿ ಕಾರ್ಯಕರ್ತ, ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಚರಂತಿಮಠ ಅವರಿಗೆ ಶಿರೂರ ಪಟ್ಟಣದ ಸ್ವಾಭಿಮಾನಿ ಮತದಾರರು ಪುಷ್ಪವೃಷ್ಟಿಗೈದು ಮೆರವಣಿಗೆ ಮೂಲಕ ಅದ್ದೂರಿಯಾಗಿ ಸ್ವಾಗತಿಸಿ ಆಟೋರಿಕ್ಷಾ ಗುರುತಿಗೆ ಬೆಂಬಲ ಸೂಚಿಸಿದರು.
ಗ್ರಾಮದಲ್ಲಿ ನಂತರ ನಡೆದ ಸಭೆಯಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಚರಂತಿಮಠ, ಹಲವಾರು ರಾಜಕಾರಣಿಗಳನ್ನು ಆರಿಸಿ ತಂದಿದ್ದೀರಿ. ಆದರೆ, ಗೆದ್ದವರು ಕ್ಷೇತ್ರ ಹಾಗೂ ಜನರಿಗಾಗಿ ಸೇವೆ ನೀಡುವುದು ಬಿಟ್ಟು ಸ್ವಾರ್ಥ ರಾಜಕೀಯ ಮಾಡಿದ್ದಾರೆ. ಇದೆಲ್ಲ ಮನಗಂಡ ಮತದಾರರು ಈ ಬಾರಿ ಬದಲಾವಣೆಗೆ ಮುಂದಾಗಿದ್ದು, ಸ್ವಾಭಿಮಾನಿ ಆಟೋರಿಕ್ಷಾ ಗುರುತಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು.
ಆಕಳ ಮುಖ ಹೊತ್ತು ನನ್ನನ್ನು ಗೆಲ್ಲಿಸಿ ಎಂದು ಮನೆ-ಮನೆಗೆ ಬಂದವರು ಇಂದು ಗೆದ್ದ ಬಳಿಕ ನರಿ ಬುದ್ಧಿ ತೋರಿಸಿ ರಾಜಕೀಯ ಮಾಡುತ್ತಿದ್ದಾರೆ. ಜನರು ಕ್ಷೇತ್ರದ ಜನಸೇವೆ ಮಾಡುತ್ತಾನೆ ಎಂದು ಗೆಲ್ಲಿಸಿದರೆ ಜನರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಈ ಬಾರಿ ಜನರು ಎಲ್ಲವನ್ನೂ ತಿಳಿದಿದ್ದು, ನರಿ ಬುದ್ಧಿ ರಾಜಕಾರಣಿಗೆ ತಕ್ಕ ಉತ್ತರ ನೀಡಲಿದ್ದಾರೆ. ಆಟೋರಿಕ್ಷಾ ಗೆದ್ದರೆ ಸ್ವಾಭಿಮಾನಿ ಜನರು ಗೆದ್ದಂತೆ. ಕ್ಷೇತ್ರದ ಅಭಿವೃದ್ಧಿಗೆ ಆಟೋರಿಕ್ಷಾ ಸಿದ್ಧವಾಗಿ ನಿಂತಿದ್ದು, ಜನರು ಆಶೀರ್ವದಿಸುವಂತೆ ಕೋರಿದರು.
ಸ್ವಾಭಿಮಾನಿ ಕಾರ್ಯಕರ್ತರು ಕ್ಷೇತ್ರ ಅಭಿವೃದ್ಧಿಗೆ ಮುಂದಾಗಿದ್ದು, ಹೆಚ್ಚು ಜನಸಂಖ್ಯೆಯ ಶಿರೂರ, ಅಮೀನಗಡ, ಕಮತಗಿ ಸ್ಮಾರ್ಟ್ ಪಟ್ಟಣವಾಗಿ ನಿರ್ಮಾಣ ಮಾಡಲಿದೆ. ಬಾಗಲಕೋಟೆಗೆ ಘೋಷಣೆಯಾಗಿರುವ ಸರ್ಕಾರಿ ವೈದ್ಯಕೀಯ ಕಾಲೇಜು ನಿರ್ಮಿಸಿ ಬಡ ಮಕ್ಕಳಗೆ ವೈದ್ಯಕೀಯ ಶಿಕ್ಷಣಕ್ಕೆ ಅವಕಾಶ ಕಲ್ಪಿಸಿಕೊಡಲಿದೆ. ರೈತರ ಹೊಲಗಳಿಗೆ ತ್ರಿಫೇಸ್ ವಿದ್ಯುತ್, ರೈತರ ಹೊಲಕ್ಕೂ ನೀರಾವರಿ ಸೌಲಭ್ಯ ಕಲ್ಪಿಸುವ ಗುರಿ ನಮ್ಮದಾಗಿದೆ ಎಂದರು.
