ಬಸವ ಜ್ಞಾನ ಗುರುಕುಲದ ಅಸ್ತಿತ್ವದ ಉಳಿವೆಗೆ ಸಹಕಾರ ಅಗತ್ಯ: ಗುರುಮಹಾಂತ ಸ್ವಾಮೀಜಿ


Team Udayavani, Dec 29, 2021, 7:17 PM IST

ಬಸವ ಜ್ಞಾನ ಗುರುಕುಲದ ಅಸ್ತಿತ್ವದ ಉಳಿವೆಗೆ ಸಹಕಾರ ಅಗತ್ಯ: ಗುರುಮಹಾಂತ ಸ್ವಾಮೀಜಿ

ರಬಕವಿ-ಬನಹಟ್ಟಿ: ಈಚೇಗೆ ನಿಧನರಾದ ಡಾ.ಈಶ್ವರ ಮಂಟೂರ ಹುನ್ನೂರು ಮಧುರಖಂಡಿಯಲ್ಲಿ ಸ್ಥಾಪಿಸಿದ ಬಸವ ಜ್ಞಾನ ಗುರುಕುಲ ಅಸ್ತಿತ್ವದಲ್ಲಿ ಉಳಿವೆಗೆ ಎಲ್ಲರ ಸಹಕಾರ ಮುಖ್ಯವಾಗಿದೆ. ಈ ಆಶ್ರಮವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಮಾಜದ ಜವಾಬ್ದಾರಿ ಬಹಳಷ್ಟಿದೆ ಎಂದು ಇಳಕಲದ ಚಿತ್ತರಗಿ ಸಂಸ್ಥಾನ ಮಠದ ಗುರುಮಹಾಂತ ಸ್ವಾಮೀಜಿ ತಿಳಿಸಿದರು.

ಅವರು ಸೋಮವಾರ ಸ್ಥಳೀಯ ಈಶ್ವರಲಿಂಗ ಮೈದಾನದಲ್ಲಿ ಈಚೇಗೆ ನಿಧನರಾದ ಹುನ್ನೂರು ಮಧುರಖಂಡಿಯ ಬಸವ ಜ್ಞಾನ ಗುರುಕುಲದ ಡಾ. ಈಶ್ವರ ಮಂಟೂರ ಅವರಿಗೆ ಹಮ್ಮಿಕೊಳ್ಳಲಾದ ನುಡಿ ನಮನ ಕಾರ್ಯಕ್ರಮ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಎಲ್ಲ ಸಮಾಜವನ್ನು ಕಟ್ಟಿಕೊಂಡು ಹೋಗುವ ಶಕ್ತಿ ಬಸವಣ್ಣನವರಿಗೆ ಮಾತ್ರ ಇತ್ತು. ಅಂಥ ಬಸವ ತತ್ವವನ್ನು ವಿಶ್ವದ ಅನೇಕ ದೇಶಗಳಲ್ಲಿ ಮತ್ತು ನಾಡಿನ ಮೂಲೆ ಮೂಲೆಗೂ ಹರಡಿದ ಕೀರ್ತಿ ಡಾ.ಮಂಟೂರ ಅವರಿಗೆ ಸಲ್ಲಬೇಕು. ಡಾ. ಈಶ್ವರ ಮಂಟೂರ ಜೀವಿಗಳ ಉದ್ಧಾರಕ್ಕಾಗಿ ನಿಸರ್ಗ ನಮಗೆ ನೀಡಿದ ಕೊಡುಗೆ ಎಂದು ಗುರುಮಹಾಂತ ಸ್ವಾಮೀಜಿ ತಿಳಿಸಿದರು.

ಇದೇ ಸಂದರ್ಭದಲ್ಲಿ ರಬಕವಿಯ ಗುರುದೇವ ಬ್ರಹ್ಮಾನಂದ ಆಶ್ರಮದ ಗುರುಸಿದ್ಧೇಶ್ವರ ಸ್ವಾಮೀಜಿ ಮಾತನಾಡಿ, ಡಾ.ಮಂಟೂರ ಅಪರೂಪದವರಲ್ಲಿ ಅಪರೂಪದವರಾಗಿದ್ದರು. ಯುವಕರದಲ್ಲಿ ಆಧ್ಯಾತ್ಮಿಕ ಚಿಂತನೆಯನ್ನು ಬೆಳೆಸುವಲ್ಲಿ ಡಾ. ಮಂಟೂರ ಅವರ ಪಾತ್ರ ವಿಶೇಷವಾಗಿತ್ತು. ಸರಳತೆ, ವಿನಯತೆ ಸಾಕಾರ ಮೂರ್ತಿಯಾಗಿದ್ದ ಅವರು ಬಸವ ತತ್ವದ ಹರಿಕಾರರಾಗಿದ್ದರು ಎಂದರು.

