![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Feb 5, 2022, 7:41 PM IST
ಕುಳಗೇರಿ ಕ್ರಾಸ್ (ಬಾಗಲಕೋಟೆ) : ಕನ್ನಡದ ಕಬಿರ, ಭಾವೈಕ್ಯ ಮಂದಾರ ಇಬ್ರಾಹಿಮ್ ಸುತಾರವರ ಪ್ರವಚನವನ್ನು ಕೇಳದಿರುವ ಮನಸ್ಸುಗಳು ಇಲ್ಲ. ಗೌರಿಶಂಕರ ಶಿಖರದಂತಹ ಶ್ರೇಷ್ಠ ವ್ಯಕ್ತಿತ್ವವನ್ನು ಹೊಂದಿದ ಸಂತರವರು ತಮ್ಮ ಪ್ರವಚನ ಮೂಲಕ ನಾಡಿನಲ್ಲಿ ಭಾವೈಕ್ಯ ಮಕರಂದವನ್ನು ಬೀರಿ ಸರ್ವಜನಾಂಗದ ಶಾಂತಿಯ ತೋಟದಂತಿರುವ ನಾಡಲ್ಲಿ ಮತ್ತಷ್ಟು ಪುಷ್ಟಿ ತಂದುಕೊಟ್ಟವರು ಎಂದು ಬೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಪೂಜ್ಯ ಶಾಂತಲಿಂಗ ಶ್ರೀಗಳು ನುಡಿದರು.
ದೊರೆಸ್ವಾಮಿ ವಿರಕ್ತಮಠದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಶರಣ ಇಬ್ರಾಹಿಮ್ ಸುತಾರ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಅವರ ಭಾವ ಚಿತ್ರಕ್ಕೆ ಪುಷ್ಪ ವೃಷ್ಠಿ ಮಾಡಿ ಗೌರವ ನಮನ ಸಲ್ಲಿಸಿ ಮಾತನಾಡಿದರು.
ಸುತಾರ ಅವರು ಭಾವೈಕ್ಯತೆಯ ಪ್ರಾರ್ಥನೆಗಳಿಂದ ಕೂಡಿದ ನಾವೆಲ್ಲ ಭಾರತೀಯರು ಎಂಬ ಕವನ ಸಂಕಲನವನ್ನು ಹೊರ ತರುವುದರ ಮೂಲಕ ಸಮಸ್ತ ಭಾರತೀಯರಲ್ಲಿ ಭಾರತೀಯತೆಯ ಭಾತೃತ್ವವನ್ನು ಎತ್ತಿ ಹಿಡಿದ ಮೇರು ವ್ಯಕ್ತಿಯಾಗಿದ್ದರು.
ಅವರ ಪ್ರವಚನಗಳಲ್ಲಿ ಕೇವಲ ಆದ್ಯಾತ್ತಿಕತೆ ಇರಲಿಲ್ಲ ಬದಲಾಗಿ ಸಮಾಜಪರ ಚಿಂತನೆಗಳು ಹಾಗೂ ಜನರಲ್ಲಿ ಜಾಗೃತಿ ಮೂಡಿಸುವಂತಹ ಅನೇಕ ವಿಚಾರಗಳು ಇರುತ್ತಿದ್ದವು. ಅವರ ಪ್ರವಚನದಿಂದ ರಸ್ತೆ, ದೇವಸ್ಥಾನ ಜಿರ್ಣೋದ್ಧಾರದಂತಹ ಅನೇಕ ಜನಪರ ಕಾರ್ಯಗಳಾಗಿದ್ದನ್ನು ಕಾರ ಬಹುದು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಶಿವಯ್ಯ ಹಿರೇಮಠ, ಕೊಣ್ಣೂರ ಕಲಾವಿದ ಖಾನಸಾಬ ಮಸೂತಿಮನಿ, ಚನ್ನಪ್ಪ ಚಿನಿವಾಲರ, ಭಗವಂತ ಮೊರಬದ, ಬಸಪ್ಪ ಸಂಗಳದ, ಶಿವಾನಂದ ಹಿರೇಮಠ ಸೇರಿದಂತೆ ಪ್ರಮುಖರು ಇದ್ದರು.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.