ಮುಖಂಡ ಸಂತೋಷ ಹೊಕ್ರಾಣಿ ಮಾತನಾಡಿ, ಸ್ವಾಭಿಮಾನಿ ಕಾರ್ಯಕರ್ತರ ಪಡೆಗೆ, ಸ್ವಾಭಿಮಾನಿ ಜನ ಸೇರಿಕೊಳ್ಳುವ ಮೂಲಕ ಸ್ವಾಭಿಮಾನಿ ಪಡೆ ದಿನೇ ದಿನೇ ಗಟ್ಟಿಗೊಳಿಸುತ್ತಿದ್ದಾರೆ. ಕ್ಷೇತ್ರದೆಲ್ಲೆಡೆ ಬೆಂಬಲ ವ್ಯಕ್ತವಾಗುತ್ತಿದ್ದು, ಅಹಂಕಾರದ ನಾಯಕರಿಗೆ ಜನರು ತಕ್ಕ ಉತ್ತರ ನೀಡಲಿದ್ದಾರೆ. ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಅವರಿಗೆ ಬೆಂಬಲಿಸಿ ಎಂದು ಕೋರಿದರು. ಈ ವೇಳೆ ಬಸವರಾಜ ಕಟಗೇರಿ, ರವಿ ಕುಮಟಗಿ, ಅಶೋಕ ಮುತ್ತಿನಮಠ, ಅಶೋಕ ಮಹೇಂದ್ರಕರ, ನಾಗರಾಜ ಕೆರೂರ, ಸಚಿನ್ ಮರಿಶೆಟ್ಟಿ, ಸಂಜೀವ ಡಿಗ್ಗಿ, ಶ್ರೀಶೈಲ ಅಂಗಡಿ, ರಾಜು ಗೌಳಿ, ಅರುಣ ಲೋಕಾಪುರ, ಶಂಕರ ಮಗಜಿ, ವಿಶಾಲ ಮಾಂಡಗಿ, ಮುತ್ತು ಇದ್ದರು.
ಅಭಿವೃದ್ಧಿಗಾಗಿ ಆಟೋರಿಕ್ಷಾ ಬೆಂಬಲಿಸಿ
ಬಾಗಲಕೋಟೆ: ಕ್ಷೇತ್ರದ ಅಭಿವೃದ್ಧಿಯ ಚಿಂತನೆ ಇಲ್ಲದ ನಾಯಕನಿಂದ ಬಾಗಲಕೋಟೆ ಕ್ಷೇತ್ರ ಉದ್ಯೋಗ ಸೃಷ್ಟಿ ಸೇರಿ ವಿವಿಧ ಕಾರ್ಯಗಳಿಲ್ಲದೇ ಸಂಪೂರ್ಣ ಹಿಂದುಳಿದಿದೆ. ಹಾಗಾಗಿ ಈ ಬಾರಿ ಆಟೋರಿಕ್ಷಾ ಚಿಹ್ನೆಗೆ ಮತ ನೀಡುವ ಮೂಲಕ ಅಭಿವೃದ್ಧಿ ಕಾರ್ಯಕ್ಕೆ ಅವಕಾಶ ಕಲ್ಪಿಸಬೇಕು ಎಂದು ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಚರಂತಿಮಠ ಮನವಿ ಮಾಡಿದರು.