ಕಾರ್ಯಕ್ರಮದಲ್ಲಿ ಸ್ಥಳೀಯ ಹಿರೇಮಠದ ಶರಣಬಸವ ಶಿವಾಚಾರ್ಯರು, ಸಾಹಿತಿಗಳಾದ ಸಿದ್ಧರಾಜ ಪೂಜಾರಿ, ಮಲ್ಲಿಕಾರ್ಜುನ ಹುಲಗಬಾಳಿ, ಸುರೇಶ ಚಿಂಡಕ, ಡಾ.ಪದ್ಮಜೀತ ನಾಡಗೌಡಪಾಟೀಲ, ಶಂಕರ ಸೋರಗಾವಿ, ರವಿ ಯಡಹಳ್ಳಿ, ಕೆ.ಆರ್‍. ಮಹಾಲಿಂಗಪ್ಪ ಸೇರಿದಂತೆ ಅನೇಕರು ಮಾತನಾಡಿದರು.

ಶಿವಲೀಲಾ ಬರಗಲ್ ಪ್ರಾರ್ಥಿಸಿದರು. ಸದಾಶಿವ ಗಾಯಕವಾಡ ಸ್ವಾಗತಿಸಿದರು. ಡಾ.ಎನ್‍.ವಿ.ಅಸ್ಕಿ ನಿರೂಪಿಸಿದರು. ಡಾ.ಶಂಕರ ವಸ್ತ್ರದ ವಂದಿಸಿದರು.

ಕಾರ್ಯಕ್ರಮದಲ್ಲಿ ಗಂಗಪ್ಪ ಮಂಟೂರ, ಅಶೋಕ ವಸ್ತ್ರದ, ಶಂಕರ ಜಾಲಿಗಿಡದ, ಬ್ರಿಜ್ಮೋಹನ ಡಾಗಾ, ರವಿ ಬಾಡಗಿ, ಗುರುಸಿದ್ಧಪ್ಪ ಚನಾಳ, ಚಿದಾನಂದ ಮಟ್ಟಿಕಲ್ಲಿ, ಶಾಂತಾ ಸೋರಗಾವಿ, ಶೈಲಜಾ ನುಚ್ಚಿ, ಬಾಳವ್ವ ಮಾಲಾಪುರ ಸೇರಿದಂತೆ ಅನೇಕರು ಇದ್ದರು.

ಟಾಪ್ ನ್ಯೂಸ್

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-mudhol

Mudhol: ನಾರಿಯರ ಗಸ್ತುಕಾರ್ಯಕ್ಕೆ ಪೊಲೀಸ್ ಇಲಾಖೆ ಶ್ಲಾಘನೆ

Bagalakote: ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ ಮಹತ್ವದ ಒಪ್ಪಂದಕ್ಕೆ ಎಂ.ಆರ್.ಎನ್ ಸಮೂಹ ಸಹಿ

Bagalakote: ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ ಮಹತ್ವದ ಒಪ್ಪಂದಕ್ಕೆ ಎಂ.ಆರ್.ಎನ್ ಸಮೂಹ ಸಹಿ

11

Mudhol: ಅಂತಾರಾಜ್ಯ ಕಳ್ಳನ ಬಂಧನ; ಟ್ರ್ಯಾಕ್ಟರ್ ವಶ

4

Mudhol: ಮನೆ ಕಳ್ಳತನ; ದೂರು ದಾಖಲು

Mudhol: ನಗರದಲ್ಲಿ ಹೆಚ್ಚಿದ ಕಳ್ಳರ ಹಾವಳಿ… ಮಹಿಳಾ‌ಮಣಿಗಳಿಂದ ರಾತ್ರಿ‌ ಗಸ್ತು

Mudhol: ನಗರದಲ್ಲಿ ಹೆಚ್ಚಿದ ಕಳ್ಳರ ಹಾವಳಿ… ಮಹಿಳಾ‌ಮಣಿಗಳಿಂದ ರಾತ್ರಿ‌ ಗಸ್ತು

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.