ವಿದ್ಯಾಗಿರಿಯ ರೂಪಲ್ಯಾಂಡ್, ಕೆಎಚ್‌ಬಿ ಕಾಲೋನಿ, ಬಸವ ನಗರದಲ್ಲಿ ಮನೆ-ಮನೆಗೆ ತೆರಳಿ ಪ್ರಚಾರ ನಡೆಸಿ ಮತಯಾಚಿಸಿ ಮಾತನಾಡಿದರು. ಬಾಗಲಕೋಟೆ ಕ್ಷೇತ್ರ ಉತ್ತರ ಕರ್ನಾಟಕದಲ್ಲೇ ಸೌಹಾರ್ದಯುತ ಹಾಗೂ ಮಾದರಿ ಕ್ಷೇತ್ರವಾಗಿ ನಿರ್ಮಿಸಲು ಸ್ವಾಭಿಮಾನಿ ಕಾರ್ಯಕರ್ತರು ಸಜ್ಜಾಗಿದ್ದು, ಇದಕ್ಕೆ ಕ್ಷೇತ್ರದ ಜನರ ಬೆಂಬಲ ಬೇಕಿದೆ. 3 ಬಾರಿ ಕ್ಷೇತ್ರಕ್ಕೆ ನಾಯಕರಾಗಿ ಆಯ್ಕೆ ಮಾಡಿದರೂ ಆಗದ ಅಭಿವೃದ್ಧಿ ಮರಳಿ ಅವರಿಗೆ ಆರಿಸಿ ತರುವುದರಿಂದ ಆಗುವುದಿಲ್ಲ. ಕ್ಷೇತ್ರದ ಅಭಿವೃದ್ಧಿ ಚಿಂತನೆಯ ಸ್ವಾಭಿಮಾನಿ ಕಾರ್ಯಕರ್ತರಿಗೆ ಮತದಾರರು ಅವಕಾಶ ನೀಡಬೇಕು. ಜನರ ಕಷ್ಟಗಳಿಗೆ ಸ್ಪಂದಿಸುವ ಗುಣ ಇಲ್ಲದ ಕ್ಷೇತ್ರದ ನಾಯಕನನ್ನಾಗಿ ಆರಿಸಿ ತಂದು ನಮ್ಮ ಕಾಲುಗಳ ಮೇಲೆ ನಾವೇ ಕಲ್ಲು ಹಾಕಿಕೊಂಡಂತಾಗಿದೆ. ಈ ಬಾರಿ ಊರೇ ಒಂದಾಗಿ ತಕ್ಕ ಪಾಠ ಕಲಿಸುತ್ತೇವೆ ಎಂದು ಹಳ್ಳಿಗಳಲ್ಲಿ ಜನ ಮಾತನಾಡುತ್ತಿದ್ದಾರೆ. ಸ್ವಾಭಿಮಾನಿಗಳಿಗೆ ಬೆಂಬಲ ನೀಡಿ ಸ್ವಾಭಿಮಾನಿಗಳ ಕ್ಷೇತ್ರವಾಗಿ ನಿರ್ಮಾಣ ಮಾಡೋಣ ಎಂದು ಧೈರ್ಯ ನೀಡುತ್ತಿದ್ದಾರೆ ಎಂದರು.
ಈ ವೇಳೆ ಅಶೋಕ ಸಾಳಿಂಕೆ, ವಿಜಯ ಮನಗೂಳಿ, ಶಂಕ್ರಯ್ಯಹಂಚಿನಮಠ, ವೀರೇಶ ಹಿರೇಮಠ, ಚರಣ ಜಾಧವ, ವಿಠ್ಠಲ ಕಾಳಬರ, ಈರಣ್ಣ ವಿಜಯಪುರ, ಹನಮಂತ ಕರಾಡೆ, ನಾಗರಾಜ ಕಾಂಬಳೆ, ಶಾಂತಾಬಾಯಿ ಗೋಣಿ, ವಿಜಯಲಕ್ಷ್ಮೀ ಅಂಗಡಿ, ಗಂಗಮ್ಮ ರಜಪೂತ, ಉಮಾ ಗವಿಮಠ, ಸುಭದ್ರಾ ದಶಮನಿ, ಸಂಗಮ್ಮ ನಾಶಿ, ರೇಖಾ ಮುರಡಿ ಇತರರಿದ್ದರು.
ಜನ ನಾಯಕನಾದವನು ತಳಮಟ್ಟದ ಜನರೊಂದಿಗೆ ಬೆರೆತು ಜನರಿಗೆ ಸ್ಪಂದಿಸುವ ಕೆಲಸ ಮಾಡಬೇಕು. ಆಗಲೇ ಉತ್ತಮ ನಾಯಕನಾಗಲು ಸಾಧ್ಯ. ಜನರಿಂದ ಆಯ್ಕೆಯಾಗುವ ಜನಪ್ರತಿನಿಧಿ ಗಳು, ಜನರನ್ನೇ ಭಯದಲ್ಲಿರುವಂತೆ ಮಾಡುತ್ತಾರೆ. ಅಂತಹ ವ್ಯಕ್ತಿಗಳಿಗೆ ಈ ಬಾರಿ ಸರಿಯಾದ ಉತ್ತರ ಕೊಡಲು ಬಾಗಲಕೋಟೆ ಜನತೆ ಸಜ್ಜಾಗಿದ್ದಾರೆ. –ಮಲ್ಲಿಕಾರ್ಜುನ ಚರಂತಿಮಠ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ
K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ
Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.